spot_img
Wednesday, March 25, 2026
spot_img

ಗ್ರಾಮ ಪಂಚಾಯತ್ ಹಕ್ಕೋತ್ತಾಯ ಆಂದೋಲನ ಸಕ್ರೀಯ ಕಾರ್ಯಕರ್ತ ಶ್ರೀನಿವಾಸ ಗಾಣಿಗ ಇನ್ನಿಲ್ಲ

ಕುಂದಾಪುರ: ಗ್ರಾಮ ಪಂಚಾಯತ್ ಹಕ್ಕೋತ್ತಾಯ ಆಂದೋಲನ ನಮ್ಮ ಭೂಮಿ ಕನ್ಯಾನ ಇದರ ಸಕ್ರಿಯ ಕಾರ್ಯಕರ್ತ, ಕುಂದಾಪುರ ತಾಲೂಕು ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಕನ್ಯಾನ (೬೮ವ) ರಸ್ತೆ ಅಪಘಾತದಲ್ಲಿ ಮಾ.24ರ ರಾತ್ರಿ ನಿಧನರಾದರು.

ಪಂಚಾಯತ್ ರಾಜ್ ವಿಷಯದಲ್ಲಿ ಅಪಾರವಾದ ಅನುಭವ ಹೊಂದಿದ್ದ ಇವರು ಕಾರ್ಯಕ್ರಮವೊಂದನ್ನು ಮುಗಿಸಿ ಮಂಗಳವಾರ ರಾತ್ರಿ ಏಳುವರೆ ಸುಮಾರಿಗೆ ಕುಂದಾಪುರದಿಂದ ತನ್ನ ಮನೆಯತ್ತ ಬೈಕ್‌ನಲ್ಲಿ ಹೊರಟಿದ್ದರು. ತಲ್ಲೂರು ಪ್ರವಾಸಿ ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿರುವಾದ ಎದುರುಗಡೆ (ರಾಂಗ್ ಸೈಡ್)ಯಿಂದ ಬರುತ್ತಿರುವ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದ ಶ್ರೀನಿವಾಸ ಗಾಣಿಗರ ತಲೆಗೆ ಗಂಭೀರ ಗಾಯವಾಗಿದ್ದು ಜೀವನ್ಮರಣದ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ.

ನಮ್ಮ ಭೂಮಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಪಂಚಾಯತ್ ರಾಜ್ ಹಕ್ಕೋತ್ತಾಯ ಆಂಧೋಲನದಲ್ಲಿ ಗುರುತಿಸಿಕೊಂಡಿದ್ದರು. ಮಕ್ಕಳ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ, ಮತದಾರರ ಜಾಗೃತಿ, ವಿವಿಧ ಮಾಹಿತಿ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದರು. ಪಂಚಾಯತ್ ರಾಜ್ ವಿಷಯದಲ್ಲಿ ರಾಜ್ಯಾದ್ಯಂತ ತಿರುಗಾಟ ಮಾಡಿದ್ದರು.

ಪಂಚಾಯತ್ ರಾಜ್ ಕೊಂಡಿಯಂತಿದ್ದ ಅವರು ಹಲವಾರು ರಾಜ್ಯಮಟ್ಟದ ಕಾರ್ಯಾಗಾರ, ಸಮ್ಮೇಳನ, ಸಮಾವೇಶಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಗಲಿರುಳು ಈ ವಿಷಯದಲ್ಲಿ ಕೆಲಸ ಮಾಡುತ್ತಿದ್ದರು. ಪಂಚಾಯತ್ ರಾಜ್ ಒಕ್ಕೂಟದಲ್ಲಿಯೂ ಕೂಡಾ ಸೇವೆ ಸಲ್ಲಿಸುತ್ತಿದ್ದರು.

ಸಮಾಜಮುಖಿ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡಿದ್ದ ಇವರು ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದರು. ಇವರ ಸೇವಾವಧಿಯಲ್ಲಿ ಹಲವಾರು ಮಹತ್ವಕಾಂಕ್ಷಿ ಕಾರ್ಯಕ್ರಮಗಳು ಜರುಗಿದ್ದವು. ಧಾರ್ಮಿಕ ಕ್ಷೇತ್ರದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದ ಇವರು ಸಂಪ್ರದಾಯ, ಆಚಾರ ವಿಚಾರ, ಸಂಸ್ಕೃತಿಯ ಬಗ್ಗೆ ಅಭಿಮಾನ ಹೊಂದಿದ್ದರು. ಯಕ್ಷಗಾನ ಅಭಿಮಾನಿಯಾಗಿ, ತಮ್ಮ ಮನೆಯಲ್ಲಿ ಪ್ರತಿವರ್ಷ ಯಕ್ಷಗಾನ ಬಯಲಾಟ ಆಯೋಜಿಸುತ್ತಾ ಬಂದಿದ್ದರು.

ಮೃತರು ಪತ್ನಿ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲಲಿತಾ ಶ್ರೀನಿವಾಸ ಗಾಣಿಗ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!