spot_img
Monday, March 23, 2026
spot_img

ರಾಧಿಕಾ ಎಸ್. ಅವರಿಗೆ ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರ

ಕುಂದಾಪುರ: ಶಿಕ್ಷಣ ಕ್ಷೇತ್ರದ ಸೇವೆಯೊಂದಿಗೆ ಸಾಹಿತ್ಯ, ರಂಗಭೂಮಿ, ತಾಳಮದ್ದಳೆ ಅರ್ಥಧಾರಿಯಾಗಿ, ಇನ್ಸ್ಪಯರ್ ಅವಾರ್ಡ್‌ಗೆ ತಯಾರಿ, ಪರಿಣಾಮಕಾರಿ ಬೋಧನೆಯಲ್ಲಿ ನಾವೀನ್ಯಗಳ ಅನುಷ್ಟಾನ, ಹೀಗೆ ಸರ್ವಾಂಗೀಣವಾಗಿ ಸದಾ ಚಟುವಟಿಕೆಯಿಂದ ಗುರುತಿಸಿಕೊಂಡಿರುವ ಅಮಾಸೆಬೈಲು ಡ್ಯುಯಲ್ ಸ್ಟಾರ್ ಶಾಲೆ ಮುಖ್ಯೋಪಾಧ್ಯಾಯಿನಿ ರಾಧಿಕಾ ಎಸ್ ರಾವ್ ಅವರಿಗೆ ಡಾ ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮೀನುಗಾರರು ಸಹಕಾರಿ ಸಂಘ, ಕೋಟ, ನೆನಪು ಮೂವೀಸ್, ಉಸಿರು ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರ ೨೦೨೬ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ಶಾಸ್ತ್ರಿ ವಹಿಸಿದ್ದರು. ವೇದಿಕೆಯಲ್ಲಿ ಆನಂದ.ಸಿ.ಕುಂದರ್ ಕಾರ್ಯಧ್ಯಕ್ಷರು, ಕಾರಂತ ಪ್ರತಿಷ್ಠಾನ ರಿ. ಕೋಟ, ಸುಶೀಲಾ ಸೋಮಶೇಖರ್, ಸುಮತಿ ಅಂಚನ್, ಯು.ಎಸ್.ಶೆಣೈ, ಸುಮನಾ ಹೇರ್ಳೆ, ಸತೀಶ್ ಕುಂದರ್ ಬಾರಿಕೇರಿ, ವಾಸು ಪೂಜಾರಿ ಉಪಸ್ಥಿತರಿದ್ದರು.

ಸತೀಶ್ ವಡ್ಡರ್ಸೆ ಸ್ವಾಗತಿಸಿದರು, ಸಾಧಕ ಸ್ತ್ರೀ ಪುರಸ್ಕಾರದ ಪಟ್ಟಿಯನ್ನು ನರೇಂದ್ರ ಕುಮಾರ್ ಕೋಟ ವಾಚಿಸಿದರು. ಇವರು ವಂದಿಸಿದರು, ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

ರಾಧಿಕಾ ಎಸ್. ರಾವ್ ಅವರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದು ಒಂದು ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಅನೇಕ ಲೇಖನ ಬರೆಹಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!