spot_img
Monday, March 23, 2026
spot_img

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆ

ಮುಂಬಯಿ : ಮಹಿಳಾ ಸದಸ್ಯರನ್ನು ಸಂಘಟನೆಯಲ್ಲಿ ಸಕ್ರಿಯಗೊಳಿಸಲು ನಮ್ಮ ಸಂಘದ ಮಹಿಳಾ ವಿಭಾಗ ಸಾಕಷ್ಟು ಶ್ರಮಿಸುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಂಡು ಅದರಲ್ಲಿ ಮಹಿಳೆಯರಿಗೆ ಉಪಯೋಗವಾಗುವ ಮಾಹಿತಿಯನ್ನು ನೀಡಿದರೆ ಆಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಇದರಿಂದ ಸಂಘಟನೆಯ ಬಲವರ್ಧನೆಯಾಗುತ್ತದೆ. ಇಂದು ಆಯೋಜಿಸಿದ ವೈದ್ಯಕೀಯ ಮಾಹಿತಿ ಶಿಬಿರ ಅದ್ಭುತವಾಗಿತ್ತು ನಮಗೆ ಅರಿವು ಇರದ ಅದೆಷ್ಟೋ ವಿಚಾರಗಳನ್ನು ಡಾ. ಅನಘಾ ಮತ್ತು ಡಾ. ಅಮಿತ್ ಇಂದು ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದ್ದಾರೆ ಎಂದು ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ ಇದರ ಅಧ್ಯಕ್ಷ ಸಂತೋಷ ಕೆ. ಪುತ್ರನ್ ನುಡಿದರು.

ಅವರು ಮಾ.22 ರಂದು ರವಿವಾರ ಸಂಜೆ ಥಾಣೆ ಪಶ್ಚಿಮದ ಸಿಲ್ವರಾಡೊರ್ ಬೊಟಿಕ್ ಹೊಟೇಲ್ ಇಲ್ಲಿ ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ ಇದರ ಮಹಿಳಾ ವಿಭಾಗ ಆಯೋಜಿಸಿರುವ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂತಹ ಮಾಹಿತಿ ಶಿಬಿರವನ್ನು ಆಯೋಜಿಸುವಾಗ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಒಟ್ಟುಗೂಡಿಸಲು ಪ್ರಯತ್ನಿಸಬೇಕು. ಪ್ರತಿಯೊಂದು ಸದಸ್ಯರಿಗೂ ಇದರ ಪ್ರಯೋಜನ ಲಭಿಸಬೇಕು ಅದು ಅಲ್ಲದೆ ಸದಸ್ಯರು ಕೂಡ ನಮ್ಮ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಇಂತಹ ಉಪಯುಕ್ತ ಮಾಹಿತಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು, ಸಮುದಾಯದ ಶ್ರೇಯೋಭಿವೃದ್ಧಿಯೇ ನಮ್ಮ ಗುರಿ ಎಂದರು.

ಗೌರವಾಧ್ಯಕ್ಷ ಸುರೇಶ ಕಾಂಚನ್ ಮಾತನಾಡುತ್ತಾ ನಾವು ಯೋಚಿಸದೆ, ಕೇಳದೆ ಇರುವ ಹಲವಾರು ವಿಚಾರಗಳನ್ನು ಡಾಕ್ಟರ್ ತಿಳಿಸಿ ಹೇಳಿದ್ದಾರೆ ಜೀವನದ ಅರ್ಥವೇನು ಹೇಗೆ ಇರಬೇಕು ನಮ್ಮ ಶರೀರದಲ್ಲಿ ಆಗುವ ಹಲವಾರು ಬದಲಾವಣೆಗಳ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನಾವು ಇಂದು ತಿಳಿದುಕೊಂಡೆವು ಸಮಾಜವನ್ನು ಒಟ್ಟುಗೂಡಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬೇಕು ನಾವು ನಮ್ಮನ್ನೆ ಕಳೆದುಕೊಳ್ಳುವಂತಾಗಬಾರದು ನಮ್ಮ ಸಮುದಾಯದ ಯಾವುದೇ ಕಾರ್ಯಕ್ರಮ ಅದು ಊರಲ್ಲಿರಲಿ ಅಥವಾ ಮುಂಬಯಿಯಲ್ಲಿರಲಿ ನಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಸುಚಿತ್ರಾ ಪುತ್ರನ್ ಮತನಾಡುತ್ತಾ ತುಂಬಾ ಸಮಯದ ನಂತರ ಭಾರತಿ ನಾಯ್ಕ ಅವರ ನೇತ್ರತ್ವದ ಬಲಿಷ್ಠವಾದ ಮಹಿಳಾ ತಂಡವನ್ನು ನೋಡಿ ಸಂತೋಷವಾಯಿತು. ಮಹಿಳೆಯರು ಕುಟುಂಬದ ಜವಬ್ದಾರಿ ನಿಭಾಯಿಸುತ್ತಾ ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ ಸ್ವಲ್ಪ ಸಮಯವನ್ನಾದರೂ ಸಮುದಾಯ ಸಂಘಟನೆಗೆ ನೀಡಬೇಕು ನಾವು ಪರಿವಾರದ ಬಗ್ಗೆ ಜಾಗೃತೆವಹಿಸುವ ಜೊತೆಗೆ ನಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು ಇಂದು ಹಲವಾರು ಉಪಯುಕ್ತ ವೈದ್ಯಕೀಯ ಸಲಹೆಗಳನ್ನು ಪಡೆದಿದ್ದೇವೆ ಇದೇ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಸಮುದಾಯದ ಮಹಿಳೆಯರನ್ನು ಒಗ್ಗೂಡಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವೈದ್ಯಕೀಯ ಮಾಹಿತಿ ಶಿಬಿರದಲ್ಲಿ ಡಾ. ಅನಘಾ ಕರ್ಖನಿಸ್ ಋತುಬಂಧ, ಸ್ಥೂಲಕಾಯ, ಹಾರ್ಮೋನ್, ದೇಹದಲ್ಲಾಗುವ ಬದಲಾವಣೆ ಮುಂತಾದ ವಿಚಾರಗಳ ಕುರಿತು ಮಹಿಳೆಯರ ಆರೋಗ್ಯದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರೆ ತ್ವಚಾ ಕ್ಲಿನಿಕ್ ಸಂಸ್ಥಾಪಕ ಹಾಗೂ ನಿರ್ದೇಶಕ ಡಾ. ಅಮಿತ್ ಕರ್ಖನಿಸ್ ಉಪನ್ಯಾಸ ನೀಡುತ್ತಾ ಕೂದಲು ಉದುರುವಿಕೆ, ತ್ವಚೆಯ ಹೊಳಪು ಹಾಗೂ ಬೊಜ್ಜು ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು.

ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ನಾಯ್ಕ ಮಾತನಾಡುತ್ತಾ ಮುಂಬರುವ ದಿನಗಳಲ್ಲಿ ನಮ್ಮ ಮಹಿಳಾ ವಿಭಾಗದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಇಂದಿನ ಕಾರ್ಯಕ್ರಮವು ಮಹಿಳೆಯರ ಒಂದು ಸಮತೋಲನವಾದ ತಂಡದ ಪರಿಶ್ರಮದಿಂದ ಹಾಗೂ ನಿಮ್ಮೆಲ್ಲರ ಸಹಕಾರದಿಂದ ಯಶಸ್ಸನ್ನು ಕಂಡಿದೆ. ಇದೊಂದು ಹೊಸ ಆರಂಭ ಎನ್ನಬಹುದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆಗೈಯುತ್ತಿದ್ದಾರೆ ಇನ್ನು ನಿಮ್ಮೆಲ್ಲರ ಸಹಕಾರ ನಿರಂತರವಾಗಿದ್ದರೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿ ಸಂಘಟನೆ ಬಲಪಡಿಸಲು ನಮ್ಮ ಮಹಿಳಾ ವಿಭಾಗವು ಶ್ರಮಿಸಲಿದೆ ಎಂದರು

ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘದ ಅಧ್ಯಕ್ಷ ಸಂತೋಷ ಪುತ್ರನ್ ಗೌರವಾಧ್ಯಕ್ಷ ಸುರೇಶ ಕಾಂಚನ್, ಮಾಜಿ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ ಹಾಗೂ ಮುಖ್ಯ ಅತಿಥಿಗಳು ಮತ್ತು ಸಂಘದ ಪದಾಧಿಕಾರಿಗಳು ದೀಪಾ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಮಹಿಳಾ ವಿಭಾಗದವರಿಂದ ಹಲವಾರು ಮನೋರಂಜನಾ ಕಾರ್ಯಕ್ರಮ ಜರಗಿದವು ಕಾರ್ಯಕ್ರಮದಲ್ಲಿ ಉಪಸ್ಥಿತ ಮಹಿಳೆಯರೆಲ್ಲರೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ನೃತ್ಯ ಮಾಡಿ ಸಂಭ್ರಮಿಸಿದರು

ಕುಲಮಾತೆ ಶ್ರೀ ಮಹಿಷಮರ್ಧಿನಿಗೆ ಪೂಜೆ ಸಲ್ಲಿಸಿದ ಮಹಿಳಾ ವಿಭಾಗವು ಪ್ರಾರ್ಥಿಸಿದರೆ ವನಿತಾ ತೋಳಾರ್ ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿದರು
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು, ವೈದ್ಯಕೀಯ ಶಿಬಿರ ನೆಡೆಸಿಕೊಟ್ಟ ಡಾ. ಅನಘಾ ಕರ್ಖನಿಸ್ ಮತ್ತು ಡಾ. ಅಮಿತ್ ಕರ್ಖನಿಸ್, ಸಂಘದ ಮುಖ್ಯ ಕಚೇರಿ ಮತ್ತು ವಿವಿಧ ಶಾಖೆಯ ಪದಾಧಿಕಾರಿಗಳನ್ನು, ಮನೋರಂಜನಾ ಕಾರ್ಯಕ್ರಮ ನೀಡಿದ ಸದಸ್ಯರನ್ನು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಸಂಘದ ಅಧ್ಯಕ್ಷ ಸಂತೋಷ ಪುತ್ರನ್ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ನಾಯ್ಕ ಪುಷ್ಪಗುಚ್ಛ ನೀಡಿ ಗೌರವಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷ ಸಂತೋಷ ಪುತ್ರನ್,ಗೌರವಾಧ್ಯಕ್ಷ ಸುರೇಶ ಕಾಂಚನ್,ಮಾಜಿ ಅಧ್ಯಕ್ಷ ಗೋಪಾಲ್ ಪುತ್ರನ್,ಡಾ. ಅನಘಾ ಕರ್ಖನಿಸ್,ಡಾ. ಅಮಿತ್ ಕರ್ಖನಿಸ್,ಮುಖ್ಯ ಅತಿಥಿಗಳಾದ ಯಶೋದಾ ಕಾಂಚನ್, ಸುಚಿತ್ರಾ ಪುತ್ರನ್,ಸುಧಾ ಪುತ್ರನ್, ಪ್ರಧಾನ ಕಾರ್ಯದರ್ಶಿ ಗಣೇಶ ಮೆಂಡನ್,ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ನಾಯ್ಕ, ಕಾರ್ಯದರ್ಶಿ ವಸಂತಿ ಕುಂದರ್, ಥಾಣೆ ಶಾಖೆಯ ಕಾರ್ಯಾಧ್ಯಕ್ಷ ಅವಿನಾಶ್ ಪುತ್ರನ್, ಮೀರಾರೋಡ್ ಶಾಖೆಯ ಕಾರ್ಯಾಧ್ಯಕ್ಷ ರಘುರಾಮ್ ಚಂದನ್ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಕಾರ್ಯದರ್ಶಿ ವಸಂತಿ ಕುಂದರ್ ಸರ್ವರನ್ನು ಸ್ವಾಗತಿಸಿ ಸಭಾ ಕಾರ್ಯಕ್ರಮ ನಿರ್ವಹಿಸಿದರೆ ಮನೋರಂಜನಾ ಕಾರ್ಯಕ್ರಮವನ್ನು ಶ್ಯಾಮಲ ಮೊಗವೀರ ಮತ್ತು ಶಾಂತಿ ಮೊಗವೀರ ನಿರ್ವಹಿಸಿದರು ಕೊನೆಯಲ್ಲಿ ರಾಧಾ ಮೆಂಡನ್ ವಂದಿಸಿದರು.ಗೌರವಾಧ್ಯಕ್ಷೆ ಡಾ. ಸುದೀಪಾ ಕುಂದರ್, ಕೋಶಾಧಿಕಾರಿ ಉಷಾ ತೋಳಾರ್ ಸದಸ್ಯೆಯರಾದ ನಿಶಾ ಮೆಂಡನ್,ಮೀನಾಕ್ಷಿ ಕಾಂಚನ್,ವೀಣಾ ಚಂದನ್, ಲಕ್ಷ್ಮೀ ಮೊಗವೀರ,ರಾಧಾ ಮೆಂಡನ್,ಹೇಮಾ ಪುತ್ರನ್,ಲೀಲಾ ಮೆಂಡನ್,ಚೈತ್ರಾ ಕುಂದರ್, ಪದ್ಮಾವತಿ ಮೊಗವೀರ, ರತ್ನಾ ನಾಯ್ಕ, ತಾರಾ ಬಂಗೇರ ಮತ್ತಿತರರು ಸಹಕರಿಸಿದರು.

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ ಇದರ ಮುಖ್ಯ ಕಚೇರಿಯ ಕೋಶಾಧಿಕಾರಿ ನಾಗರಾಜ್ ಶ್ರೀಯಾನ್, ಜೊತೆ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ನಾಯ್ಕ, ಅಶೋಕ ಮೆಂಡನ್, ಜೊತೆ ಕೋಶಾಧಿಕಾರಿ ಪ್ರವೀಣ್ ನಾಯ್ಕ, ಕ್ರೀಡಾ ಕಾರ್ಯದರ್ಶಿ ರಘುರಾಮ್ ಮೆಂಡನ್, ಸುನೀಲ್ ಕುಂದರ್, ಕಾಂಚನಿ ಕಲಾಕೇಂದ್ರದ ಕಾರ್ಯದರ್ಶಿ ಭಾಸ್ಕರ್ ಶ್ರೀಯಾನ್ ಮತ್ತು ಮುಖ್ಯ ಕಚೇರಿಯ ಸದಸ್ಯರು ಹಾಗೂ ವಿವಿಧ ಸ್ಥಳೀಯ ಶಾಖೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

(ಚಿತ್ರ-ವರದಿ : ಲಕ್ಷ್ಮಣ ಪೂಜಾರಿ ಕೊಡೇರಿ)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!