spot_img
Monday, March 9, 2026
spot_img

ಕುಂದಾಪುರದಲ್ಲಿ ಲೇಸರ್ ಚಿಕಿತ್ಸೆಯ ವೈದ್ಯಕೀಯ ಚಿಕಿತ್ಸಾಲಯ ‘ತ್ರಿನಯ’ ಉದ್ಘಾಟನೆ

ಕುಂದಾಪುರ: ವಿಜ್ಞಾನ ಹಾಗೂ ತಂತ್ರಜ್ಞಾನ ಮುಂದುವರೆಯುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಬೆಳೆಯುತ್ತಿರುವ ಕುಂದಾಪುರದಂತಹ ನಗರಕ್ಕೆ ಆಧುನಿಕ ತಂತ್ರಜ್ಞಾನ ಹೊಂದಿರುವ ಚರ್ಮ, ಕೂದಲು ಹಾಗೂ ಅಲಂಕಾರಿಕ ಚಿಕಿತ್ಸೆಗಳ ನುರಿತ ವೈದ್ಯಕೀಯ ವ್ಯವಸ್ಥೆಯ ಅಗತ್ಯವನ್ನು ಡಾ.ಅನುಷಾ ಶೆಟ್ಟಿ ಪೂರೈಸಿರುವುದು ಸಂತೋಷವಾಗಿದೆ ಎಂದು ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಕೇಕ್‌ವಾಲಾ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ಆರಂಭಿಸಲಾದ ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಚರ್ಮ, ಕೂದಲು, ಅಲಂಕಾರಿಕ ಚಿಕಿತ್ಸೆಗಳು ಹಾಗೂ ಲೇಸರ್ ಚಿಕಿತ್ಸೆಯ ವೈದ್ಯಕೀಯ ಚಿಕಿತ್ಸಾಲಯ ತ್ರಿನಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಚರ್ಮ ರೋಗ ತಪಾಸಣೆ ಹಾಗೂ ಚಿಕಿತ್ಸೆಗೆ ಅನುಭವಿ ಮಹಿಳಾ ವೈದ್ಯರು ದೊರಕಿರುವುದು ಸಂತೋಷದ ವಿಚಾರ. ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಕಾಯಿಲೆ ಉಲ್ಬಣವಾಗುವ ಮೊದಲೇ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕಾಸ್ಮೆಟಿಕ್ ಡರ್ಮಾಟೋ ಸರ್ಜರಿ ಚಿಕಿತ್ಸೆಗಳು ತುಂಬಾ ಉಪಯೋಗಕಾರಿ ಎಂದು ನುಡಿದರು.

ಡಾ.ಅನುಷಾ ಶೆಟ್ಟಿ, ಡಾ.ಕೃತನ್ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿಗಳಾದ ಹೆಚ್.ಜಯಶೀಲ ಶೆಟ್ಟಿ, ಬಿ.ಉದಯ್‌ಕುಮಾರ ಶೆಟ್ಟಿ, ಬಿ.ವಿನಯ್‌ಕುಮಾರ ಶೆಟ್ಟಿ, ಕೃಷ್ಣ ಶೆಟ್ಟಿ, ಮನೀಶ್ ಜೆ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಗೋಕುಲ್ ಶೆಟ್ಟಿ ಉಪ್ಪುಂದ, ಸಂಪತ್ ಕುಮಾರ ಶೆಟ್ಟಿ ಶಾನಾಡಿ, ಡಾ.ಅತುಲ್‌ಕುಮಾರ ಶೆಟ್ಟಿ ಉಪಸ್ಥಿತರಿದ್ದರು.

ಸೌಲಭ್ಯಗಳು :
ಲೇಸರ್ ಶಸ್ತ್ರಚಿಕಿತ್ಸೆ, ಡಯೋಡ್ ಲೇಸರ್, ಕೂದಲು ಕಡಿತ, ಚರ್ಮ ಗಟ್ಟಿಯಾಗಿಸುವ ಹೈಡ್ರಾಫೇಶಿಯಲ್ ಚಿಕಿತ್ಸೆ, ಚರ್ಮ ಪುನರುಜ್ಜೀವನ ಶಸ್ತ್ರಚಿಕಿತ್ಸೆಗಳು, ಮೋಲ್, ಸಿಸ್ಟ್ ಮತ್ತು ಲಿಪೋಮಾ ತೆಗೆಯುವಿಕೆ, ನೇಲ್ ಶಸ್ತ್ರಚಿಕಿತ್ಸೆ, ಗಾಯದ ಗುರುತು ಸರಿಪಡಿಸುವಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಒಳಗೊಂಡ ಚರ್ಮ, ಕೂದಲು ಮತ್ತು ಅಲಂಕಾರಿಕ ಚಿಕಿತ್ಸೆಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!