spot_img
Saturday, February 28, 2026
spot_img

ಹೆಂಗವಳ್ಳಿ: ಹೋಳಿ ರಂಗಮಂದಿರದ ನೆಲಹಾಸು ಉದ್ಘಾಟನೆ

ಹಾಲಾಡಿ: ಹೆಂಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡುಬಿ ಸಮಾಜದ ಹೋಳಿ ಹಬ್ಬದ ಅಗತ್ಯ ಆಚರಣೆಗೆ ಬೇಕಾಗಿರುವ ಹೋಳಿ ಕುಣಿತಕ್ಕೆ ರಂಗಮಂದಿರ ಮತ್ತು ಕಾರ್ಯಕ್ರಮಕ್ಕೆ ಆಗಮಿಸುವಂತಹ ವ್ರತಾದಾರಿಗಳಿಗೆ ಶೌಚಾಲಯದ ವ್ಯವಸ್ಥೆಯನ್ನು ಹೋಳಿ ಕೂಡುಕಟ್ಟು ಸಮಿತಿ ಹೆಂಗವಳ್ಳಿ-ತೊಂಭತ್ತು ಇಲ್ಲಿ ಅದರ ಕೊರತೆಯನ್ನು ಕಂಡು. ಸಮಿತಿಯು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಮನವಿ ಮಾಡಿದ್ದು. ಶಾಸಕರ ಶಿಫಾರಸಿನ ಮೇರೆಗೆ ಹಾಗೂ ಹೆಂಗವಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹೋಳಿ ರಂಗಮಂದಿರಕ್ಕೆ ನೆಲಹಾಸು ರಚನೆ ಹಾಗೂ ಎರಡು ಉತ್ತಮ ಗುಣಮಟ್ಟದ ಶೌಚಾಲಯ ರಚನೆಗೆ ಸುಮಾರು ಮೂರು ಲಕ್ಷ 90 ಸಾವಿರ ಹಣವನ್ನು ನೈರ್ಮಲೀಕರಣ ಅಡಿಯಲ್ಲಿ ರಚಿಸಲಾಗಿದ್ದು. ಇದರ ಉದ್ಘಾಟನೆಯನ್ನು ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ನಾಗರಾಜ್ ನಾಯ್ಕ ಹೆಂಗವಳ್ಳಿ, ಹೋಳಿ ಕೂಡು ಕಟ್ಟು ಒಕ್ಕೂಟದ ಅಧ್ಯಕ್ಷ ಬಾಬಣ್ಣ ಅಂಕ್ರಾಲು, ಸ್ಥಳೀಯ ಧಾರ್ಮಿಕ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ ಬೆಳ್ವೆ, ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಹಾಗೂ ರಘುರಾಮ್ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಮಡಿವಾಳ್, ಪಂಚಾಯಿತಿ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ಒಕ್ಕೂಟದ ಸದಸ್ಯ.ಮಕ್ಕಳ ಮಿತ್ರ ಕಾಳು ನಾಯಕ್ ಎಲ್ಸಿ ಮನೆ, ಚಂದ್ರ ನಾಯ್ಕ ಹಾಗೂ ಸಮುದಾಯದ ನೂರಾರು ವ್ರತಾಧಾರಿ ವೇಷದಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!