spot_img
Saturday, February 28, 2026
spot_img

ನಮ್ಮೊಳಗಿನ ಗುರಿ ಗಟ್ಟಿಯಾಗಿದ್ದಾಗ ಯಶಸ್ಸು ಸಾಧ್ಯ-ಪ್ರಕಾಶ ತುಮಿನಾಡು

ಮೂಡ್ಲಕಟ್ಟೆ ಎಂಐಟಿಯಲ್ಲಿ ಯುವ-2026 ಉದ್ಘಾಟನೆ
ಕುಂದಾಪುರ: ಸೋಲು-ಗೆಲುವು ಸ್ಪರ್ಧೆಗಳಲ್ಲಿ ಸಹಜ. ಸೋಲೆ ಗೆಲುವಿನ ಮೆಟ್ಟಿಲು. ವಿದ್ಯಾರ್ಥಿಗಳಲ್ಲಿ ನಿಶ್ಚಿತವಾದ ಗುರಿ ಇರಬೇಕು. ನಮ್ಮೊಳಗಿನ ಗುರಿ ಗಟ್ಟಿಯಾಗಿದ್ದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಪ್ರಸಿದ್ಧ ಚಿತ್ರನಟ ಪ್ರಕಾಶ ತುಮಿನಾಡು ಹೇಳಿದರು.

ಅವರು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ನಡೆದ ರಾಜ್ಯ ಮಟ್ಟದ ಅಂತರ್ ಕಾಲೇಜು ಮ್ಯಾನೇಜ್‍ಮೆಂಟ್ ಮತ್ತು ಕಲ್ಚರಲ್ ಫೆಸ್ಟ್ ‘ಯುವ-2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾನು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ನನ್ನ 40ನೇ ವರ್ಷದಲ್ಲಿ. 20 ವರ್ಷಗಳ ಕಾಲ ಸೂಕ್ತ ಅವಕಾಶಕ್ಕಾಗಿ ಕಾದಿದ್ದೆ. ಕಾಯುವಿಕೆಯ ತಾಳ್ಮೆ ಇದ್ದಾಗ ಯಶಸ್ಸು ನಮಗೆ ಸಿಗುತ್ತದೆ. ಇವತ್ತು ನನಗೆ ಹೆಸರು, ಕೀರ್ತಿ ದೊರೆಕಿದೆ. ಅದಕ್ಕೆ ಕಾರಣ ನೀವು. ಅಭಿಮಾನಿಗಳ ಪ್ರೋತ್ಸಾಹದಿಂದ ನಮ್ಮಂಥ ಕಲಾವಿದರು ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.

ಐಎಂಜೆ ಇನ್ಸ್ಟಿಟ್ಯೂಟ್ ಶೈಕ್ಷಣಿಕ ನಿರ್ದೇಶಕರಾದ ಡಾ.ಎಸ್.ಎನ್ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ತರಗತಿಯೊಳಗಿನ ಶಿಕ್ಷಣದ ಜೊತೆಯಲ್ಲಿ ಸಾಂಸ್ಕøತಿಕ ವಿಕಸನ, ವ್ಯವಹಾರ ಕೌಶಲ್ಯ, ನಾಯಕತ್ವ, ಸೃಜನಾತ್ಮಕ ಚಟುವಟಿಕೆಗಳಿಗೆ ಒತ್ತನ್ನು ಸಂಸ್ಥೆ ನೀಡುತ್ತಾ ಬಂದಿದೆ. ವಿಶ್ವದ ಬೇಡಿಕೆಯನ್ನು ಅರ್ಥಮಾಡಿಕೊಳ್ಳಬೇಕು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು, ಶಿಕ್ಷಣ ವಿದ್ಯಾರ್ಥಿಯ ಸರ್ವಾಂಗೀಣ ವಿಕಾಸಕ್ಕೆ ಕಾರಣವಾಗಬೇಕು ಎನ್ನುವ ನೆಲೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಕಾಲೇಜು ಪ್ರಾಂಶುಪಾಲರಾದ ಡಾ.ರಾಮಕೃಷ್ಣ ಹೆಗಡೆ ಮಾತನಾಡಿ, 2004ರಲ್ಲಿ ಐ.ಎಂ.ಜಯರಾಮ ಶೆಟ್ಟಿಯವರ ನೇತೃತ್ವದಲ್ಲಿ ಇಲ್ಲಿ ಇಂಜಿನಿಯರಿಂಗ್ ಕಾಲೇಜು ಆರಂಭವಾಯಿತು. 2008ರಲ್ಲಿ ಎಂಬಿಎ ಆರಂಭವಾಯಿತು. 18 ವರ್ಷಗಳಿಂದ ಇಲ್ಲಿ ಎಂಬಿಎ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇವತ್ತು ವಿಶ್ವದ ಬೇರೆ ಬೇರೆ ಕಡೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸಿದ್ದಾರ್ಥ ಜೆ.ಶೆಟ್ಟಿಯವರು ಸಂಸ್ಥೆಯ ಚೇರ್‍ಮೆನ್ ಆಗಿ ಮುನ್ನೆಡೆಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಕಾಶ ತುಮಿನಾಡು ಅವರನ್ನು ಸನ್ಮಾನಿಸಲಾಯಿತು. ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ.ಸುಚಿತ್ರಾ ಡಿ.ಪೂಜಾರಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರೇರಣಾ ಮತ್ತು ತಂಡ ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿನಿ ಶಾಂಭವಿ ಆಚಾರ್ಯ ಹಾಗೂ ಅದಿತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಅಂತರ್ ಕಾಲೇಜು ಮ್ಯಾನೇಜ್ ಮೆಂಟ್ ಹಾಗೂ ಕಲ್ಚರಲ್ ಸ್ಪರ್ಧೆಗಳು ನಡೆದವು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!