spot_img
Friday, February 27, 2026
spot_img

ಎನ್ನೆಸ್ಸೆಸ್ ಶಿಬಿರದಲ್ಲಿ ‘ಪುರಾಣ ಮತ್ತು ಮೌಲ್ಯಗಳು’ ವಿಷಯದ ಕುರಿತು ಉಪನ್ಯಾಸ

ಕುಂದಾಪುರ: ಪುರಾಣಗಳು ಕೇವಲ ಪೌರಾಣಿಕ ಕಥೆಗಳಲ್ಲ; ಅವು ಮೌಲ್ಯಪೂರ್ಣ ಜೀವನ ನಡೆಸಲು
ಮಾರ್ಗದರ್ಶನ ನೀಡುವ ಗ್ರಂಥಗಳು. ಇಂದಿಗೂ ಪುರಾಣಗಳು ಸಾರ್ವಕಾಲಿಕ ಮೌಲ್ಯವನ್ನು ಒಳಗೊಂಡಿವೆ. ವಿದ್ಯಾರ್ಥಿಗಳು ಪುರಾಣ
ಗ್ರಂಥಗಳನ್ನು ಅಧ್ಯಯನ ಮಾಡುವುದು ವರ್ತಮಾನದ ತುರ್ತು ಎಂದು ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಇಲ್ಲಿನ
ಕನ್ನಡ ಉಪನ್ಯಾಸಕರಾದ ಉದಯ್ ಕುಮಾರ್ ಶೆಟ್ಟಿ ಕಾಳಾವರ ಅವರು ತಿಳಿಸಿದರು.

ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇವರು ರಾಷ್ಟಿಯ ಸೇವಾ ಯೋಜನಾ
ಘಟಕದ ಆಶ್ರಯದಲ್ಲಿ ಯಡಾಡಿ-ಮತ್ಯಾಡಿಯಲ್ಲಿ ನಡೆಸಿದ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಪುರಾಣ ಮತ್ತು ಮೌಲ್ಯಗಳು’ಎಂಬ
ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಶ್ರೀ ಕರುಣಾಕರ್ ಹೆಗ್ಡೆ ಆನಗಳ್ಳಿ ಅವರು
ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕೆ. ಉಮೇಶ್ ಶೆಟ್ಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ,
ಯಡಾಡಿ ಇದರ ಪ್ರಾಂಶುಪಾಲರಾದ ಶ್ರೀಮತಿ ಶೈಲಾ, ಸ.ಹಿ. ಪ್ರಾ. ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಂ.ಸಿ. ಸದಸ್ಯರಾದ
ಮಂಜುನಾಥ,  ದೀಕ್ಷಿತ್ ಶೆಟ್ಟಿ ಕ್ಯಾಸನಮಕ್ಕಿ ಉದ್ಯಮಿಗಳು,  ಮಧುಕರ್ ಮಣಿಯಾಡಿ, ಉದ್ಯಮಿಗಳು ಮೊಳಹಳ್ಳಿ,
ಎನ್.ಎಸ್.ಎಸ್. ಶಿಬಿರಾಧಿಕಾರಿ  ರಾಜೇಶ್ ಶೆಟ್ಟಿ ವಕ್ವಾಡಿ ಮತ್ತು ಪೂಜಾ ಕುಂದರ್ ಉಪಸ್ಥಿತರಿದ್ದರು.

ಎನ್.ಎಸ್.ಎಸ್. ಸ್ವಯಂಸೇವಕರಾದ ಸೌಜನ್ಯ ಸ್ವಾಗತಿಸಿ, ನಾಗರತ್ನ ಅತಿಥಿ ಪರಿಚಯಿಸಿ, ಗಣಪತಿ ವಂದಿಸಿ, ಶ್ರೇಯಾ
ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!