spot_img
Saturday, November 28, 2026
spot_img

ಪಿ‌ಎಂಶ್ರೀ ಕೆಪಿ‌ಎಸ್ ಶಾಲೆ ತೆಕ್ಕಟ್ಟೆಯಲ್ಲಿ ಕರಾವಳಿ ನಿರ್ದಿಗಂತ ತಂಡದಿಂದ ನಾಟಕ ರೂಪಕ ಕಲಾಭಿನಯ

ತೆಕ್ಕಟ್ಟೆ: ಪ್ರಕಾಶ್ ರಾಜ್ ಫೌಂಡೇಶನ್ ಸಾರಥ್ಯದಲ್ಲಿ ಕರಾವಳಿ ನಿರ್ದಿಗಂತದ ತಂಡವು ಪಿ‌ಎಂಶ್ರೀ ಕೆಪಿ‌ಎಸ್ ಶಾಲೆ ತೆಕ್ಕಟ್ಟೆಯಲ್ಲಿ ಪ್ರೌಢಶಾಲೆಯ ಕನ್ನಡ ಭಾಷಾ ಪಠ್ಯಕ್ರಮ ಆಧಾರಿತ ಓದುವ ಆಟ ಎಂಬ ನಾಟಕ ರೂಪಕ ಕಲಾಭಿನಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು. ಇಂತಹ ಹಲವಾರು ನಾವಿನ್ಯಪೂರ್ಣ ಪ್ರಯೋಗದ ಹರಿಕಾರ ಗಣೇಶ ಮಂದಾರ್ತಿಯವರ ಸಂಗೀತ ಸಂಯೋಜನೆ, ವರ್ಣ ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಭಾರ ಉಪಪ್ರಾಂಶುಪಾಲರಾದ ಶ್ರೀಮತಿ ಸಿಂತಿಯ ಪಿರೇರಾರವರು ಉದ್ಘಾಟಿಸಿ, ನಾಟಕವು ಮಕ್ಕಳನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯುವ ಸಾಧನ, ಇದರಿಂದ ಮಕ್ಕಳು ಮನರಂಜನೆಯ ಜೊತೆಗೆ ಪಾಠವನ್ನು ಕಲಿಯಲು ಅನುಕೂಲವಾಗುತ್ತದೆ ಎಂದರು . ಹಿರಿಯ ಶಿಕ್ಷಕರಾದ ಶ್ರೀ ಅಶೋಕ್ ಸೋಮಯಾಜಿಯವರು ಸ್ವಾಗತಿಸಿ, ತಾವು ಬೆಳೆಯುವ ಜೊತೆಗೆ ಮಕ್ಕಳನ್ನು ಬೆಳೆಸುತ್ತಿರುವ ಸಂಸ್ಥೆಯಾದ ನಿರ್ದಿಗಂತದ ಪ್ರಯತ್ನವನ್ನು ಶ್ಲಾಘಿಸಿದರು.  ಗಣೇಶ ಮಂದಾರ್ತಿಯವರು ಕಾರ್ಯಕ್ರಮದ ಔಚಿತ್ಯದ ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದರು. ಧಮನಿ ರಿ. ತೆಕ್ಕಟ್ಟೆ ಶ್ರೀಶ ತೆಕ್ಕಟ್ಟೆ ರವರು ಕಾರ್ಯಕ್ರಮದ ಸಂಯೋಜನೆಯಲ್ಲಿ ನೆರವಾದರು.

ನಿರ್ದಿಗಂತ ತಂಡವು ಶ್ರೀನಿವಾಸ ಉಡುಪರ ’ಕಂಬಳಿ ಹುಳು ಮತ್ತು ಚಿಟ್ಟೆ’ ಎಂಬ ಕವಿತೆಯ ಮಾರ್ಮಿಕ ಅಭಿನಯನದೊಂದಿಗೆ ಓದುವ ಆಟವನ್ನು ಪ್ರಾರಂಭಿಸಿದರು. ಜೈನ ಪರಂಪರೆಯ ಬಾಹುಬಲಿಯ ಕಥೆಯನ್ನು ಸಾರುವ ’ನನ್ನ ಹಾಗೆಯೇ’ ಪದ್ಯ, ಮಗ್ಗದ ಸಾಹೇಬ, ಹಕ್ಕಿಗಳು ನಾವು ,ಕುಮಾರವ್ಯಾಸ ಭಾರತದ ಉತ್ತರನ ಪೌರುಷ, ಬೆಟಗೇರಿ ಕೃಷ್ಣ ಶರ್ಮರ ಕಳ್ಳರ ಗುರುಪಾಠ ಸೇರಿದಂತೆ ಹಳೆಗನ್ನಡ, ನಡುಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಾಹಿತ್ಯವನ್ನು ಒಳಗೊಂಡ ನಾಟಕ ರೂಪಕಗಳು ಮಕ್ಕಳ ಎದಿರು ಮನರಂಜನೆಯ ಜೊತೆಗೆ ಸುಲಲಿತ, ಸಂತಸ ಕಲಿಕೆಯ ಹೊಸ ಆಯಾಮವನ್ನು ತೆರೆದಿಟ್ಟಿತು. ನಾಟಕದಲ್ಲಿ ನುರಿತ ತಂಡದ ಸದಸ್ಯರ ಅದ್ಬುತ ಹಾಗೂ ಪರಿಣಾಮಕಾರಿ ನಟನಾ ಕೌಶಲ್ಯವು ಎಲ್ಲರ ಮೆಚ್ಚುಗೆಯ ಮನ್ನಣೆ ಗಳಿಸಿ, ವೇದಿಕೆಯಲ್ಲಿ ಹೊಸ ಝಲಕನ್ನು ಮೂಡಿಸಿತು. ನಾಟಕದುದ್ದಕ್ಕೂ ಬಳಸಲಾದ ಸರಳ ವಸ್ತ್ರವಿನ್ಯಾಸ, ಆಕರ್ಷಕ ಸಂಗೀತ ಸಂಯೋಜನೆ, ಸುಲಭ ಪದಗಳ ಬಳಕೆ, ನವರಸಗಳ ಮಿಲಿತ ಭಾವಾಭಿನಯ ಮಕ್ಕಳ ಮನಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿತು.

ಈ ಸಂದರ್ಭದಲ್ಲಿ ಸಹ ಶಿಕ್ಷಕರು, ಬಿ‌ಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!