spot_img
Saturday, November 28, 2026
spot_img

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು: ‘ಮಕ್ಕಳ ಸಂತೆ’ ಬ್ಯುಸಿನೆಸ್ ಡೇ

ಗಂಗೊಳ್ಳಿ: ಮಕ್ಕಳಲ್ಲಿ ಸೃಜನಶೀಲತೆ, ಸಂವಹನ ಕೌಶಲ, ಉಳಿತಾಯದ ಮಹತ್ವ ಮತ್ತು ಆರ್ಥಿಕ ವ್ಯವಹಾರದ ಅರಿವು ಮೂಡಿಸುವಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿ. ಮಕ್ಕಳಲ್ಲಿ ವ್ಯವಹಾರ ಜ್ಞಾನ, ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿರುವ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ವಸ್ತುಗಳ ಬೆಲೆ ನಿಗದಿಪಡಿಸುವುದು, ಗ್ರಾಹಕರೊಂದಿಗೆ ವ್ಯವಹರಿಸುವುದು ಹಾಗೂ ಹಣದ ಲೆಕ್ಕಾಚಾರ ಮಾಡುವ ಮೂಲಕ ಮಕ್ಕಳು ಪ್ರಾಯೋಗಿಕ ಅನುಭವ ಪಡೆಕೊಳ್ಳಬೇಕು ಎಂದು ಉದ್ಯಮಿ ಉಮೇಶ ಎಲ್.ಮೇಸ್ತ ಹೇಳಿದರು.

ಜಿ. ಎಸ್. ವಿ. ಎಸ್.ಅಸೋಸಿಯೇಶನ್ ಗಂಗೊಳ್ಳಿ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ವಠಾರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಕ್ಕಳ ಸಂತೆ ಬ್ಯುಸಿನೆಸ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕೋಟೇಶ್ವರದ ಉದ್ಯಮಿ ಸಹನಾ ಸುರೇಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಜಹೀರ್ ಅಹಮ್ಮದ್ ನಾಕುದಾ, ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಸಂಚಾಲಕ ಎನ್.ಸದಾಶಿವ ನಾಯಕ್, ಕನ್ನಡ ಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲ ಗೋಪಾಲ ದೇವಾಡಿಗ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು.

ನಾಟಿ ವೈದ್ಯ ಚಿಕಿತ್ಸಕಿ ಇಸ್ರುಮನೆ ಅಮ್ಮು ಪೂಜಾರ್‍ತಿ, ಕಲಾವಿದ ಪಾಂಡುರಂಗ ಮಡಿವಾಳ, ದೇಹದಾರ್ಢ್ಯ ಪಟು ಗುರುದೀಪಕ ಕಾಮತ್, ಸಾಹಿತಿ ಸುಮತಿ ಶೆಣೈ, ಉರಗ ಸಂರಕ್ಷಕರಾದ ಗಣೇಶ ಮಡಿವಾಳ, ಗುರುರಾಜ್ ಗಂಗೊಳ್ಳಿ, ಮಡಿ ನಾಗರಾಜ ಖಾರ್ವಿ, ಪ್ರದೀಪ ಮುನ್ನ, ಅಂಚೆಪೇದೆಗಳಾದ ಶಶಿಕಲಾ ಮತ್ತು ಶ್ವೇತಾ ಅವರನ್ನು ಗೌರವಿಸಲಾಯಿತು.

ಉಪನ್ಯಾಸಕಿ ಅಕ್ಷಯಾ ಆರ್.ಖಾರ್ವಿ ಸ್ವಾಗತಿಸಿ, ಥಾಮಸ್ ಪಿ.ಎ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರೇಂದ್ರ ಎಸ್.ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಪವಿತ್ರಾ ವಂದಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ವೈವಿಧ್ಯಮಯ ಉತ್ಪನ್ನಗಳು ಮತ್ತು ಆಹಾರ ತಿನಿಸುಗಳ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದರು. ಅವತಾರ್, ಯಮಲೋಕ, ಅಜ್ಜಿಮನೆ, ನರ್ಸರಿ ಹಾಗೂ ಭಿನ್ನ ಆಟಗಳು ಮಕ್ಕಳ ಸಂತೆಯ ಪ್ರಮುಖ ಆಕರ್ಷಣೆಯಾಗಿತ್ತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!