spot_img
Tuesday, March 24, 2026
spot_img

ಕೋಟದ ಹಿರೇಮಹಾಲಿಂಗೇಶ್ವರ ಜಾತ್ರೋತ್ಸವದಲ್ಲಿ ಪಂಚವರ್ಣದಿಂದ ಸ್ವಚ್ಛತಾ ಕಾರ್ಯ, ಪ್ರಶಂಸೆ

ಕೋಟ:  ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಕೋಟ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸಂಚರಿಸಿ ಅಮೃತೇಶ್ವರೀ ದೇಗುಲವನ್ನು ಸಮೀಪಿಸಿ ಪುನಹ ದೇಗುಲವನ್ನು ಸಂದರ್ಶಿಸಿತು. ಈ ವೇಳೆ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡದ ಪದಾಧಿಕಾರಿಗಳು, ಸದಸ್ಯರು ಹೆದ್ದಾರಿ ಉದ್ದಕ್ಕೂ ಕುಡಿಯುವ ನೀಡಿನ ಬಾಟಲ್ ಹಾಗೂ ಮಜ್ಜಿಗೆ ಪ್ಲಾಸ್ಟಿಕ್ ತೊಟ್ಟೆಯನ್ನು ತೆರವುಗೊಳಿಸಿದರು.ಈ ಕಾರ್ಯಕ್ಕೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್,ಕೋಟ ಹಿರೇಮಹಾಲಿಂಗೇಶ್ವರ ದೇಗುಲದ ಮಾಜಿ ಟ್ರಸ್ಟಿ ಜಡ್ಡಾಡಿ ವಿಜಯ ಕುಮಾರ್ ಶೆಟ್ಟಿ,ಉದ್ಯಮಿ ಸೀತಾರಾಮ ಆಚಾರ್ ಒಗ್ಗೂಡಿ ಚಾಲನೆ ನೀಡಿದರು.

ಸ್ವಚ್ಛತಾ ತಂಡವನ್ನು ಶ್ಲಾಘಿಸಿದ ಠಾಣಾಧಿಕಾರಿ ದಾರಿ ಉದ್ದಕ್ಕೂ ಸ್ವಚ್ಛತಾ ಕಾರ್ಯನಡೆಸುತ್ತಿದ್ದ ಪಂಚವರ್ಣದ ಪದಾಧಿಕಾರಿಗಳನ್ನು ಕೋಟ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್, ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರಭಾಕರ್ ದೇವಾಡಿಗ ಸಾಥ್ ನೀಡಿ ತಂಡದ ಸದಸ್ಯರನ್ನು ಕೈ ಕುಲುಕಿ ಅಭಿನಂದಿಸಿದರು.

ಸ್ವಚ್ಛತಾ ಕಾರ್ಯದಲ್ಲಿ ದಂಪತಿಗಳು ಭಾಗಿ.
ಪಂಚವರ್ಣದ ಈ ಸ್ವಚ್ಛತಾ ಕಾರ್ಯದಲ್ಲಿ ಮಣಿಪಾಲದ ಎಂ.ಐಟಿ ಸಹಾಯಕ ಪ್ರಾಧ್ಯಾಪಕ ವಿಜೇಂದ್ರ ಪ್ರಭು,ಗಾಯಿತ್ರಿ ಕಾಮತ್ ದಂಪತಿಗಳು ಭಾಗಿಯಾದರು.

ಕೋಟ ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್, ಉಪಾಧ್ಯಕ್ಷ ಸಂತೋಷ್ ಪೂಜಾರಿ, ಕಾರ್ಯಾಧ್ಯಕ್ಷ ಶಶಿಧರ ತಿಂಗಳಾಯ, ಸದಸ್ಯರಾದ ಮಹೇಶ್ ಬೆಳಗಾವಿ, ಕೃಷ್ಣ ಕಾಂಚನ್, ರವೀಂದ್ರ ಕೋಟ, ಅಭಿಷೇಕ್ ಕಾಸನಗುಂದು, ಸಿದ್ಧಾರ್ಥ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ವಿಶಾಲ, ಅರ್ಚಕ ಯುವ ಸಂಘಟನೆಯ ಸದಸ್ಯರು ಪಾಲ್ಗೊಂಡರು.

ಕೋಟದ ಹಿರೇಮಹಾಲಿಂಗೇಶ್ವರ ಜಾತ್ರೋತ್ಸವದಲ್ಲಿ ಪಂಚವರ್ಣ ಸಂಘಟನೆಯಿಂದ ಸ್ವಚ್ಛತಾ ಕಾರ್ಯ ಜರಗಿತು. ಕೋಟ ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್, ಉಪಾಧ್ಯಕ್ಷ ಸಂತೋಷ್ ಪೂಜಾರಿ, ಕಾರ್ಯಾಧ್ಯಕ್ಷ ಶಶಿಧರ ತಿಂಗಳಾಯ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!