spot_img
Wednesday, March 4, 2026
spot_img

ಸಿದ್ದಾಪುರ ಏತ ನೀರಾವರಿ ಯೋಜನೆ: ಹೋರಿಯಬ್ಬೆ ಡ್ಯಾಮ್ ಕೆಳಭಾಗದ ರೈತರಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

ಕುಂದಾಪುರ: ವಾರಾಹಿ ನದಿಯ ಮೂಲ ಉದ್ದೇಶ ಬಿಟ್ಟು ಅನೇಕ ಯೋಜನೆಗಳು ಜಾರಿಯಾಗಿ ಕಾರ್ಯರೂಪಕ್ಕೆ ಬರುತ್ತಿರುವುದರಿಂದ ವಾರಾಹಿ ನದಿ ಮೂಲಕ್ಕೆ ಕೊಡಲಿಯೇಟು ಬೀಳುತ್ತಿದೆ ಎಂದು ಆತಂಕಿಸಿ ಹೋರಿಯಬ್ಬೆ ಡ್ಯಾಮ್ ಕೆಳ ಭಾಗದ ರೈತರ ಹಿತ ಕಾಪಾಡುವ ಹಿತದೃಷ್ಟಿಯಿಂದ ಡ್ಯಾಮ್ ಕೆಳ ಭಾಗದ ರೈತರು ಮುಖ್ಯಮಂತ್ರಿ, ಹಾಗೂ ಉಪ ಮುಖ್ಯಮಂತ್ರಿ (ಜಲ ಸಂಪನ್ಮೂಲ ಸಚಿವರು) ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬಹುಕೋಟಿ ವೆಚ್ಚದ ಸಿದ್ದಾಪುರ ಏತ ನೀರಾವರಿ ಯೋಜನೆಯ ಜಾಕ್ವೆಲ್ (3×850 ಅಶ್ವಶಕ್ತಿ) ಮೋಟಾರ್ ಎಲ್ಲಿ ಅಳವಡಿಸುವುದು ಎಂಬ ಕುರಿತು ಹೋರಿಯಬ್ಬೆ ಡ್ಯಾಮ್ ಕೆಳಭಾಗದ ರೈತರು ಚಿಂತಿತರಾಗಿದ್ದು, ಉದ್ದೇಶಿತ ಏತ ನೀರಾವರಿ ಜಾಕ್ವೆಲ್ ಹೋರಿಯಬ್ಬೆ ಡ್ಯಾಮ್ ಒಳಗಡೆ ಅಳವಡಿಸಿದರೆ, ಕೆಳಭಾಗದ ವಾರಾಹಿ ಮೂಲ ನದಿ ಬರಡಾಗಲಿದ್ದು ಇದನ್ನೇ ನಂಬಿದ ಅಸಂಖ್ಯಾತ ರೈತರು ಹಾಗೂ ಎಡ ದಂಡೆ ಕಾಲುವೆ ಹಾಗೂ ಅದರ ಉಪ ಕಾಲುವೆ ನೀರನ್ನು ಉಪಯೋಗಿಸುವ ೧೮ ಸಾವಿರ ಹೆಕ್ಟೇರ್ ಕೃಷಿ ಭೂಮಿಯ ರೈತರು ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗಿ ಬೀದಿಗೆ ಬೀಳಲಿದ್ದಾರೆ, ಹಾಗೂ ಹೊಳೆ ಶಂಕರನಾರಾಯಣ ದೇಗುಲದ ಮೂಲ ಉದ್ಭವ ಶಿವಲಿಂಗವು ನದಿಯ ನದಿಯ ಮಧ್ಯದಲ್ಲಿದ್ದು ಜಲ ಕ್ಷಾಮ ಉಂಟಾಗಿ ನೀರಿಲ್ಲದೆ ಸೊರಗಬೇಕಾಗುತ್ತದೆ ಎಂದು ಮನವರಿಕೆ ಮಾಡಿದರು.

ಸಿದ್ದಾಪುರ ಏತ ನೀರಾವರಿ ಕಾಮಗಾರಿ ನಿಲ್ಲಬಾರದು ಆದರೆ ಜಾಕ್ವೆಲ್‌ನ್ನು ಹೋರಿಯಬ್ಬೆ ಡ್ಯಾಮ್ 600 ಮೀಟರ್ ಕೆಳಭಾಗದಲ್ಲಿ ಹರಿಯುವ ನದಿಗೆ ಅಳವಡಿಸಿ ಕಾರ್ಯಗತಗೊಳಿಸಿ, ಮೂಲ ನದಿಗೆ ದಕ್ಕೆ ತರಬಾರದೆಂದು ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿಟ್ಟೆ ರಾಜಗೋಪಾಲ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಗಣಪತಿ. ಟಿ. ಶ್ರೀಯಾನ್, ಬಸ್ರೂರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಮೆಂಡನ್, ರಾಘವೇಂದ್ರ ನೆಂಪು, ಉಮೇಶ ಪೂಜಾರಿ ಬಸ್ರೂರು, ಅರುಣ್ ಮಡಿವಾಳ ಬಳ್ಕೂರು ಮುಂತಾದವರು ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಿದರು.

ಅಹವಾಲನ್ನು ಆಲಿಸಿದ ಜಲ ಸಂಪನ್ಮೂಲ ಸಚಿವರು ಕೂಡಲೇ ತಜ್ಞರ ಸಮಿತಿ ಕಳುಹಿಸಿ ಡ್ಯಾಮ್ ಕೆಳ ಭಾಗದ ರೈತರ ಹಿತ ಕಾಪಾಡುವುದಾಗಿ ಭರವಸೆ ನೀಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!