spot_img
Thursday, March 5, 2026
spot_img

ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂ ಐ ಟಿ ಕೆ ವಿದ್ಯಾರ್ಥಿನಿ ಗೀತಾಂಜಲಿ ಸಾಧನೆ

ಕುಂದಾಪುರದ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನ ವಿದ್ಯಾರ್ಥಿನಿ ಗೀತಾಂಜಲಿ ಶಿವಗೊಂಡ ಚೌಗಲಾ ಅವರು  ಮಲೇಷ್ಯಾದ ಕೌಲಾಲಂಪುರ್ ನಗರದಲ್ಲಿ ಅದ್ಧೂರಿಯಾಗಿ ನಡೆದ ಅತಿ ದೊಡ್ಡ ಯುವ ನಾಯಕತ್ವ ಸಮ್ಮೇಳನಗಳಲ್ಲಿ ಒಂದಾದ AYIMUN–2025 ನಲ್ಲಿ ಭಾರತವನ್ನು ಪ್ರತಿನಿಧಿಸಿದರು.
ಈ ಸಮ್ಮೇಳನಕ್ಕೆ ಭಾರತದಿಂದ ಕೇವಲ ಏಳು ವಿದ್ಯಾರ್ಥಿಗಳು ಮಾತ್ರ ಆಯ್ಕೆಗೊಂಡಿದ್ದು, ಅವರಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಗೌರವ ಗೀತಾಂಜಲಿಗೆ ದೊರಕಿದೆ. ಅವರ ಆಯ್ಕೆ ಶೈಕ್ಷಣಿಕ ಸಾಮರ್ಥ್ಯ ಹಾಗೂ ಸಂಶೋಧನಾ ಲೇಖನ  ಆಧಾರದ ಮೇಲೆ ನಡೆಯಿತು.
ಸಮ್ಮೇಳನದ ವೇಳೆ ಅವರು  ಚುರುಕಿನ ಪಾತ್ರವಹಿಸಿ, ಜಾಗತಿಕ ಆರ್ಥಿಕತೆ, ತಾಂತ್ರಿಕ ಅಭಿವೃದ್ಧಿ ಹಾಗೂ ವಿಜ್ಞಾನ–ಆಧಾರಿತ ಸಂಶೋಧನೆಯ ಪ್ರಾಮುಖ್ಯತೆ ಕುರಿತ ವಿಚಾರಗಳನ್ನು ವಿಶ್ಲೇಷಣೆಮಾಡಿ ಮಂಡಿಸಿದರು. ಈ ಮಂಡಳಿಯ ಚರ್ಚೆಯಲ್ಲಿ ಅತ್ಯುತ್ತಮ ಪ್ರಸ್ತುತಿ ಹಾಗೂ ವಾದ–ವಿವಾದದ ಕೌಶಲ್ಯ ಪ್ರದರ್ಶಿಸಿದಕ್ಕಾಗಿ ಅವರಿಗೆ “ಬೆಸ್ಟ್ ಡೆಲಿಗೇಟ್”  ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅವರ ವಿಜ್ಞಾನಾಧಾರಿತ ಚಿಂತನೆ, ತಾರ್ಕಿಕ ವಿಶ್ಲೇಷಣೆ ಮತ್ತು ನವೀನ ಆವಿಷ್ಕಾರಗಳತ್ತ ಇರುವ ಆಸಕ್ತಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಅವರು ವಿಶ್ವದ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಭವಿಷ್ಯದ ವಿಜ್ಞಾನ, ಸಂಶೋಧನೆ ಹಾಗೂ ತಾಂತ್ರಿಕ ನವೀಕರಣಗಳ ಕುರಿತು ಅಭಿಪ್ರಾಯ ವಿನಿಮಯ ನಡೆಸಿದರು.
ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಛೇರ್ಮನ್ ರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿಯವರು, ಪ್ರಾಂಶುಪಾಲರು, ಪ್ರಾಚಾರ್ಯರು ಅವರ ಈ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.
“ನಮ್ಮ ವಿದ್ಯಾರ್ಥಿನಿಯು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಬೌದ್ಧಿಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಇದು ಕಾಲೇಜಿನ ಹೆಮ್ಮೆಯ ಕ್ಷಣ” ಎಂದು ಅಭಿನಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!