spot_img
Saturday, March 7, 2026
spot_img

ಕ.ರಾ.ರ.ಸಾ.ನಿಗಮದ ಪ್ರತಿಷ್ಠಿತ ವಾಹನಗಳ ಪ್ರಯಾಣ ದರ ಕಡಿತ

ಉಡುಪಿ : ಕ.ರಾ.ರ.ಸಾ.ನಿಗಮದ ಮಂಗಳೂರು ವಿಭಾಗದಿಂದ ಕುಂದಾಪುರ, ಉಡುಪಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆಯಾಗುವ ವಿವಿಧ ಮಾದರಿಯ ಪ್ರತಿಷ್ಠಿತ ವಾಹನಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಶೇ. 10 ರಿಂದ 15 ರ ವರೆಗೆ ಪ್ರಯಾಣದರಗಳನ್ನು ಕಡಿಮೆಗೊಳಿಸಲಾಗುತ್ತಿದ್ದು, ಜನವರಿ 5 ರಿಂದ ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಕುಂದಾಪುರದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಕುಂದಾಪುರಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವು ಅಂಬಾರಿ ಉತ್ಸವ ಸಾರಿಗೆಯಲ್ಲಿ 1510 ರೂ., ಡ್ರೀಮ್‍ಕ್ಲಾಸ್ ಸಾರಿಗೆಯಲ್ಲಿ 1350 ರೂ., ಮಲ್ಟಿ ಆಕ್ಸಿಲ್ 2.0 ಸಾರಿಗೆಯಲ್ಲಿ 1310 ರೂ., ಮಲ್ಟಿ ಆಕ್ಸಿಲ್ ಸಾರಿಗೆಯಲ್ಲಿ 1110 ರೂ., ನಾನ್ ಎಸಿ ಸ್ಲೀಪರ್‍ನಲ್ಲಿ 1050 ರೂ., ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ನಲ್ಲಿ 1100 ರೂ. ಹಾಗೂ ರಾಜಹಂಸ ಸಾರಿಗೆಯಲ್ಲಿ 750 ರೂ.ಗಳು.

ಉಡುಪಿಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಉಡುಪಿಗೆ ಒಟ್ಟು ಪ್ರಯಾಣ ದರವು ಪ್ರತಿ ಪ್ರಯಾಣಿಕರಿಗೆ ಅಂಬಾರಿ ಉತ್ಸವ ಸಾರಿಗೆಯಲ್ಲಿ 1460 ರೂ., ಡ್ರೀಮ್‍ಕ್ಲಾಸ್ ಸಾರಿಗೆಯಲ್ಲಿ 1300 ರೂ., ಮಲ್ಟಿ ಆಕ್ಸಿಲ್ 2.0 ಸಾರಿಗೆಯಲ್ಲಿ 1250 ರೂ., ಮಲ್ಟಿ ಆಕ್ಸಿಲ್ ಸಾರಿಗೆಯಲ್ಲಿ 1060 ರೂ., ನಾನ್ ಎಸಿ ಸ್ಲೀಪರ್‍ನಲ್ಲಿ 1000 ರೂ., ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ನಲ್ಲಿ 1060 ರೂ. ಹಾಗೂ ರಾಜಹಂಸ ಸಾರಿಗೆಯಲ್ಲಿ 700 ರೂ.ಗಳು.

ಮಂಗಳೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವು ಅಂಬಾರಿ ಉತ್ಸವ ಸಾರಿಗೆಯಲ್ಲಿ 1350 ರೂ., ಡ್ರೀಮ್‍ಕ್ಲಾಸ್ ಸಾರಿಗೆಯಲ್ಲಿ 1200 ರೂ., ಮಲ್ಟಿ ಆಕ್ಸಿಲ್ 2.0 ಸಾರಿಗೆಯಲ್ಲಿ 1150 ರೂ., ಮಲ್ಟಿ ಆಕ್ಸಿಲ್ ಸಾರಿಗೆಯಲ್ಲಿ 1000 ರೂ., ನಾನ್ ಎಸಿ ಸ್ಲೀಪರ್‍ನಲ್ಲಿ 900 ರೂ., ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ನಲ್ಲಿ 950 ರೂ. ಹಾಗೂ ರಾಜಹಂಸ ಸಾರಿಗೆಯಲ್ಲಿ 650 ರೂ.ಗಳನ್ನು ವಿಧಿಸಲಾಗುವುದು ಎಂದು ಮಂಗಳೂರು ಕ.ರಾ.ರ.ಸಾ.ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!