spot_img
Wednesday, March 4, 2026
spot_img

ವಿಶ್ವ ಕುಂದಾಪುರ ಪುಸ್ತಕ ಪ್ರದರ್ಶನ | ಭಂಡಾರ್ಕಾರ್‍ಸ್ ಕಾಲೇಜ್ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ

ಕುಂದಾಪುರ: ಡಿಸೆಂಬರ್ 6ರ ಶನಿವಾರ ಶೆರೋನ್ ಸಭಾಂಗಣದಲ್ಲಿ ನಡೆದ ಕುಂದಾಪುರ ಭಂಡಾರ್ಕಾರ್‍ಸ್ ಕಾಲೇಜ್‌ನ 1984-85ನೇ ಸಾಲಿನ ಬಿ.ಕಾಂ. ಪದವೀಧರ ಸ್ನೇಹಿತರ 40ನೇ ವರ್ಷದ ಸ್ನೇಹ ಮಿಲನದ ಅಂಗವಾಗಿ ಪತ್ರಕರ್ತ-ಲೇಖಕ ವಿಶ್ವ ಕುಂದಾಪುರ ಅವರ ‘ಸಾಹಿತ್ಯ ಕೃಷಿ ಪಕ್ಷಿನೋಟ’ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿಶ್ವ ಅವರ ಪ್ರಕಟಗೊಂಡಿರುವ ಎಲ್ಲ 20 ಸ್ವತಂತ್ರ, ಅನುವಾದ ಮತ್ತು ಸಂಪಾದಿತ ಕನ್ನಡ, ಕೊಂಕಣಿ ಮತ್ತು ಇಂಗ್ಲಿಷ್ ಕೃತಿಗಳನ್ನು ಪ್ರದರ್ಶಿಸಲಾಯಿತು.

ಭಂಡಾರ್ಕಾರ್ ಕಾಲೇಜ್‌ನ ಪ್ರಾಕ್ತನ ವಿದ್ಯಾರ್ಥಿ ಇಷ್ಟೊಂದು ಕೃತಿ ರಚನೆ ಮಾಡಿರುವುದು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಪುಸ್ತಕ ಪ್ರದರ್ಶನ ವೀಕ್ಷಿಸಿದ ವಾಣಿಜ್ಯ ವಿಭಾಗದ ಮಾಜಿ ಮುಖ್ಯಸ್ಥ, ಪ್ರಾಧ್ಯಾಪಕ ಮೋಹನ್‌ದಾಸ್ ಪೈ ಮತ್ತು ಗ್ರಂಥಪಾಲಕ ಕೆ. ಆನಂದ್ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭ ಕುಂದಾಪುರದ ಜನಪ್ರತಿನಿಧಿ ಪ್ರಕಾಶನ ಪ್ರಕಟಿಸಿದ್ದ ವಿಶ್ವ ಕುಂದಾಪುರ ಅವರ ‘ಕರ್ನಾಟಕ ಸ್ಟುಡೆಂಟ್ಸ್ ಇನ್ ಫ್ರೀಡಂ ಮೂವ್‌ಮೆಂಟ್’ ಇಂಗ್ಲಿಷ್ ಕೃತಿಯನ್ನು ಸಹಪಾಠಿಗಳಿಗೆ ಸ್ಮರಣಿಕೆಯಾಗಿ ವಿತರಿಸಲಾಯಿತು. ಪ್ರತಿಭೋತ್ಸವದಲ್ಲಿ ವಿಶ್ವ, ಕಾಲೇಜ್ ಜೀವನದ ಸವಿನೆನಪುಗಳನ್ನು ಮೆಲುಕು ಹಾಕುವ ಸ್ವರಚಿತ ಕವನ ವಾಚನ ಮಾಡಿದರು.

‘ರೇಡಿಯೋ ಕುಂದಾಪ್ರ’ದಲ್ಲಿ ‘ದರ್ಶನ’ದ ಸ್ಮರಣೆ:
ಕಾರ್ಯಕ್ರಮದ ಭಾಗವಾಗಿ 4 ದಶಕದ ಹಿಂದೆ ತಾವು ಓದಿ ಓಡಾಡಿದ ಕಾಲೇಜ್‌ನ ತಮ್ಮ ತಮ್ಮ ತರಗತಿಗಳಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭೇಟಿ ನೀಡಿದರು. ಕಾಲೇಜ್‌ನಲ್ಲಿ ಸ್ಥಾಪನೆಯಾಗಿರುವ ‘ರೇಡಿಯೋ ಕುಂದಾಪ್ರ’ ಸಮುದಾಯ ಬಾನುಲಿ ಕೇಂದ್ರಕ್ಕೂ ತೆರಳಿ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ಕಾಲೇಜ್‌ನ ‘ದರ್ಶನ’ ವಾರ್ಷಿಕ ಸಂಚಿಕೆಗಳು ಅಮೂಲ್ಯ ವೇದಿಕೆಯಾಗಿ ತನ್ನ ಬರೆವಣಿಗೆ, ಸಾಹಿತ್ಯಕ್ಕೆ ಗಟ್ಟಿ ಅಡಿಪಾಯ ಹಾಕಲು ನೆರವಾದವು ಎಂದು ವಿಶ್ವ ಕುಂದಾಪುರ ಸ್ಮರಿಸಿಕೊಂಡರು.

ಸ್ನೇಹ ಮಿಲನದ ಸಂಘಟಕರಾದ ಕೃಷ್ಣಾನಂದ ಛಾತ್ರ, ರಾಜೀವ್ ಕೋಟ್ಯಾನ್, ಪ್ರಭಾಕರ ಕುಂಭಾಶಿ, ಜಗನ್ನಾಥ ಪುತ್ರನ್, ಓಝ್ಲಿನ್ ರೆಬೆಲ್ಲೊ, ವಿನಯ ಪಾಯಸ್, ಮೀರಾ ಆಚಾರ್ಯ ಮೊದಲಾದವರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!