spot_img
Monday, March 9, 2026
spot_img

ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ಭಾಗಿಯಾಗುವುದರಿಂದ ಪುಣ್ಯಫಲ-ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು

 

ಹೇರಂಬಾಪುರ ಅಗ್ರಹಾರ ವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಶಿಲಾನ್ಯಾಸ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಡಿ.5: ದೇವಭೂಮಿ ಎನಿಸಿಕೊಂಡಿರುವ ಈ ಸುಂದರ ಪ್ರಕೃತಿ ನಡುವೆ ಇರುವ ಈ ಗಣಪತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ದೇವಾಲಯಗಳನ್ನು ದೇಹಕ್ಕೆ ಹೋಲಿಸಲಾಗಿದೆ. ನಮ್ಮ ದೇಹದ ಒಂದು ಭಾಗಕ್ಕೆ ನೋವು ಉಂಟಾದಾಗ ಅದು ಇಡೀ ದೇಹಕ್ಕೆ ಬಾಧಿಸುತ್ತದೆ. ಆಗ ನಾವು ಅದರ ಪರಿಹಾರಕ್ಕೆ ಮುಂದಾಗುತ್ತೇವೆ. ಅಂತೆಯೇ ಊರಿನ ದೇವಸ್ಥಾನಗಳು ಜೀರ್ಣವಸ್ಥೆ ತಲುಪಿದಾಗ ಅದರ ಪರಿಣಾಮ ಊರಿನ ಮೇಲೆ ಆಗುತ್ತದೆ. ಆಗ ಗ್ರಾಮದ ಸ್ಥಾಸ್ಥ್ಯ ಕಾಪಾಡಲು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಮಾಡಬೇಕಾಗುತ್ತದೆ. ಜೀರ್ಣೋದ್ಧಾರದ ಪುಣ್ಯ ಕಾರ್ಯದಲ್ಲಿ ತನುಮನಧನದ ಮೂಲಕ ಭಾಗವಹಿಸುವ ಮೂಲಕ ದೇವರ ಅನುಗ್ರಹ ಪಡೆಯಲು ಸಾಧ್ಯವಾಗುತ್ತದೆ ಎಂದು ಕಾಸರಗೋಡು ಜಿಲ್ಲೆಯ ಶ್ರೀಮದೆಡನೀರು ಮಠ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಅವರು ಡಿ.೫ ಶುಕ್ರವಾರ ಕುಂದಾಪುರ ತಾಲೂಕು ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಹೇರಂಬಾಪುರ ಅಗ್ರಹಾರ ವಿನಾಯಕ ದೇವಸ್ಥಾನ ಕಾಡಿನಕೊಂಡ ಇಲ್ಲಿ ಶ್ರೀ ದೇವಳದ ಗರ್ಭಗುಡಿಯ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.

ವಿಘ್ನಹರ್ತ, ವಿಘ್ನ ನಿವಾರಕನಾದ ಗಣಪತಿಯನ್ನು ಶ್ರದ್ದಾಭಕ್ತಿಯಿಂದ ಆರಾಧಿಸುವುದರಿಂದ ಇರ್ಷ್ಟಾರ್ಥ ಈಡೇರುವಿಕೆ, ಪ್ರಥಮ ಪೂಜೆಯ ಮೂಲಕ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತದೆ. ಹಾಗಾಗಿ ಗಣಪತಿಗೆ ವಿಶೇಷವಾದ ಸ್ಥಾನವಿದೆ. ಹೇರಂಬಾಪುರದ ಈ ಗಣಪತಿ ಸನ್ನಿಧಾನದ ಜೀರ್ಣೋದ್ಧಾರ ಕಾರ್ಯ ನಿಗದಿತ ಸಮಯಕ್ಕೂ ಮೊದಲೇ ನಡೆಯಲಿ. ಎಲ್ಲ ಭಕ್ತರಿಗೂ ತನುಮನಧನ ಸಹಾಯ ನೀಡುವ ಶಕ್ತಿಯನ್ನು ಗಣಪತಿ ಅನುಗ್ರಹಿಸಲಿ ಎಂದರು.

ಕೂಡಿಡುವ ಸಂಪತ್ತು ಶಾಶ್ವತವಲ್ಲ, ಇಂಥಹ ಧಾರ್ಮಿಕ ಪ್ರಕ್ರಿಯೆಗಳಿಗೆ ವಿನಿಯೋಗಿಸುತ್ತಾ ಇರಬೇಕು. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ತನ್ನ ದುಡಿಮೆಯ ಬಹುಪಾಲನ್ನು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಿಗೆ ನೀಡುತ್ತಾ ಬರುತ್ತಿದ್ದಾರೆ. ಅವರ ಅರ್ಪಣಾ ಮನೋಭಾವ ಮಾದರಿಯಾಗಿದೆ ಎಂದು ಶ್ರೀಗಳು ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಶ್ರೀ ಕ್ಷೇತ್ರ ಪರಿಚಯ ಪತ್ರ ಅನಾವರಣಗೊಳಿಸಿ ಮಾತನಾಡಿ, ಕಾಡಿನಕೊಂಡದ ನಡುವೆ ಇರುವ ಈ ಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪುಣ್ಯಕಾರ್ಯದಲ್ಲಿ ಭಾಗಿಯಾಗುವ ಭಾಗ್ಯ ನಮಗೆ ಸಿಕ್ಕಿದೆ. ಇದನ್ನು ಭಾಗ್ಯವೆಂದು ಸದುಪಯೋಗಪಡಿಸಿಕೊಳ್ಳೋಣ. ಪ್ರಕೃತಿ ನಮಗೆ ಎಲ್ಲವನ್ನು ಕೊಟ್ಟಿದೆ. ಅದನ್ನು ಹಣಕೊಟ್ಟು ಖರೀದಿಸಲು ಸಾಧ್ಯವಿಲ್ಲ. ಶುದ್ಧ ಆಮ್ಲಜನಕ ಸಿಗುತ್ತಿರುವ ಇಂಥಹ ಪ್ರಕೃತಿದತ್ತ ಪ್ರದೇಶಗಳಲ್ಲಿ ಇರುವ ದೇವತಾ ಸಾನಿಧ್ಯಗಳ ಅಭಿವೃದ್ಧಿಯಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ. ಪ್ರತಿಯೊಬ್ಬರೂ ತಮ್ಮಿಂದ ಸಾಧ್ಯವಾದ ಸೇವೆಯನ್ನು ಸಲ್ಲಿಸೋಣ. ಸಮರ್ಪಣಾ ಭಾವದಿಂದ ಗಣಪತಿಯ ಸೇವೆ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ.ಆದರ್ಶ ಹೆಬ್ಬಾರ್ ಮಾತನಾಡಿ, ಈ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸ್ವಾಮೀಜಿಗಳಿಂದ ಶಿಲಾನ್ಯಾಸಗೊಂಡಿದೆ. ಕೃಷ್ಣಮೂರ್ತಿ ಮಂಜರು ಗರ್ಭಗುಡಿ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದಾರೆ. ಉಳಿದಂತೆ ಮಹಾನೀಯರ ಸಹಕಾರಿಂದ ನಿಗದಿತ ಸಮಯಕ್ಕೆ ದೇವಸ್ಥಾನ ಲೋಕಾರ್ಪಣೆಗೊಳ್ಳಲಿದೆ. ಅಲ್ಲಿಗೆ ನಮ್ಮ ಜವಬ್ದಾರಿಗಳು ಮುಗಿಯುವುದಿಲ್ಲ, ದೇವಸ್ಥಾನಗಳು ಸಮಾಜಮುಖಿಯಾಗಿರಬೇಕು. ಎಡನೀರು ಮಠ ಇವತ್ತು ಯಕ್ಷಗಾನಕ್ಕೆ ವಿಶೇಷ ಸಹಕಾರ ನೀಡುವ ಮೂಲಕ ವಿಶೇಷವಾದ ಸ್ಥಾನ ಗಳಿಸಿದೆ. ಅದೇ ರೀತಿ ಶ್ರದ್ದಾಕೇಂದ್ರಗಳು, ಸಾಮಾಜಿಕ, ಸಾಂಸ್ಕೃತಿಕ ಕೇಂದ್ರಗಳಾಗಬೇಕು. ಅಲ್ಲಿ ನಿರಂತವಾಗಿ ಯಕ್ಷಗಾನ, ಭರತನಾಟ್ಯ ಕಲಿಕೆ ಮುಂತಾದ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ನಡೆಯುವಂತಾಗಬೇಕು ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ ಕೊಡ್ಗಿ, ಡಾ.ಜೆ.ಪಿ ಶೆಟ್ಟಿ ದೊಡ್ಡಮನೆ ಮೂಡ್ಲಕಟ್ಟೆ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭೆ ಅಧ್ಯಕ್ಷರಾದ ಸಂದೀಪ ಮಂಜರು ಕೊರಂಗ್ರಪಾಡಿ, ಅನುಪಮ ಎಸ್ ಶೆಟ್ಟಿ ಬಸ್ರೂರು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನುಪಮ ಯು.ಶೆಟ್ಟಿ. ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ವೇ.ಮೂ. ಬಾಲಚಂದ್ರ ಭಟ್ ಹಟ್ಟಿಯಂಗಡಿ, ಬೆಂಗಳೂರು ಉದ್ಯಮಿ ರವೀಂದ್ರ ಶೇರೆಗಾರ್ ಉಳ್ಳೂರು ಮೋಟಿಮನೆ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶೀನ ಪೂಜಾರಿ ಸಾಂತಾವರ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಸಂಜೀವ ಪೂಜಾರಿ ಬಸ್ರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷರಾದ ರಾಘವೇಂದ್ರ ಚರಣ ನಾವಡ ಸ್ವಾಗತಿಸಿದರು. ಶ್ರೀ ಹೇರಂಬಾಪುರ ಅಗ್ರಹಾರ ವಿನಾಯಕ ದೇವಸ್ಥಾನ ಭಜನಾ ಮಂಡಳಿ ಸದಸ್ಯೆಯರು ಪ್ರಾರ್ಥನೆ ಮಾಡಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಬಿ.ಸುಬ್ರಾಯ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಧವ ಅಡಿಗ ವಂದಿಸಿದರು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!