spot_img
Monday, March 9, 2026
spot_img

ಹಾಲಾಡಿ: ‘ರತ್ನಗಿರಿ ಕ್ಷೇತ್ರ ಮಹಾತ್ಮೆ’ ಪ್ರಸಂಗ ಬಿಡುಗಡೆ

ಹಾಲಾಡಿ: ಹಾಲಾಡಿ-ಕಕ್ಕುಂಜೆ ಮಾರ್ಗದ ರತ್ನಗಿರಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸ್ಥಳ ಪುರಾಣವನ್ನು ಆದರಿಸಿ ಕೌಲಾಳಿ ಚಂದ್ರಶೇಖರ ಶೆಟ್ಟಿಯವರು ರಚಿಸಿದ ಶ್ರೀ ರತ್ನಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗ ಬಿಡುಗಡೆ ಕಾರ್ಯಕ್ರಮ ನ.30 ಭಾನುವಾರ ರಾತ್ರಿ ರತ್ನಗಿರಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಸಿದ್ಧಾಪುರದ ಯಕ್ಷ ನುಡಿಸಿರಿ ಬಳಗದ ಡಾ.ಜಗದೀಶ ಶೆಟ್ಟಿಯವರು ಪ್ರಸಂಗವನ್ನು ಅನಾವರಣಗೊಳಿಸಿ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರತ್ನಗಿರಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್.ಪ್ರಕಾಶ ಶೆಟ್ಟಿ ಗೈನಾಡಿಯವರು ಸ್ವಾಗತಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇ.ಬ್ರ ಶ್ರೀಪತಿ ಭಟ್ ಕಂಬಿಕಲ್ಲು ಶುಭಾಶಂಸನೆಗೈದರು.

ಚೋನಮನೆ ಶನೀಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಶೋಕ ಶೆಟ್ಟಿ ಚೋನಮನೆ, ಹಾಲಾಡಿ ಮಾರಿಕಾನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಎಚ್.ಸರ್ವೋತ್ತಮ ಹೆಗ್ಡೆ ಹಾಲಾಡಿ, ಖ್ಯಾತ ಪ್ರಸಂಗಕರ್ತರಾದ ಕೌಲಾಳಿ ಚಂದ್ರಶೇಖರ ಶೆಟ್ಟಿ, ಶ್ರೀ ಶನೀಶ್ವರ ಮೇಳದ ಸಂಚಾಲಕರಾದ ಮಂಜುನಾಥ ಪೂಜಾರಿ ಗಿಳಿಯಾರು ಮುಖ್ಯ‌ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾದ ಅಣ್ಣಪ್ಪ ನಾಯ್ಕ ಕೋಟುಗುಳಿ ಇವರನ್ನು ಯಕ್ಷಮಂದಾರ ಯಕ್ಷಾಭಿಮಾನಿ ಬಳಗ ಹಾಲಾಡಿ ಇವರು ಗೌರವಿಸಿದರು. ಪ್ರಸಂಗಕರ್ತರಾದ ಕೌಲಾಳಿ ಚಂದ್ರಶೇಖರ ಶೆಟ್ಟಿಯವರನ್ನು ರತ್ನಗಿರಿ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

ಹಾಲಾಡಿ ಸಂತೋಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸೂರ್ಯಪ್ರಕಾಶ ದಾಮ್ಲೆಯವರು ವಂದಿಸಿದರು.
ನಂತರ ಶ್ರೀ ಶನೀಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಚೋನಮನೆ ಆಜ್ರಿ ಇವರಿಂದ ನೂತನ ಪ್ರಸಂಗ ಶ್ರೀ ರತ್ನಗಿರಿ ಕ್ಷೇತ್ರ ಮಹಾತ್ಮೆ ಪ್ರದರ್ಶನ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!