spot_img
Monday, March 9, 2026
spot_img

ಅರಸಮ್ಮಕಾನುನೆರಳು ಚಾರಿಟೇಬಲ್ ಟ್ರಸ್ಟ್ : ಗುರುವಂದನಾ ಕಾರ್ಯಕ್ರಮ

ಕುಂದಾಪುರ: ವಿದ್ಯಾರ್ಥಿಗಳ ಮನಸ್ಸಿನ ಗೊಂದಲಗಳನ್ನು ಪರಿಹರಿಸಿ ಅವರ ಬದುಕಿಗೆ ಮಾರ್ಗದರ್ಶನ ನೀಡಿ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಸಂತೃಪ್ತಿ ಪಡುವ ಗುರುಗಳ ಸೇವೆ ಶ್ರೇಷ್ಠ,ನೆರಳು ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿ ಸೇವಾ ಕಾರ್ಯಗಳು ಪ್ರಶಂಸನೀಯ ಎಂದು ಎನ್ ದಾಮೋದರ ಶರ್ಮ ಬಾರ್ಕೂರು ಹೇಳಿದರು.

ಅವರು ಅರಸಮ್ಮಕಾನು ನೆರಳು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು.

ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಠಲ ಶೆಟ್ಟಿ ಸೀತಾನದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೆರಳು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ ರಾಧಕೃಷ್ಣ ಕ್ರಮಧಾರಿ ಅಧ್ಯಕ್ಷತೆ ವಹಿಸಿದರು.

ಬೆಳ್ವೆ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಸತ್ಯನಾರಾಯಣ ಹೆಬ್ಬಾರ್ ಮರೂರು, ಕೋಟೇಶ್ವರ ಗೀತಾ ಎಚ್‌ಎಸ್‌ಎನ್ ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ ಅಮಾಸೆಬೈಲು, ನೆರಳು ಚಾರಿಟೇಬಲ್ ಟ್ರಸ್ಟ್ ಕಛೇರಿ ಕಟ್ಟಡ ಮಾಲಕ ರಘುರಾಮ ಶೆಟ್ಟಿ,ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಪೂಜಾರಿ, ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದ ಅರ್ಚಕ ನಾಗರಾಜ ಬಾಯರಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕರುಗಳಾದ ಕೆ ಅನಂತ ಉಡುಪ ಕೆರೆಬೈಲು,ಪಿ ವಾಸುದೇವ ಕ್ರಮಧಾರಿ,ರಾಜೀವ ಶೆಟ್ಟಿ ಬೆಪ್ಡೆ, ಅನಂತ ತಂತ್ರಿ ಮಡಾಮಕ್ಕಿ,ಬಿ ಶಿವರಾಮ ಶೆಟ್ಟಿ ಬೆಪ್ಡೆ,ಬಿ ಭಾಸ್ಕರ ಶೆಟ್ಟಿ ಬೆಪ್ಡೆ, ರಾಮಕೃಷ್ಣ ನಾಯ್ಕ ಮಾಯಾಬಜಾರ್,ಎಂ ಸಂಜೀವ ಶೆಟ್ಟಿ ಬೆಪ್ಡೆ,ವೇದಾವತಿ ಬಾಯರಿ ಗಂಗಡಬೈಲು,ಸಿ.ಚಿನ್ನಯ್ಯ ಹೆಗ್ಡೆ ಕೆರ್ಜಾಡಿ, ರಾಜೇಂದ್ರ ಸೇರ್ವೆಗಾರ್, ಪಾರ್ವತಿ ಶೆಡ್ತಿ, ಅಣ್ಣಯ್ಯ ಶೆಟ್ಟಿ ಬೆಪ್ಡೆ,ಚಂದ್ರಶೇಖರ ಶೆಟ್ಟಿ ಬೆಪ್ಡೆ, ಭಾಸ್ಕರ ಶೆಟ್ಟಿ ಮಾಂಡಿಮೂರುಕೈ ಇವರುಗಳಿಗೆ ಗುರುವಂದನೆ ಸಮರ್ಪಣೆ, ಸನ್ಮಾನ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ಭಜನಾ ತಂಡದವರನ್ನು ಸನ್ಮಾನಿಸಲಾಯಿತು. ಉದಯ ನಾಯ್ಕ ಕೊಂಜಾಡಿಯವರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು.

ಶಿಕ್ಷಕ ರಾಜೀವ ಪೂಜಾರಿ ಪಾಟ್ಲಮಕ್ಕಿ ಸ್ವಾಗತಿಸಿದರು.ಚಿರಂತನ್ ಕ್ರಮಧಾರಿ ಪ್ರಾರ್ಥಿಸಿದರು.ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಶಾಂದ್ರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.ಚೆನ್ನಾ ಪೂಜಾರಿ ಪಾಟ್ಲಮಕ್ಕಿ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!