spot_img
Monday, March 9, 2026
spot_img

ಜನಪದ ಸಾಹಿತ್ಯ ಬದುಕಿನ ಬಹುದೊಡ್ಡ ಜೀವಾಳ : ಡಾ. ಅಂಪಾರು ನಿತ್ಯಾನಂದ ಶೆಟ್ಟಿ

ಶಂಕರನಾರಾಯಣ : ಜನಪದ ಸಾಹಿತ್ಯ ಮತ್ತು ಸಂಸ್ಕೃತಿಗಳು ಬೇರೆಯಲ್ಲ. ಅವು ಒಂದು ನಾಣ್ಯದ ಎರಡು ಮುಖಗಳಂತೆ. ಜನಪದ ಸಾಹಿತ್ಯಕ್ಕೆ ಜನಪದರ ಬದುಕಿನ ಅನುಭವ ಕಾರಣವಾಗಿದ್ದು ಇಂಥ ಅನುಭವದಿಂದ ಜನಪದಗೀತೆ, ಕಥೆ, ಗಾದೆ, ಒಗಟು, ಒಡಪು, ಲಾವಣಿ, ಮಹಾಕಾವ್ಯ ಎಂಬ ಬೇರೆ ಬೇರೆ ಸಾಹಿತ್ಯ ಪ್ರಕಾರಗಳು ಅಭಿವ್ಯಕ್ತಗೊಂಡಿವೆ. ಜನಪದ ಸಾಹಿತ್ಯದಲ್ಲಿ ಕೃಷಿಕರ, ಶ್ರಮಿಕರ ಜೀವನದ ನೋವು-ನಲಿವು, ಸುಖ- ದುಃಖ, ಸಂಭ್ರಮಗಳನ್ನು ಕಾಣಬಹುದು. ಬದುಕಿನ ಸಾಮಾನ್ಯ ವಿಷಯಗಳು ಜನಪದ ಸಾಹಿತ್ಯದ ಬಹುದೊಡ್ಡ ಜೀವಾಳವಾಗಿದೆ ಎಂದು ಸಂಘಟಕ, ಅಧ್ಯಾಪಕ ಹಾಗೂ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ನಿತ್ಯಾನಂದ ಶೆಟ್ಟಿ ಅಂಪಾರು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಭಾರ್ಗವ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಜನಪದ ಸಾಹಿತ್ಯ ಮತ್ತು ಸಂಸ್ಕೃತಿ ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದರು.

ಇಂದಿನ ಆಧುನಿಕ ಕಾಲಘಟ್ಟದಲ್ಲಿ ಬೇರೆ ಬೇರೆ ಒತ್ತಡಗಳ ಕಾರಣದಿಂದ ಬದುಕು ಬದಲಾಗುತ್ತಿದೆ. ಆದರೆ ಜನಪದ ಸಾಹಿತ್ಯ ಮಣ್ಣಿನ ಒಡನಾಟದಿಂದ ಕೂಡಿದ್ದುದಾಗಿದ್ದು ಹಲವಾರು ಜೀವನ ಆವರ್ತನಾ ಮತ್ತು ವಾರ್ಷಿಕ ಆವರ್ತನಾ ಆಚರಣೆಗಳಿಂದ ಕೂಡಿದೆ. ಕುಂದಾಪುರ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಅಪಾರವಾಗಿದ್ದು ಇಲ್ಲಿನ ಸಂಸ್ಕೃತಿ ಸ್ವಾಮಿಯ ಆರಾಧನೆ, ನಾಗಾರಾಧನೆ, ತುಳಸಿ ಆರಾಧನೆಯಂಥ ಆಚರಣೆಗಳಲ್ಲಿ ನಡೆದುಕೊಂಡು ಬಂದಿದೆ. ಒಟ್ಟಾರೆ ಜನಪದ ಸಾಹಿತ್ಯ ಸಂಸ್ಕೃತಿ ಜನರ ಬದುಕಿನಿಂದ ನಿರ್ಮಾಣವಾದದ್ದಾಗಿದ್ದು ಅವರ ಬದುಕಿನ ಬಹುದೊಡ್ಡ ಜೀವಾಳವಾಗಿದೆ ಎಂದು ಅಂಪಾರು ಡಾ. ನಿತ್ಯಾನಂದ ಶೆಟ್ಟಿ ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾಲೇಜಿನ ಐಕ್ಯೂ‌ಎಸಿ ಸಂಚಾಲಕ ಡಾ. ವಸಂತ್ ಜಿ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗಂಗಾಧರ ಆರ್ ಎಚ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಭಾವನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಆಶಾ ಸ್ವಾಗತಿಸಿದರು. ಸಿಂಚನಾ ವಂದಿಸಿದರು. ರತಿಕಾ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!