spot_img
Tuesday, March 10, 2026
spot_img

ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬ

ಕುಂದಾಪುರ: ೪೫೫ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. ೨೬ ರಂದು ಮಹಾ‌ಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಹಬ್ಬದ ಮಹಾ ಬಲಿದಾನದ ನೇತೃತ್ವವನ್ನು ವಹಿಸಿಕೊಂಡ ಶಿವಮೊಗ್ಗ ಧರ್ಮಪ್ರಾಂತ್ಯದ ಕಬಳೆ ಸಂತ ಫ್ರಾನ್ಸಿಸ್ ಸಾವೆರ್ ಚರ್ಚಿನ ಧರ್ಮಗುರು ವಂ|ರೋಮನ್ ಪಿಂಟೊ ‘ಈ ಪ್ರಪಂಚದಲ್ಲಿ ಯಾರ ಮೇಲೂ ಭರವಸೆ ಇಡಲು ಸಾಧ್ಯವಿಲ್ಲ, ಮನುಷ್ಯ ಸಂಬಂಧದ ಮೇಲೆ, ಪ್ರಪಂಚದ ವಸ್ತುಗಳ ಮೇಲೆ ಭರವಸೆ ಇಡಲು ಸಾಧ್ಯವಿಲ್ಲ, ಎಲ್ಲವೂ ಕೆಟ್ಟು ಹೋಗುತ್ತೆ. ಆದರೆ ದೇವರ ಮಾತೆ, ರೋಜರಿ ಮಾತೆಯ ಮೇಲೆ ಭರವಸೆ ಇಟ್ಟು ನಮ್ಮ ಜೀವನದ ಪಯಣ ಮಾಡಿದರೆ ಯಶಸು ಲಭಿಸುವುದು. ಮೇರಿ ಮಾತೆ ಭರವಸೆಯ ತಾರೆಯಾಗಿದ್ದಾಳೆ. ನಾವು ಜೀವನದಲ್ಲಿ ಗೊಂದಲಕ್ಕೆ ಸಿಲುಕಿದಾಗ, ಸಂರಕ್ಷಣೆ ಇಲ್ಲದಾಗ, ನಿರಾಶೆಯಾದಗ, ಒಬ್ಬಂಟಿತನ ಉಂಟಾದಾಗ ನಾವು ಮೇರಿ ಮಾತೆಯ ಹತ್ತಿರ ಪ್ರಾರ್ಥಿಸೋಣ, ಹಳೆಯ ದ್ವೇಷವನ್ನು ಮರೆತು, ಹೊಸ ಜೀವನ ಜೀವಿಸೋಣ, ದೇವರಲ್ಲಿ ಹಿಂತಿರುಗಿ ಒಳ್ಳೆಯ ಜೀವನ ಜೀವಿಸೋಣ’ಎಂದು ಅವರು ಸಂದೇಶ ನೀಡಿದರು.

ಕುಂದಾಪುರದವರೇ ಆದ ಉಡುಪಿ ಧರ್ಮಪ್ರಾಂತ್ಯದ ಮೊನ್ಸಿಂಝ್ಹೊರ್ ಅ|ವಂ|ಫರ್ಡಿನಾಂಡ್ ಗೊನ್ಸಾಲ್ವೆಸ್ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಕುಂದಾಪುರ ಚರ್ಚಿನ ಧರ್ಮಗುರು ಅ|ವಂ|ಪೌಲ್ ರೇಗೊ ಬಲಿ ಪೂಜೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯಗಳನ್ನು ನೀಡಿದರು. ಗಂಗೊಳ್ಳಿ ಚರ್ಚಿನ ಧರ್ಮಗುರು ವಂ| ತೋಮಸ್ ರೋಶನ್ ಡಿಸೋಜಾ ಧರ್ಮಗುರುಗಳಿಗೆ ಶುಭಾಶಯ ಸಲ್ಲಿಸಿದರು.

ಕುಂದಾಪುರ ವಲಯದ ಧರ್ಮಕೇಂದ್ರಗಳ ಅನೇಕ ಧರ್ಮಗುರುಗಳು, ಕಟ್ಕೆರೆ ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಮತ್ತು ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೇ ಬಹು ಸಂಖ್ಯೆಯ ಭಕ್ತಾಧಿಗಳು ರೋಜರಿ ಮಾತೆಯ ವಾರ್ಷಿಕ ಜಾತ್ರೆಯ ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!