spot_img
Monday, December 15, 2025
spot_img

ಕುಂದೇಶ್ವರ ದೇವಸ್ಥಾನಕ್ಕೆ ಹೋಲಿ ರೋಜರಿ ಚರ್ಚ್‌ನ ಸೌಹಾರ್ದ ಸಮಿತಿ ಭೇಟಿ

 

ಕುಂದಾಪುರ: ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ಕಾರ್ತಿಕ ದೀಪೋತ್ಸವದಂದು ಕುಂದಾಪುರ ಹೋಲಿ ರೋಜರಿ ಚರ್ಚ್ ಸೌಹಾರ್ದ ಸಮಿತಿ ಸದಸ್ಯರು, ಚರ್ಚ್ ಧರ್ಮ ಗುರುಗಳು ಕುಂದೇಶ್ವರ ದೇವಾಲಯಕ್ಕೆ ಭೇಟಿ ನೀಡಿಮ ಫಲ ಪುಷ್ಪಗಳನ್ನು ಸಮರ್ಪಿಸಿ, ಶುಭ ಕೋರಿದರು.

ಅಂತರ್ ಧರ್ಮ ಸಮಿತಿಯ ಸಂಯೋಜಕರು ಹಾಗೂ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಜಾನ್ಸನ್ ಡಿ’ಅಲ್ಮೇಡಾ, ರೋಜರಿ ಮಾತಾ ಚರ್ಚಿನ ಧರ್ಮಗುರು ಅ|ವಂ|ಪೌವ್ಲ್ ರೇಗೊ, ಕೆಥೊಲಿಕ್ ಸಭಾ ಅಧ್ಯಕ್ಷರಾದ ವಿಲ್ಸನ್ ಡಿ ಅಲ್ಮೇಡಾ ಫಲ ಪುಷ್ಪವನ್ನು ಸಮರ್ಪಿಸಿದರು.

ಶ್ರೀ ಕುಂದೇಶ್ವರ ದೇವಸ್ಥಾನದ ಅಧ್ಯಕ್ಷರಾದ ಎಸ್. ವಾಸುದೇವ ಯಡಿಯಾಳ, ಆರ್ಚಕರಾದ ರಾಜಶೇಖರ ಮಂಜರು, ಸತೀಶ ಗಾಣಿಗ ಅವರು ಬಹಳ ಆತ್ಮೀಯತೆಯಿಂದ ಸೌಹಾರ್ದ ಸಮಿತಿಯನ್ನು ಸ್ವಾಗತಿಸಿ ಅವರಿಂದ ಫಲ ಪುಷ್ಪಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಧರ್ಮಗುರು ಅ|ವಂ|ಪೌವ್ಲ್ ರೇಗೊ, ಅವರಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು. ಇದೇ ತಿಂಗಳು ೨೫-೨೬ ರಂದು ನಡೆಯುವ ಕುಂದಾಪುರ ರೋಜರಿ ಮಾತಾ ಚರ್ಚಿನ ತೆರಾಲಿ ಹಬ್ಬಕ್ಕೆ ಆಮಂತ್ರಿಸಲಾಯಿತು.

ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಸೌಹಾರ್ದ ಸಮಿತಿಯ ಕಾರ್ಯದರ್ಶಿ ಶಾಂತಿ ಪಿಂಟೊ, ಸೌಹಾರ್ದ ಸಮಿತಿಯ ಸದಸ್ಯ ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ, ಡಾ.ಸೋನಿ ಡಿಕೋಸ್ತಾ, ಶೈಲಾ ಡಿ ಆಲ್ಮೇಡಾ, ಜೋಸೆಫ್ ಡಿಜೋಜಾ, ಮೈಕಲ್ ಗೊನ್ಸಾಲ್ವಿಸ್, ಆಲ್ವಿನ್ ಆಲ್ಮೇಡಾ, ಸಂಗೀತ ಪಾಯ್ಸ್ ಮೊದಲಾದವರು ಉಪಸ್ಥಿತರಿದ್ದರು.

ಕುಂದೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಕೆ ಸತೀಶ್ ಗಾಣಿಗ, ಜಿ.ಎಸ್. ಭಟ್, ಕೆ. ನಾಗರಾಜ ನಾಯ್ಕ, ವಿಠಲ ಕಾಂಚನ್, ದಿನೇಶ್, ಉದಯ ಹವಾಲ್ದಾರ್, ಸೀಮಾ ಚಂದ್ರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು,

ಕುಂದಾಪುರ ಹೋಲಿ ರೋಸರಿ ಚರ್ಚ್‌ನ ಅಂತರ್ ಧರ್ಮ ಸಮಿತಿ ಸದಸ್ಯರು, ಪೂಜೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು. ಇದು ಧರ್ಮ ಸಮನ್ವಯತೆಗೆ ಸಾಕ್ಷಿಯಾಯಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!