spot_img
Monday, December 15, 2025
spot_img

ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ‘ಸಹಕಾರ ಮಾಣಿಕ್ಯ ಪ್ರಶಸ್ತಿ’

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘವು ಪ್ರಾರಂಭಗೊಂಡು 67ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ, 68ನೇ ವರ್ಷದಲ್ಲಿ ಯಶಪ್ರದವಾಗಿ ಮುನ್ನೆಡೆಯುತ್ತಿರುವ ಸಂದರ್ಭ ಸಂಘವು 302 ಕೋಟಿ ಠೇವಣಾತಿ ಹೊಂದಿ, 251 ಕೋಟಿ ಸಾಲ ನೀಡಿದ್ದು, 1386 ಕೋಟಿ ವಾರ್ಷಿಕ ವಹಿವಾಟಿನೊಂದಿಗೆ ಸತತ 16 ವರ್ಷಗಳಿಂದ ‘ಅ’ ತರಗತಿ ಆಡಿಟ್ ವರ್ಗೀಕರಣ ಹೊಂದಿರುತ್ತದೆ. 2024-25ನೇ ಸಾಲಿನಲ್ಲಿ ಶೇ.98.53ರಷ್ಟು ಸಾಲ ವಸೂಲಾತಿಯೊಂದಿಗೆ 5.83 ಕೋಟಿ ಲಾಭವನ್ನು ಗಳಿಸಿ ಇನ್ನಿತರ ಸಹಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಂಘವು ಮುಂಚೂಣಿಯಲ್ಲಿದೆ. ಸಂಘವು ಕೇಂದ್ರ ಸರಕಾರದ ಯೋಜನೆಯಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ರಾಜ್ಯದಲ್ಲೇ ಪ್ರಪ್ರಥಮವಾಗಿ ಸಹಕಾರಿ ಸಂಸ್ಥೆಯಾಗಿ ಅನುಷ್ಠಾನಕ್ಕೆ ತಂದಿರುತ್ತದೆ ಮತ್ತು ತನ್ನದೇ ವಿಶಿಷ್ಟ ಯೋಜನೆಯಾದ ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ವಿತರಿಸಿದೆ ಹಾಗೂ ಸಕಲ ಮಾರಾಟ ಮಳಿಗೆಯ ಮೂಲಕ ಟಾರ್ಪಲ್, ಪೈಪ್, ಸುಣ್ಣ, ಕುರಿಗೊಬ್ಬರ, ರಸಗೊಬ್ಬರ, ಸಾವಯವ ಗೊಬ್ಬರ, ಕೃಷಿ ಉಪಕರಣಗಳು, ಗೃಹ ಬಳಕೆಯ ವಸ್ತುಗಳು ಮತ್ತು ಮಕ್ಕಳ, ಪುರುಷರ, ಮಹಿಳೆಯರ ದಿನನಿತ್ಯದ ಉಡುಪುಗಳನ್ನು ಕೈಗೆಟುಕುವ ದರದಲ್ಲಿ ವಿತರಿಸಿ ಯಶಸ್ವಿಯಾಗಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೋಟ ಸಹಕಾರಿ ವ್ಯವಸಾಯಕ ಸಂಘವು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಮತ್ತು ಸಾಧಿಸಿದ ಸರ್ವಾಂಗೀಣ ಸಾಧನೆಯನ್ನು ಪರಿಗಣಿಸಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ನೀಡುವ ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನ.16 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಜರಗಿದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್, ಶಾಸಕರು ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾದ ಜಿ. ಟಿ. ದೇವೆಗೌಡ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಮತ್ತು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಡಿ. ಕಾಮತ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಕರ್ನಾಟಕ ವಿಧಾನ ಪರಿಷತ್‌ನ ಶಾಸಕರಾದ ಮಂಜುನಾಥ ಭಂಡಾರಿ ಮತ್ತು  ಐವಾನ್ ಡಿಸೋಜ, ನಬಾರ್ಡ್‌ನ ಮುಖ್ಯ ಮಾಹಾಪ್ರಬಂಧಕರಾದ ಡಾ. ಸುರೇಂದ್ರ ಬಾಬು, ಕೆ.ಎಮ್.ಎಫ್. ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಹಾಗೂ ಇತರ ಗಣ್ಯರ ಸಮಕ್ಷಮ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷರಾದ ಡಾ. ಕೃಷ್ಣ ಕಾಂಚನ್ ಇವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಕೆ. ಉದಯಕುಮಾರ್ ಶೆಟ್ಟಿ, ರಂಜಿತ್ ಕುಮಾರ್, ಶ್ರೀಮತಿ ರಶ್ಮಿತಾ, ಚಂದ್ರ ಪೂಜಾರಿ ಪಿ. ಶ್ರೀಮತಿ ವಸಂತಿ ಪೂಜಾರ್ತಿ, ಶ್ರೀಮತಿ ಪ್ರೇಮಾ, ಪಿ. ಶೇಖರ ಮರಕಾಲ, ರಾಜಾರಾಮ ಶೆಟ್ಟಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಮತ್ತು ಸಂಘದ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!