spot_img
Thursday, March 12, 2026
spot_img

ಹೆತ್ತವರಿಗೆ ನೆಮ್ಮದಿ ನೀಡಿದಾಗ ಮಕ್ಕಳ ಜೀವನ ಸಾರ್ಥಕ್ಯ-ವಂದನಾ ಕೂರಾಡಿ

ಅಮಾಸೆಬೈಲು: ನಾವು ಎಷ್ಟೇ ಉನ್ನತ ವಿದ್ಯಾಭ್ಯಾಸ ಪಡೆದರೂ ಮತ್ತು ಉನ್ನತ ಹುದ್ದೆ ಅಥವಾ ಕೆಲಸದಲ್ಲಿ ಇದ್ದರೂ ತಮ್ಮ ಹೆತ್ತವರನ್ನು ಕೊನೆಯ ಜೀವಿತಾವಧಿಯಲ್ಲಿ ಸರಿಯಾಗಿ ನೋಡಿಕೊಳ್ಳದೆ ಅನಾಥಾಶ್ರಮದಲ್ಲಿ ಬಿಟ್ಟು ಬಂದರೆ ಅವರ ಜೀವನ ಸಾರ್ಥಕ್ಯ ಪಡೆಯುವುದಿಲ್ಲ ಎಂದು ಬ್ರಹ್ಮಾವರದ ಅಪ್ಪ ಅಮ್ಮ ವೃದ್ಧಾಶ್ರಮದ ಮೇಲ್ವಿಚಾರಕಿ ವಂದನಾ ಕೂರಾಡಿ ಅಭಿಪ್ರಾಯ ಪಟ್ಟರು.

ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿನ ವಿದ್ಯಾರ್ಥಿಗಳು ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ನಿಮ್ಮ ಹೆತ್ತವರನ್ನು ಕೊನೆಯ ತನಕ ಚೆನ್ನಾಗಿ ನೋಡಿಕೊಳ್ಳಿ. ಎಂತಹ ಸಂದರ್ಭದಲ್ಲಿಯೂ ಅನಾಥರನ್ನಾಗಿ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯ, ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ರಾವ್, ಹೇಮಾ, ಶಿಕ್ಷಕ ವಿಘ್ನೇಶ್ ದೇವಾಡಿಗ, ಶ್ರೀಕಾಂತ್, ವಿದ್ಯಾರ್ಥಿ ನಾಯಕಿ ವೈಷ್ಣವಿ, ಮತ್ತು ಹತ್ತನೆ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹತ್ತನೆ ತರಗತಿಯ ಶಿಕ್ಷಕ ವಿಘ್ನೇಶ್ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!