spot_img
Wednesday, November 19, 2025
spot_img

ಕಿರಿಮಂಜೇಶ್ವರ: ಮಹಿಳಾ ವೇದಿಕೆ ವತಿಯಿಂದ ಸ್ನೇಹಕೂಟ

ಕಿರಿಮಂಜೇಶ್ವರ: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಿರಿಮಂಜೇಶ್ವರ ಅಂಗಸಂಸ್ಥೆಯ ಮಹಿಳಾ ವೇದಿಕೆ ವತಿಯಿಂದ ಸ್ನೇಹಕೂಟ ಕಾರ್ಯಕ್ರಮವು ಶ್ರೀ ಗುರು ನರಸಿಂಹ ಸಭಾಭವನ ನಾಗೂರು ಇಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಶಿಕ್ಷಕಿ ಗಿರಿಜಾ ಮಯ್ಯ ಮಾತನಾಡಿ ಸನಾತನ ಸಂಸ್ಕೃತಿಯ ಪರಂಪರೆ, ರೀತಿ ರಿವಾಜುಗಳನ್ನು ನಾವು ಸ್ವತಃ ಅನುಸರಿಸಿ ಎಳವೆಯಲ್ಲೇ ಮಕ್ಕಳಿಗೆ ತಲುಪುವಂತೆ ಮಾಡಬೇಕು ಎಂಬ ಹಿತನುಡಿ ಹೇಳಿದರು.

ಕಿರಿಮಂಜೇಶ್ವರ ಅಂಗ ಸಂಸ್ಥೆಯ ಅಧ್ಯಕ್ಷ ಬೈಂದೂರು ಚಂದ್ರಶೇಖರ ನಾವಡ ಮಾತನಾಡಿ ಇಂತಹ ಕಾರ್ಯಕ್ರಮಗಳು ಮಹಿಳೆಯರಿಗೆ, ಮಕ್ಕಳಿಗೆ ವೇದಿಕೆ ಒದಗಿಸುವುದರ ಜತೆಯಲ್ಲಿ ನಮ್ಮೊಳಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಸಹಾಯಕವಾಗುತ್ತದೆ ಎಂದರು.

ಮಹಿಳಾ ವೇದಿಕೆ ಅಧ್ಯಕ್ಷೆ ಹಾಗೂ ಕಾರ್ಯಕ್ರಮದ ರೂವಾರಿ ಆಶಾ ಕಾರಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇತ್ತೀಚೆಗೆ ಸಾಲಿಗ್ರಾಮದಲ್ಲಿ ನಡೆದ ಕೂಟ ಬ್ರಾಹ್ಮಣರ ಕೇಂದ್ರೀಯ ಅಧಿವೇಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಹಿಳೆಯರನ್ನು ಗೌರವಿಸಲಾಯಿತು. ಅರ್ಥಪೂರ್ಣವಾಗಿ ಆಚರಿಸಲಾದ ಸ್ನೇಹಕೂಟ ಕಾರ್ಯಕ್ರಮದಲ್ಲಿ ಮಹಿಳೆಯರು ತಮ್ಮ ಮನೆಯಿಂದ ತಂದ ತಿನಿಸಿಗಳನ್ನು ವಿತರಿಸಿ ಸಂಭ್ರಮಿಸಿದರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ವೇ| ಮೂ| ರಾಮಕೃಷ್ಣ ಜೋಶಿ, ಶ್ರೀ ಗಣೇಶ ಮಯ್ಯ, ಶ್ರೀ ವಾಸುದೇವ ನಾವಡ ಶ್ರೀ ಮತಿ ಪ್ರೇಮ ಕಾರಂತ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ಮಹಿಳೆಯರು ಲಲಿತಾ ಸಹಸ್ರನಾಮ ಪಠಣ ಮಾಡಿದರು. ಕಮಲಾಕ್ಷಿ ನಾವಡ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!