spot_img
Monday, March 16, 2026
spot_img

‘ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿ’ಗೆ ವಾಸ್ತುತಜ್ಞ ಡಾ. ಕೆ. ಬಸವರಾಜ್ ಶೆಟ್ಟಿಗಾರ್ ಆಯ್ಕೆ

ಕುಂದಾಪುರ : 42 ಸಂವತ್ಸರಗಳಿಂದ ವಿವಿಧ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ವಾಸ್ತುತಜ್ಞ ಡಾ| ಕೆ. ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಇವರಿಗೆ – 2025-26ರ ಸಾಲಿನ “ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿ”ಯನ್ನು ನೀಡಲು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದಾರೆಂದು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ಮತ್ತು ಅಂತರಾಷ್ಟ್ರೀಯ ಪ್ರತಿಷ್ಠಾನದ ವೇದಿಕೆ ಅಧ್ಯಕ್ಷರಾದ ಪತ್ರಕರ್ತ ರಮೇಶ್ ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವರಾಜ್ ಶೆಟ್ಟಿಗಾರರು ಪ್ರಸಂಗಕರ್ತರಾಗಿ, ಪತ್ರಕರ್ತರಾಗಿ, ನಾಟಕಕರ್ತರಾಗಿ, ಕಾದಂಬರಿಗಾರರಾಗಿ, ನಟ ನಿರ್ದೇಶಕರಾಗಿ, ಚಲನಚಿತ್ರ ನಟನಾಗಿ, ಧಾರ್ಮಿಕ ಕ್ಷೇತ್ರ ರೂವಾರಿಯಾಗಿ, ಯುವ ಸಂಘಟಕರಾಗಿ 45 ವರ್ಷಗಳಿಂದ ವಿವಿಧ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಾಸ್ತು ಹಾಗೂ ಜ್ಯೋತಿಷ್ಯ ಕ್ಷೇತ್ರದಲ್ಲಿ 21 ವರ್ಷ ಸೇವೆ ನೀಡುವುದರೊಂದಿಗೆ ಶೆಟ್ಟಿಗಾರರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಾಧನೆಗೆ ಸಂದ ಗೌರವವಾಗಿದೆ.

ಶೆಟ್ಟಿಗಾರರು 71 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು 19 ನಾಟಕಗಳಲ್ಲಿ 2 ನಾಟಕ ಜಿಲ್ಲಾ ಪ್ರಶಸ್ತಿ ಲಭಿಸಿದೆ. 4 ಕಾದಂಬರಿಗಳನ್ನು ರಚಿಸಿದ ಇವರು ನೂರಾರು ಭಕ್ತಿಗೀತೆ, ಭಾವಗೀತೆ, ಜಾನಪದಗೀತೆ, ಕಥೆಗಳನ್ನು ರಚಿಸಿದ್ದು ಚಿತ್ರ ನಟನಾಗಿ, ನಾಟಕ ಕಲಾವಿದರಾಗಿ, ನಿರ್ದೇಶಕನಾಗಿ, ತಾಳಮದ್ದಲೆ ಅರ್ಥಧಾರಿಯಾಗಿ, ಯಾವುದೇ ವಿಚಾರದಲ್ಲಿ ಅಧಿಕಾರವಾಣಿಯಿಂದ ಮಾತನಾಡುವ ಸಂಪನ್ಮೂಲ ವ್ಯಕ್ತಿಯಾಗಿ, 22ಕ್ಕೂ ಮಿಕ್ಕಿ ಸಂಘ – ಸಂಸ್ಥೆಗಳನ್ನು ಸ್ಥಾಪಿಸಿದ್ದು 8 ಸಂಘಟನೆಗಳು ತಮ್ಮ ಬೆಳ್ಳಿ ಹಬ್ಬವನ್ನು ಆಚರಿಸಿ ಸುವರ್ಣ ಮಹೋತ್ಸವದ ಎಡೆಗೆ ಸಾಗುತ್ತಿದೆ. ಈಗಾಗಲೇ ಅಭಿಮಾನಿಗಳಿಂದ 651 ಸನ್ಮಾನವನ್ನು ಸ್ವೀಕರಿಸಿದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸ್ಕಂದಪ್ರಶಸ್ತಿ, ಡಾ| ಶಿವರಾಮ ಕಾರಂತ ರಾಜ್ಯ ಪ್ರಶಸ್ತಿ, ಕಲಾಸಾಧಕ ರಾಜ್ಯ ಪ್ರಶಸ್ತಿ, ಬಸವರತ್ನ ರಾಷ್ಟ್ರಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಭೂಷಣ, ಭಾರತಭೂಷಣ, ವಾಸ್ತುಕಲಾರತ್ನ ರಾಜ್ಯ ಪ್ರಶಸ್ತಿ, ಸಕಲ ಕಲಾ ವಲ್ಲಭ ಡಾ. ರಾಜ್‍ಕುಮಾರ್ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಜೀವಮಾನಶ್ರೇಷ್ಠ ಸಾಧಕ ಅಂತಾರಾಷ್ಟ್ರೀಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಭಾರತ ರತ್ನ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿಗಳು ಇವರ ಮುಡಿಯೇರಿದೆ. ಶೆಟ್ಟಿಗಾರರಿಗೆ “ಮೌಲ್ಯಾಧಾರಿತ ಕಥಾನಕಗಳ ಸರದಾರ”, “ಕ್ಷೇತ್ರ ಮಹಾತ್ಮೆಯ ಸರದಾರ”, “ಸಮಾಜರತ್ನ”, “ಕಲಾಕೇಸರಿ”, “ಧರ್ಮಧುರಂದರ”, “ಧ್ವಜಪುರ ರತ್ನ”, “ಕರುನಾಡ ಕಣ್ಮಣಿ”, “ಪದ್ಮಶಾಲಿ ಕುಲ ದೀಪಕ”, “ಪದ್ಮಶಾಲಿ ಕಣ್ಮಣಿ”, “ಜ್ಯೋಷ್ಯ ಚೂಡಾಮಣಿ”, “ಕ್ಷೇತ್ರ ಮಹಾತ್ಮೆಗಳ ಕೃತಿ ಬ್ರಹ್ಮ” ಎಂಬಿತ್ಯಾದಿ ಬಿರುದುಗಳು ಪ್ರಾಪ್ತಿಯಾಗಿದೆ. ಇಂತಹ ಬಹುಮುಖ ಪ್ರತಿಭೆಗೆ “ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿ”ಎನ್ನುವಂತಾದ್ದು ಶೆಟ್ಟಿಗಾರರ ಕೀರ್ತಿ ಕಿರೀಟಕ್ಕೆ ತುರಾಯಿ ಇರಿಸಿದಂತಾಗಿದೆ.

ಅಲ್ಲದೇ ಶೆಟ್ಟಿಗಾರರು ರೇಡಿಯೋ ಮಾಧ್ಯಮದಲ್ಲಿ ವಾರದ ಅತಿಥಿಯಾಗಿ, ಚಿಂತನ ಮಾಲಿಕೆಯಲ್ಲಿ ತಮ್ಮ ಅಮೂಲ್ಯ ಪ್ರತಿಭೆಯನ್ನು ವ್ಯಕ್ತಪಡಿಸಿದ್ದು ಉಡುಪಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ದೃಶ್ಯ ಮಾಧ್ಯಮಗಳಿಗೆ ಉದ್ಘೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಟಿವಿ ಮಾಧ್ಯಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. 51 ಕ್ಷೇತ್ರಗಳ ಅಧ್ಯಯನ ಮಾಡಿ 51 ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಬರೆದು ರಂಗಕ್ಕೆ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಬಸವರಾಜ್ ಶೆಟ್ಟಿಗಾರರು 25 ವರ್ಷಗಳ ಹಿಂದೆ ಕೇರಳದ ಪಯ್ಯನೂರಿನಲ್ಲಿ ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿ ಪಾಂಡಿತ್ಯವನ್ನು ಅರ್ಜಿಸಿಕೊಂಡು ಈಗಾಗಲೇ ಗಣಪತಿ ಹೋಮ, ಗೃಹಪ್ರವೇಶ, ಮದುವೆ, ಸತ್ಯನಾರಾಯಣ ಪೂಜೆ ಹೀಗೆ ಹಲವಾರು ಹೋಮ ಹವನಾದಿಗಳನ್ನು ಮಾಡಿರುವುದರೊಂದಿಗೆ 1 ಲಕ್ಷಕ್ಕೂ ಮಿಕ್ಕಿ ಹೊಸ ಹಾಗೂ ಹಳೆ ಮನೆಯ ವಾಸ್ತುವಿನ್ಯಾಸವನ್ನು ಮಾಡಿದ್ದು ಲಕ್ಷಾಂತರ ಜಾತಕ ಪರಿಶೀಲನೆ ರಚನೆ ಮಾಡಿರುತ್ತಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ 16ರಂದು ನಡೆಯಲಿರುವ ವರ್ಣರಂಜಿತ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗಣ್ಯಾತಿಗಣ್ಯರೊಂದಿಗೆ ಸಮಾರಂಭದ ಅಧ್ಯಕ್ಷತೆನ್ನು ಐಎಎಸ್ ಅಧಿಕಾರಿ ಡಾ. ಸಿ.ಸೋಮಶೇಖರ ವಹಿಸಲಿದ್ದು, ಬೆಳಗಾವಿ ಅಥಣಿ ಮಠದ ಶ್ರೀ ಪ್ರಭು ಚೆನ್ನಬಸವ ಮಹಾಸ್ವಾಮಿಗಳವರು ಆಶೀರ್ವಚನ ಗೈಯಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!