spot_img
Saturday, March 14, 2026
spot_img

ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮಹಾಸಭೆ: ಶೇ.9% ಡಿವಿಡೆಂಡ್ ಘೋಷಣೆ

ಕುಂದಾಪುರ: ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ (ನಿ) ಕರ್ಕಿ, ಕನ್ಯಾನ, ಕುಂದಾಪುರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆ. ೨೫ರಂದು ಸಂಘದ ಕೇಂದ್ರ ಕಛೇರಿ ಕರ್ಕಿ, ಕನ್ಯಾನ (ಶ್ರೀ ಚೌಡೇಶ್ವರಿ ಕನ್ವೆನ್ನನ್ ಹಾಲ್) ದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುರೇಂದ್ರ ಕೊಠಾರಿ ಗುಜ್ಜಾಡಿ ವಹಿಸಿದ್ದು, ಸಂಘವು ಪ್ರಾರಂಭದಿಂದ ಈ ತನಕ ಬೆಳವಣಿಗೆಯ ಪಕ್ಷಿನೋಟವನ್ನು ವಿವಹರಿಸಿದರು. ಜೊತೆಗೆ ಮುಂದೆ ಸಂಘವು ಏನೆಲ್ಲಾ ಕಾರ್ಯಸಾಧನೆಗಳನ್ನು ಮಾಡಬಹುದು ಎಂಬುವುದನ್ನು ಸಭೆಯಲ್ಲಿ ವಿವಹರಿಸಿದರು. ಈ ವರ್ಷ ಸದಸ್ಯರಿಗೆ ೯% ಡಿವಿಡೆಂಡ್ ನೀಡುವುದಾಗಿ ಘೋಷಣೆ ಮಾಡಿದರು.

ಉಪಾಧ್ಯಕ್ಷರಾದ ಬೇಬಿ ಕೊಠಾರಿ, ನಿರ್ದೇಶಕರಾದ ಕೆ.ನಾಗಪ್ಪ ಕೊಠಾರಿ, ವೈ.ರಾಜು ಕೊಠಾರಿ, ಮಂಜು ಕೊಠಾರಿ, ರಾಘವೇಂದ್ರ ಕೊಠಾರಿ, ರಮಿತಾ ಕೊಠಾರಿ, ಗೀತಾ ಕೊಠಾರಿ ಇವರು ಉಪಸ್ಥಿತರಿದ್ದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖರ ಕೊಠಾರಿ ಆಜ್ರಿ ವಾರ್ಷಿಕ ವರದಿ ಮಂಡಿಸಿ ಅನುಮೋದನೆ ಪಡೆದರು. ಕುಂದಾಪುರ ಶಾಖೆ ಸಿಬ್ಬಂದಿ ಜಯಂತಿ ಕೊಠಾರಿ ೨೦೨೫-೨೬ರ ಅಂದಾಜು ಬಜೆಟ್ ವಾಚಿಸಿದರು.

ಸಭೆಯಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ಮತ್ತು ಸಾರ್ವಜನಿಕ ಉಪಕಾರ ನಿಧಿಯಿಂದ ಅರ್ಹ ಪಲಾನುಭವಿಗೆ ಧನ ಸಹಾಯ ನೀಡಲಾಯಿತು. ಹಾಗೂ ಹಲವಾರು ವರ್ಷಗಳಲ್ಲಿ ವ್ಯವಹಾರ ನಡೆಸುತ್ತಾ ಬಂದಿರುವ ಉತ್ತಮ ಗ್ರಾಹರಾದ ಇಬ್ರಾಹಿಂ ಕುಂಭಾಶಿ ಮತ್ತು ಸಂಘದ ಹಿರಿಯ ಸದಸ್ಯರಾದ ಬಾಬು ಕೊಠಾರಿ ಜಗಾರು ಇವರನ್ನು ಸನ್ಮಾನಿಸಲಾಯಿತು.

ಸಿಬ್ಬಂದಿ ಹರೀಶ ಕುಮಾರ ಸ್ವಾಗತಿಸಿ, ಸಿಬ್ಬಂದಿ ಪಸನ್ನ ಕರ್ಕಿ ಇವರು ವಂದಿಸಿದರು. ಸದಸ್ಯೆ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!