spot_img
Saturday, March 14, 2026
spot_img

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಮಹಾಸಭೆ |ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ-ಬೆಳ್ವೆ ಸತೀಶ ಕಿಣಿ

ಜನಪ್ರತಿನಿಧಿ ವಾರ್ತೆ] ಬ್ರಹ್ಮಾವರ: ಹಿಂದಿನ ಆಡಳಿತ ಮಂಡಳಿ ಇದ್ದಾಗ ಸಕ್ಕರೆ ಕಾರ್ಖಾನೆ ಇತ್ತು. ನಾವೀಗ ಬಂದಾಗ ಕಾರ್ಖಾನೆಯೆ ಇಲ್ಲ. ಇದೀಗ ಸದಸ್ಯರು ನಮ್ಮ ಮೇಲೆ ಜವಬ್ದಾರಿ ಹೊರಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದು ಒಂದು ತಿಂಗಳೊಳಗೆ ಮಹಾಸಭೆ ನಡೆಯುತ್ತಿದೆ. ರೈತರು ಸಕ್ಕರೆ ಕಾರ್ಖಾನೆ ಆಗುತ್ತದಾ ಎಂದು ಕೇಳುತ್ತಾರೆ. ಸಕ್ಕರೆ ಕಾರ್ಖಾನೆ ಆಗಬೇಕಾದರೆ ಕಬ್ಬು ಬೆಳೆಯಬೇಕು. ಹಿಂದಿನ ಸಕ್ಕರೆ ಕಾರ್ಖಾನೆ ಇದ್ದಿದ್ದರೆ ಪುನಶ್ಚೇತನ ಮಾಡಬಹುದಿತ್ತು. ಆದರೆ ಈಗ ಕಾರ್ಖಾನೆ ಮಾಡಲು ಬೇಡಿಕೆ ಇಟ್ಟರೆ 120 ಕೋಟಿ ರೂಪಾಯಿ ಬೇಕು. ಆದರೆ ಅದು ಸಾಧ್ಯವಾ ಎಂಬ ಪ್ರಶ್ನೆ ಉದ್ಬವಿಸುತ್ತದೆ ಎಂದು ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬಿ.ಸತೀಶ ಕಿಣಿ ಹೇಳಿದರು.

ಅವರು ಸೆ.24ರಂದು ಕಾರ್ಖಾನೆಯ 2024-2025 ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಾವೀಗ 1000 ಎಕ್ರೆ ಪ್ರದೇಶದಲ್ಲಿ ಕಬ್ಬು ಬೆಳೆದರೆ ಸಾಧ್ಯವಾಗಬಹುದು. ಆದರೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿಬೇಕು. ಇದಕ್ಕೆ ಸರಕಾರದ ಸಕ್ರೀಯ ಬೆಂಬಲ ಬೇಕು, ಈ ನಿಟ್ಟಿನಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿಯವರ ಮಾರ್ಗದರ್ಶನ ಪಡೆಯುತ್ತೇವೆ. ಒಂದು ತಿಂಗಳ ಒಳಗಾಗಿ ಈ ನಿಟ್ಟಿನಲ್ಲಿ ರೈತರ ಸಂಪರ್ಕ ಮಾಡುತ್ತೇವೆ. ಇದಕ್ಕೆ ಸದಸ್ಯರ ಸಹಕಾರ ಬೇಕು ಎಂದರು.
ಸಕ್ಕರೆ ಕಾರ್ಖಾನೆ ಆಗುವವರೆಗೆ ಬೆಲ್ಲ ತಯಾರಿಸಲು ಯೋಜನೆ ಹಾಕಿದ್ದೇವೆ. ಪ್ರತೀ ವರ್ಷ ಕಬ್ಬು ಬೆಳೆಗಾರರ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ರೂಪಿಸಿಕೊಳ್ಳುತ್ತೇವೆ ಎಂದರು.

ಮಹಾಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಕಾರ್ಖಾನೆಯಲ್ಲಿ ಈ ವರೆಗೆ ಸಮರ್ಪಕ ನೋಟಿಸು ಕೊಡದೆ ಇದ್ದ ಬಗ್ಗೆ ಅಧಿಕಾರಿ ವರ್ಗವನ್ನು ತೀವ್ರ ತರಾಟೆಗೆ ತಗೆದುಕೊಳ್ಳಲಾಯಿತು. ಮುಂದಿನ ಸಭೆಯಲ್ಲಿ ಹಾಗಾದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ವ್ಯಕ್ತವಾಯಿತು.

ನ್ಯಾಯಾಲಯದ ಆದೇಶದ ಮೇರೆಗೆ ಹಿಂದಿನ ಆಡಳಿತ ಮಂಡಳಿ ಸಿಬಂದಿಗೆ ಬಾಕಿ ಹಣ ಪಾವತಿ ಮಾಡಲಾಗಿದೆ. ಆದರೆ ಮತ್ತೆ ಅಧಿಕಾರಿಗಳು ಕಾರ್ಮಿಕರಿಗೆ ಹಣಪಾವತಿ ಮಾಡಿದ್ದಾರೆ, ಇದು ಸರಿಯಲ್ಲ, ಕಾರ್ಖಾನೆಗೆ ಕಾರ್ಮಿಕರಿಗೆ ವೇತನ ಪಾವತಿ ಆಗಿದೆ ಎಂದು ಲಿಖಿತ ವಾಗಿ ನೀಡಿದರೂ ಅಧಿಕಾರಿ ಸೇಚ್ಛಾಚಾರದ ನಡೆ ಖಂಡನೀಯ. ಇದು ಹೆಚ್ಚುವರಿ ಪಾವತಿ ಮಾಡಿದ್ದಾರೆ. ಇದು ವಸೂಲಾಗಬೇಕಾಗಿದೆ ಎಂದು ಚೋರಾಡಿ ಅಶೋಕ್ ಶೆಟ್ಟಿ ಆಗ್ರಹಿಸಿದ್ದಾರೆ.

ಉಪಾಧ್ಯಕ್ಷರಾದ ಸಂಜೀವ ಶೆಟ್ಟಿ ಸಂಪಿಗೇಡಿ, ನಿರ್ದೇಶಕರಾದ ಭುಜಂಗ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಹೆಚ್.ಹರಿಪ್ರಸಾದ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಬೋಜ ಕುಲಾಲ್, ಚೈತ್ರ ಅಡಪ, ಗಿರಿಜ ಪೂಜಾರಿ, ಶಿವರಾಮ, ರಂಗ ನಾಯ್ಕ, ಮಂಜುನಾಥ ಉಪಸ್ಥಿತರಿದ್ದರು.

ಸಹಕಾರ ಸಂಘಗಳ ಉಪನಿಬಂಧಕರು, ವ್ಯವಸ್ಥಾಪಕ ನಿರ್ದೇಶಕರಾದÀ ಶ್ರೀಮತಿ ಲಾವಣ್ಯ ಕೆ.ಆರ್ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಕಾರ್ಖಾನೆಯಲ್ಲಿ ನೆಡೆದ ಎಲ್ಲ ಹಗರಣಗಳು ಕೂಡಾ ತನಿಖೆಯಾಗಬೇಕು ಎಂಬ ತೀರ್ಮಾನಿಸಲಾಯಿತು. ಹಿಂದಿನ ಆಡಳಿತ ಮಂಡಳಿ ಮಾಡಿದ ಹಗರಣವನ್ನು ಚರ್ಚೆ ಮಾಡಲಾಯಿತು. ಈಗಾಗಲೇ ತನಿಖೆ ಆಗಿದೆ. ಹಗರಣ ಸಾಭೀತಾಗಿದೆ. ಹಣ ವಸೂಲಾತಿ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ತೀರ್ಮಾನಿಸಲಾಯಿತು. ವ್ಯವಸ್ಥಾಪಕರಾದ ಗೋಪಾಲಕೃಷ್ಣ ಶೆಟ್ಟಿ ವರದಿ ಮಂಡಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!