spot_img
Thursday, March 12, 2026
spot_img

‘ವೀರಚಂದ್ರಹಾಸ’ ಯಕ್ಷಸಿನಿಮಾ ನಿರ್ಮಿಸಿದ ರವಿ ಬಸ್ರೂರು ಅವರಿಗೆ ‘ಯಕ್ಷಸಂಕ್ರಾಂತಿ’ಯಲ್ಲಿ ಸಮ್ಮಾನ

ಬೆಂಗಳೂರು: ‘ವೀರಚಂದ್ರಹಾಸ’ ಚಿತ್ರವನ್ನು ನಿರ್ಮಿಸಿದ ಮೇರು ಸಂಗೀತ ನಿರ್ದೇಶಕ ರವಿ ಬಸ್ರೂರು ಹಾಗೂ ಪತ್ನಿ ಗೀತಾ ಆರ್. ಬಸ್ರೂರು ಅವರನ್ನು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸೆ.20ರಂದು ನಡೆದ ಯಕ್ಷಸಂಕ್ರಾಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಆಧಾರಿತ ಸಿನಿಮಾ ವೀರಚಂದ್ರಹಾಸ ಈಗ ಆಸ್ಕರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸಂಭ್ರಮವನ್ನು ರವಿ ಬಸ್ರೂರು ಅವರು ಹಂಚಿಕೊಂಡರು. ನೆರೆದಿರುವ ಸಭೆಯು ಒಕ್ಕೊರಲಿನಿಂದ ಎದ್ದು ನಿಂತು ಗೌರವ ಸಲ್ಲಿಸಿದರು.

ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಶುಭ ಹಾರೈಸಿದರು. ವೇದಿಕೆಯಲ್ಲಿ ಅರಸಯ್ಯನ ಪ್ರೇಮ ಪ್ರಸಂಗ ಚಿತ್ರದ ನಿರ್ಮಾಪಕರಾದ ಮೇಘಶ್ರೀ ರಾಜೇಶ್, ನಿರ್ದೇಶಕರಾದ ಜಿ.ವಿ.ಆರ್. ದೀಪು, ನಾಯಕಿ ರಶ್ಮಿತಾ ಗೌಡ ಉಪಸ್ಥಿತರಿದ್ದರು.

ಕುಂದಾಪ್ರ ಕನ್ನಡ ಪ್ರತಿಷ್ಠಾನ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು, ಪಟ್ಲ ಫೌಂಡೇಶನ್ ಘಟಕ, ಬೆಂಗಳೂರು ಅಧ್ಯಕ್ಷ ಅಮರನಾಥ ಶೆಟ್ಟಿ, ಅಯೋಧ್ಯ ಗ್ರೂಪ್ಸ್ ಹೋಟೆಲ್ ಮಾಲಕರಾದ ನವೀನ್ ಶೆಟ್ಟಿ ಐರಬೈಲ್, ಉದ್ಯಮಿ ಉಮೇಶ್ ಕುಂದರ್, ಕಾರ್ಮಿಕ ಪರಿಷತ್ ಅಧ್ಯಕ್ಷರಾದ ರವಿ ಶೆಟ್ಟಿ ಬೈಂದೂರು , ನ್ಯಾಯವಾದಿ ಎ.ಎನ್. ಹೆಗಡೆ ಕಡತೋಕ, ಹಿರಿಯ ಯಕ್ಷಗಾನ ಸಂಘಟಕ ಮನೋಜ್ ಭಟ್, ರೀಗಲ್ ಜ್ಯುವೆಲ್ಲರ್ಸ್‌ನ ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.

ಅಜಿತ್ ಉಳ್ತೂರು ಮತ್ತು ಕೆ.ಎಂ ಶೇಖರ್ ಅವರು ನಿರೂಪಿಸಿದರು. ಸಂಘಟಕರಾದ ನಾಗರಾಜ್ ಶೆಟ್ಟಿ ನೈಕಂಬ್ಳಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಅತಿಥಿಗಳಿಗೆ ಗಿಡ ವಿತರಣೆ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!