spot_img
Sunday, March 15, 2026
spot_img

ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ | 90 ಲಕ್ಷ ಲಾಭ | ಶೇ.12 ದಿವಿಡೆಂಡ್ ಘೋಷಣೆ

ಕುಂದಾಪುರ: ಮೀನುಗಾರ ಸದಸ್ಯರ ಅಭ್ಯುದಯಲ್ಲಿ ಶ್ರಮಿಸುತ್ತಿರುವ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘವು 26 ಸಹಕಾರಿ ವರ್ಷಗಳನ್ನು ಪೂರ್ಣಗೊಳಿಸಿ ಮುನ್ನೆಡೆಯುತ್ತಿದೆ. ಸಂಘದ ಸಾಧನೆಗೆ ಸರಕಾರ ಮಟ್ಟದಲ್ಲಿ ಈಗಾಗಲೇ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ವರದಿ ವರ್ಷದಲ್ಲಿಯೂ ಸಂಘವು ಉತ್ತಮ ವ್ಯವಹಾರ ನಡೆಸಿದ್ದು, ವರ್ಷಂತ್ಯಕ್ಕೆ ರೂ.59,82,27,453.36 ಠೇವಣಾತಿಗಳನ್ನು ಹೊಂದಿದ್ದು, ರೂ.90,77,625.11 ನಿವ್ವಳ ಲಾಭ ಗಳಿಸಿದೆ. 12% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾದ ರಾಜೀವ ಶ್ರೀಯಾನ್ ಗುಜ್ಜಾಡಿ ತಿಳಿಸಿದರು.

ಅವರು ಸೆ.20ರಂದು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರದಿ ವರ್ಷದ ಅಂತ್ಯಕ್ಕೆ ಒಟ್ಟು 26,994 ಸದಸ್ಯರು ಇದ್ದು, ಒಟ್ಟು ರೂ.1,41,43,610 ಪಾಲು ಬಂಡವಾಳವನ್ನು ಹೊಂದಿದೆ. ಸಂಘವು ವರದಿ ಸಾಲಿನಲ್ಲಿ ಸದಸ್ಯರ ವಿವಿಧ ಉದ್ದೇಶಗಳಿಗೆ ಒಟ್ಟು ರೂ.60,64,60,002 ನೀಡಿದ್ದು, ರೂ.53,28,94,098 ವಸೂಲಾತಿ ಆಗಿರುತ್ತದೆ. ಸಂಘವು ವಿವಿಧ ಬ್ಯಾಂಕ್ ಖಾತೆಗಳಲ್ಲಿ ರೂ.27,28,200.17 ಹೊಂದಿದ್ದು, ರೂ.3,40,05,177 ಸ್ಥಿರ, ಚರಾಸ್ಥಿಗಳನ್ನು ಹೊಂದಿದೆ. ರೂ. 7,22,37,070 ವಿವಿಧ ನಿಧಿಗಳನ್ನು ಹೊಂದಿದೆ. ಸಂಘವು ‘ಎ’ ತರಗತಿಯಲ್ಲಿ ವರ್ಗಿಕರಣವಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಸುಮತಿ ಬಿ ಮೊಗವೀರ, ನಿರ್ದೇಶಕರಾದ ಲೋಹಿತಾಶ್ವ ಆರ್.ಕುಂದರ್ ಬಾಳಿಕೆರೆ, ರವೀಂದ್ರ ಜಿ.ಮೆಂಡನ್ ಗುಡ್ಡಮ್ಮಾಡಿ, ಶ್ಯಾಮಲ ಜಿ.ಚಂದನ್, ರಾಮ ಮೊಗವೀರ ಕೊಡ್ಲಾಡಿ, ರಾಮ ಮೊಗವೀರ ಬೈಂದೂರು, ವನಿತಾ ಎಸ್.ಮೊಗವೀರ ಕೋಟೇಶ್ವರ, ಸುಶೀಲ ಕೆ.ಮೊಗವೀರ ಬೈಂದೂರು ಉಪಸ್ಥಿತರಿದ್ದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿ, ವರದಿ ಮಂಡಿಸಿದರು. ಸಿಬ್ಬಂದಿಗಳಾದ ಸಂತೋಷ್ ಎಸ್.ಎಂ., ಸಂತೋಷ್, ಜಲಜ, ವಿವಿಧ ಪಟ್ಟಿಗಳನ್ನು ವಾಚಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!