spot_img
Monday, February 16, 2026
spot_img

ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ| 59 ಲಕ್ಷ ಲಾಭ| ಶೇ.15 ಡಿವಿಡೆಂಡ್ ಘೋಷಣೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘವು ಸಹಕಾರಿ ಮೂಲ ತತ್ವದ ಆಶಯದಂತೆ ಕಾರ್ಯನಿರ್ವಹಿಸುತ್ತಿದ್ದು, ಯಶಸ್ವಿ 69 ವರ್ಷಗಳನ್ನು ಪೂರೈಸಿ 70ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ವರದಿ ವರ್ಷದ ಅಂತ್ಯಕ್ಕೆ ಸಂಘವು ರೂ.39,45,53,381.24 ಠೇವಣಾತಿಯನ್ನು ಹೊಂದಿದ್ದು, ರೂ.59,76,961.65 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೆ.ಎನ್.ಚಂದ್ರಶೇಖರ ಅಡಿಗ ತಿಳಿಸಿದರು.

ಅವರು ಸೆ.19ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ವಠಾರದಲ್ಲಿ ನಡೆದ ಸಂಘದ 2024-25ನೇ ಸಾಲಿನ 69ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ವರದಿ ವರ್ಷದ ಅಂತ್ಯಕ್ಕೆ 4173 ಸದಸ್ಯರನ್ನು ಹೊಂದಿದ್ದು, ಸದಸ್ಯರಿಂದ ಒಟ್ಟು ರೂ.1,38,80,949 ಪಾಲು ಹಣವನ್ನು ಸಂಗ್ರಹಿಸಿದೆ. ಸಂಘವ ದುಡಿಯುವ ಬಂಡವಾಳದ ಮೂಲಗಳಲ್ಲಿ ಠೇವಣಿಯು ಪ್ರಮುಖವಾಗಿದ್ದು, ಸಂಘದ ಸದಸ್ಯರು ಅವರ ಅವಲಂಬಿತರು, ನಿವೃತ್ತರು ಠೇವಣಿ ರೂಪದಲ್ಲಿ ಹಣ ತೊಡಗಿಸಿದ್ದು, ಠೇವಣಿದಾರರ ಬದುಕಿಗೆ ದಾರಿ ದೀಪವಾಗಿದೆ. ಪ್ರಸ್ತುತ ಸಾಲಿನಲ್ಲಿ ಠೇವಣಿ ಸಂಗ್ರಹಣೆ ಶೇ.18.22% ಹೆಚ್ಚಳವಾಗಿದೆ ಎಂದರು.

ವರದಿ ವರ್ಷದಲ್ಲಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕುಗಳಿಂದ ಒಟ್ಟು ರೂ. 12,92,17,816 ಸಾಲ ಪಡೆದಿದ್ದು, ರೂ.11,21,47,158 ಹಿಂತಿರುಗಿಸಲಾಗಿದೆ. ಸದಸ್ಯರ ವಿವಿಧ ಉದ್ದೇಶಗಳಿಗೆ ವರದಿ ಸಾಲಿನಲ್ಲಿ ರೂ.23,81,91,850 ಸಾಲ ನೀಡಲಾಗಿದೆ. ವರದಿ ವರ್ಷಂತ್ಯಕ್ಕೆ ರೂ.40,06,02,831 ಸದಸ್ಯರ ಸಾಲ ಬಾಕಿ ಇರುತ್ತದೆ. ಶೇ.96.75% ಸಾಲ ವಸೂಲಾತಿ ಆಗಿದೆ. ಸಂಘವು ‘ಎ’ ಶ್ರೇಣಿಯಲ್ಲಿ ಆಡಿಟ್ ವರ್ಗೀಕರಣವಾಗಿದೆ ಎಂದರು.

ಸರಕಾರದ ಕಿಸಾನ್ ಕ್ರೆಡಿಟ್ ಸಾಲ ಯೋಜನೆಯನ್ನು ಸಂಘವು ತನ್ನ ಸದಸ್ಯರಿಗೆ ರೂ.8,51,02,000ರಷ್ಟರ ಶೂನ್ಯ ಬಡ್ಡಿ ಸಾಲ ನೀಡಲಾಗಿದೆ. ಸಂಘವು ಸೇವೆ ದೃಷ್ಟಿಯಿಂದ ವ್ಯಾಪಾರ ವಹಿವಾಟು ನಡೆಸುತ್ತಿದ್ದು ವರದಿ ಸಾಲಿನಲ್ಲಿ ರೂ.10,19,426.71 ಲಾಭ ಗಳಿಸಿದೆ. ಸಂಘವು ಒಟ್ಟು ರೂ.3,96,30,058.87 ನಿಧಿಗಳನ್ನು ಹೊಂದಿದೆ ಎಂದರು.

ಕೇಂದ್ರ ಕಛೇರಿ ಹಾಗೂ ಶಾಖೆಯ ಸದಸ್ಯರಿಗೆ ಶೀಘ್ರ ಸಾಲ ನೀಡುವ ಉದ್ದೇಶ ಹಾಗೂ ತುರ್ತು ಅವಶ್ಯಕತೆಗಳ ಮಂಜೂರಾತಿಗಾಗಿ ಪ್ರತೀ ತಿಂಗಳಲ್ಲಿ 2 ಆಡಳಿತ ಸಭೆಯನ್ನು ಕರೆಯಲಾಗುತ್ತಿದೆ. ಕೃಷಿ ಹಾಗೂ ಕಟ್ಟಡ ಸಾಮಾಗ್ರಿ ಮಳಿಗೆಯಲ್ಲಿ ಈ ಭಾಗದ ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ಬೇಕಾದ ಗುಣಮಟ್ಟದ ಸಾಮಗ್ರಿಗಳು ಲಭಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಪೈಂಟಿಂಗ್‍ಗೆ ಬೇಕಾದ ಎಲ್ಲಾ ವಿಧವಾದ ಬಣ್ಣಗಳು ನಮ್ಮಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ನಮ್ಮ ಶಾಖೆಯಲ್ಲಿ ಆ ಭಾಗದ ಜನರಿಗೆ ಕೃಷಿ ಸಾಲ, ಸ್ವಂತ ಬಂಡವಾಳ ಸಾಲ ಮತ್ತು ಗೃಹನಿರ್ಮಾಣ ಸಾಲವನ್ನು ಅತೀ ಶೀಘ್ರವಾಗಿ ಒದಗಿಸಲಾಗುತ್ತಿದೆ. ಸಂಘದಲ್ಲಿ ಮೊಬೈಲ್ ನಂಬರ್ ನೀಡಿದ ಸದಸ್ಯರಿಗೆ ತಮ್ಮ ಖಾತೆಯ ವ್ಯವಹಾರವನ್ನು ಅಂಡ್ರಯ್ಡ್ ಮೊಬೈಲ್‍ನಲ್ಲಿ ನೋಡುವ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದರು. ಸಂಸ್ಥೆಯ ವತಿಯಿಂದ ಕೃಷಿ ಹಾಗೂ ಕಟ್ಟಡ ಸಾಮಾಗ್ರಿ ಮಳಿಗೆಯನ್ನು ತೆರೆಯಲಾಗಿದೆ. ಪ್ರತೀ ಬುಧವಾರ ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ಸಂಘದಲ್ಲಿ ಅಡಿಕೆ, ಕಾಳುಮೆಣಸು ಖರೀದಿ ಮಾಡಲಾಗುತ್ತಿದೆ. ಆರೆಶಿರೂರು ಶಾಖೆ ಕೂಡಾ ಲಾಭದಾಯಕವಾಗಿ ಮುನ್ನೆಡೆಯುತ್ತಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಶ್ಯಾನುಭೋಗ ಸಭೆಯ ನಡಾವಳಿ, ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಹಾಗೂ ನಿರ್ದೇಶಕರಾದ ಅರುಣ್ ಕುಮಾರ್ ಶೆಟ್ಟಿ ಎಂ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಶಿವರಾಮಕೃಷ್ಣ ಭಟ್, ಸುಧೀರ್ ಹೆಬ್ಬಾರ್, ಪ್ರಕಾಶ್, ಸಂದೀಪ್ ಆರ್., ಅರುಣ್ ಕುಮಾರ್ ಶೆಟ್ಟಿ ಎಂ., ಚಂದ್ರ ಬಳೆಗಾರ ಕೆ., ವಿಶ್ವನಾಥ ಶೆಟ್ಟಿ, ಶ್ರೀಮತಿ ಶ್ರೀದೇವಿ ಎಲ್.ಭಟ್, ಶ್ರೀಮತಿ ಸವಿತಾ, ವಾಸು, ಭುಜಂಗ, ಸಹಕಾರ ಸಂಘಗಳ ಮೇಲ್ವಿಚಾರಕರಾದ ಶಿವರಾಮ ಪೂಜಾರಿ, ಸಂಘದ ಆಂತರಿಕ ಲೆಕ್ಕ ಪರಿಶೋಧಕರಾದ ರಾಜು ಎಮ್ ಸಾಲಿಯನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಅರೆಶಿರೂರು ಶಾಖೆಯಲ್ಲಿ ನಡೆಯಬಹುದಾಗಿದ್ದ ದರೋಡೆಯ ಬಗ್ಗೆ ತಕ್ಷಣ ಮಾಹಿತಿ ನೀಡಿದ ಸೈನ್ ಇನ್ ಸೆಕ್ಯೂರಿಟಿಯ ಕೃಷ್ಣ ಆರ್ ಪೂಜಾರಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಸಂಘದ ವ್ಯಾಪ್ತಿಯ ಕೃಷಿ ಸಾಧಕರಾದ ಶ್ರೀನಿವಾಸ ಭಟ್ ಸಂಪ್ರೆ, ಚಂದ್ರ ನಾಯ್ಕ ಬಾವುಡಿ, ಭಾಸ್ಕರ ನಾಯ್ಕ ಸಲಗೇರಿ, ಕಿಶನ ಶೆಟ್ಟಿ ದಳಿ, ಗಂಗು ಹೆಂಗ್ಸು ಹಳ್ಳಿಬೇರು, ಗುಲಾಬಿ ದಳಿ ಇವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಹಿರಿಯ ನಾಗರಿಕರಾದ ಸುಶೀಲ, ಕೊರ್ಗು, ಮಂಜು ನಾಯ್ಕ, ಕೆ.ವೆಂಕಟೇಶ ಪುರಾಣಿಕ, ಪಾರ್ವತಿ, ಪುರುಷೋತ್ತಮ ಜೋಯ್ಸ, ವಿಷ್ಣು ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ವೈದ್ಯಾಧಿಕಾರಿಗಳಾದ ಡಾ.ಶ್ರೀಕಾಂತ್, ಡಾ.ಶೈಲೇಶ್ ಜೆ.ರಾವ್ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಹಾರ್ಡ್‍ವೇರ್ ಮಳಿಗೆಯಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿದ ವಿಘ್ನೇಶ್ವರ ಅಡಿಗ, ಅಜಯ್, ರಾಜೇಶ ಭಟ್, ಸುಧೀರ್ ಹೆಬ್ಬಾರ್, ರೋಹಿತ್ ಜೋಯ್ಸ, ಅರುಣ್ ಕುಮಾರ್ ಶೆಟ್ಟಿ, ಪ್ರಸನ್ನ, ಗೋವಿಂದ ಜೆ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ನಿರ್ದೇಶಕ ಚಂದ್ರ ಬಳೆಗಾರ ಸ್ವಾಗತಿಸಿ, ನಿರ್ದೇಶಕ ಸಂದೀಪ ಆರ್ ಮತ್ತು ಚಂದ್ರ ಬಳೆಗಾರ್ ಸನ್ಮಾನ ಪತ್ರ ವಾಚಿಸಿದರು. ನಾಗೇಂದ್ರ ಬಳೆಗಾರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!