spot_img
Monday, February 16, 2026
spot_img

ಮರವಂತೆ ಬಡಾಕೆರೆ ವ್ಯ.ಸೇ.ಸ.ಸಂಘ: ವಾರ್ಷಿಕ ಮಹಾಸಭೆ | 1 ಕೋಟಿಗೂ ಮಿಕ್ಕಿ ಲಾಭ: 13% ಡಿವಿಡೆಂಡ್: ಹಕ್ಕಾಡಿ ಜಗದೀಶ್ ಪೂಜಾರಿ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಎಲ್ಲಾ ರೈತರಿಗೆ ಸಾಲ ನೀಡುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಭೂ ಅಡಮಾನ ಸಾಲಕ್ಕೆ 12% ಬಡ್ಡಿ ನಿಗದಿ ಪಡಿಸಲಾಗಿದೆ. ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವುದರೊಂದಿಗೆ 3% ಬಡ್ಡಿದರದಲ್ಲಿ ಕೃಷಿ ಅಭಿವೃದ್ಧಿ ಸಾಲ ನೀಡಲಾಗುವುದು. ಈ ಬಾರಿ 437 ಕೋಟಿ ವ್ಯವಹಾರ ಮಾಡಲಾಗಿದ್ದು, 1 ಕೋಟಿ 10 ಲಕ್ಷಕ್ಕೂ ಮಿಕ್ಕಿ ಲಾಭ ಗಳಿಸಲಾಗಿದೆ ಎಂದು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಹಕ್ಕಾಡಿ ಜಗದೀಶ್ ಪೂಜಾರಿ ಹೇಳಿದರು.

ಅವರು ಶುಕ್ರವಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂಘವು ನಿರಂತರ ಪ್ರಗತಿ ಪಥದತ್ತ ಮುನ್ನಡೆಯುತ್ತಿದೆ. ಠೇವಣಿ ಸಂಗ್ರಹಣೆಯಲ್ಲಿ ಈ ವರ್ಷ 15 ಕೋಟಿ ಹೆಚ್ಚಳವಾಗಿದೆ. ಒಟ್ಟು 73 ಕೋಟಿ 95 ಲಕ್ಷಕ್ಕೂ ಮಿಕ್ಕಿ ಠೇವಣಿ ಹೊಂದಿದ್ದೇವೆ ಎಂದರು.

ಕೋಯಾನಗರ ಭಾಗದಲ್ಲಿ ಸರಿಯಾದ ಕಟ್ಟಡ ದೊರೆತರೆ ಪಡಿತರ ಮಾರಾಟ ಡಿಪೋವನ್ನು ಒಂದು ವರ್ಷದೊಳಗೆ ಆರಂಭಿಸಲಾಗುವುದು ಎಂದು ತಿಳಿಸದ ಅವರು ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಸದಸ್ಯರು ಸಹಕರಿಸಬೇಕೆಂದು ವಿನಂತಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ ವಾರ್ಷಿಕ ವರದಿ ಮಂಡಿಸಿದರು. ವರದಿ ವರ್ಷದಲ್ಲಿ ಸಂಘವು 13,942 ಒಟ್ಟು ಸದಸ್ಯರಿದ್ದು, ರೂ.2,35,06,908 ಪಾಲು ಬಂಡವಾಳ ಹೊಂದಿದೆ. ಸಂಘವು ಒಟ್ಟು ರೂ.6,72,39,438 ವಿವಿಧ ನಿಧಿಗಳನ್ನು ಹೊಂದಿದೆ. ಸಂಘವು ರೂ.73,95,90,275 ಕೋಟಿ ಠೇವಣಿ ಹೊಂದಿದೆ. ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ರೂ. 12,08,32,109 ಸಾಲ ಪಡೆದು ಕೃಷಿಕರಿಗೆ ವಿತರಿಸಲಾಗಿದೆ.

ಸದಸ್ಯರಿಗೆ 48 ಕೋಟಿ 52 ಲಕ್ಷ ಸಾಲವನ್ನು ವಿತರಿಸಲಾಗಿದೆ. 224 ಸ್ವ ಸಹಾಯ ಗುಂಪುಗಳಿಗೆ 8 ಕೋಟಿ ಸಾಲ ವಿತರಿಸಲಾಗಿದೆ. ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ರೂ.35,15,81,139 ರೂ.ಗಳನ್ನು ಧನವಿನಿಯೋಗಿಸಲಾಗಿದೆ ಎಂದು ವರದಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.

ಸಂಘದ ಉಪಾಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ನರಸಿಂಹ ದೇವಾಡಿಗ, ಗಣೇಶ ಪೂಜಾರಿ, ಶ್ರೀನಿವಾಸ ಪೂಜಾರಿ, ಹರೀಶ್ಚಂದ್ರ ಆಚಾರ್ಯ, ಪ್ರಭಾಕರ ಎಂ. ಖಾರ್ವಿ, ಗಣೇಶ್ ಕೆ. ಪೂಜಾರಿ, ವೀರೇಂದ್ರ ಹೆಗ್ಡೆ, ರಾಮ ಕಂತಿಹೊಂಡ, ಸುರೇಶ್ ನಾಯ್ಕ್, ಶ್ರೀಮತಿ ಲಕ್ಷ್ಮೀ, ಶ್ರೀಮತಿ ಶಶಿಕಲಾ, ನಾಮ ನಿರ್ದೇಶಿತ ಸದಸ್ಯರಾದ ಎಂ. ಅಣ್ಣಪ್ಪ ಬಿಲ್ಲವ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ್ ಉಪಸ್ಥಿತರಿದ್ದರು.

ಸಭೆಯು ರೂ 1,10,89,655 ಈ ಬಾರಿ ಲಾಭ ಪಡೆದಿದ್ದು 13% ಡಿವಿಡೆಂಡ್ ನೀಡುವಿಕೆಗೆ ಒಪ್ಪಿಗೆ ನೀಡಿತು.

ಇದೇ ಸಂದರ್ಭದಲ್ಲಿ ಸಿ.ಎ. ಪಾಸಾದ ಕುದ್ರಗೋಡು ಕೀರ್ತನ ಎನ್. ಶೆಟ್ಟಿ, ಪ್ರಗತಿಪರ ಕೃಷಿಕರಾದ ಅಶೋಕ ಶೆಟ್ಟಿ ಮುಳ್ಳುಗುಡ್ಡೆ, ನಿವೃತ್ತ ಶಾಖಾ ವ್ಯವಸ್ಥಾಪಕ ಸೋಮಯ್ಯ ಬಿಲ್ಲವ ಇವರುಗಳನ್ನು ಸಂಘದ ಅಧ್ಯಕ್ಷರು ಸನ್ಮಾನಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!