spot_img
Thursday, April 2, 2026
spot_img

ಸೆ.20ಕ್ಕೆ ಬೆಂಗಳೂರಿನಲ್ಲಿ ಯಕ್ಷಸಂಕ್ರಾಂತಿ : ತೆಂಕು-ಬಡಗಿನ ಅಗ್ರಮಾನ್ಯ ಕಲಾವಿದರ ಕೂಡುವಿಕೆಯಲ್ಲಿ ಅಪರೂಪದ ಪ್ರಸಂಗಗಳ ಅದ್ದೂರಿ ಪ್ರದರ್ಶನ

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೆ.20 ಶನಿವಾರ ರಾತ್ರಿ 9 ಗಂಟೆಯಿಂದ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯಲ್ಲಿ ಯಕ್ಷ ಸಂಕ್ರಾಂತಿ ನಡೆಯಲಿದೆ. ಈ ವರ್ಷದ ಯಕ್ಷ ಸಂಕ್ರಾಂತಿಯಲ್ಲಿ ತೆಂಕು ಬಡಗಿನ ಅತಿಥಿ ದಿಗ್ಗಜರ ಸಮಾಗಮದಲ್ಲಿ ರಾಮ ನಿರ್ಯಾಣ, ಗಿರಿ ಪೂಜೆ, ಕಾಲಯವನ, ಚಿತ್ರಸೇನ ಎನ್ನುವ ಅಪರೂಪದ ನಾಲ್ಕು ಪೌರಾಣಿಕ ಪ್ರಸಂಗಗಳ ಭರ್ಜರಿ ಪ್ರದರ್ಶನ ನಡೆಯಲಿದೆ.

ಯಕ್ಷ ಸಂಕ್ರಾಂತಿ ಯಕ್ಷಗಾನದಲ್ಲಿ ಒಂದು ಅಲೆಯನ್ನು ಸೃಷ್ಟಿಸಿದೆ. ಎಲ್ಲ ವಯೋಮಾನದ, ವಿಶೇಷವಾಗಿ ಯುವ ಪ್ರೇಕ್ಷಕರನ್ನು ರಂಗಸ್ಥಳದತ್ತ ಬರುವಂತೆ ಮಾಡಿದೆ. ರಾಜಧಾನಿಯಲ್ಲಿ ಪ್ರತೀವರ್ಷ ಯಕ್ಷಸಂಕ್ರಾಂತಿ ಎಂದಾಗ ಯಕ್ಷಪ್ರೇಮಿಗಳ ಕುತೂಹಲಗೊಳ್ಳುತ್ತಾರೆ. ಪ್ರಸಂಗ, ಕಲಾವಿದರ ಬಗ್ಗೆ ಸ್ವಯಂ ಕೌತುಕ ಸೃಷ್ಟಿಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಕಲಾಭಿಮಾನಿಗಳ ಸಂಖ್ಯೆಯೂ ಯಕ್ಷಸಂಕ್ರಾಂತಿಗೆ ಹೆಚ್ಚಾಗುತ್ತಿದ್ದು, ಪ್ರೇಕ್ಷಕರ ಬೇಡಿಕೆ, ಆಧ್ಯತೆ, ಅಪೇಕ್ಷೆಯನ್ನು ಸಂಘಟಕರು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿರುವುದು ಯಕ್ಷಸಂಕ್ರಾಂತಿಯ ಯಶಸ್ಸಿಗೆ ಕಾರಣವಾಗಿದೆ.

ಈ ಯಕ್ಷಸಂಕ್ರಾಂತಿಗೆ ಗೌರವಪೂರ್ವಕವಾಗಿ ಲೆಜೆಂಡ್ ಕಲಾವಿದರಾದ ಕೃಷ್ಣಯಾಜಿ ಬಳ್ಕೂರು, ರಾಮಚಂದ್ರ ಹೆಗಡೆ ಕೊಂಡದಕುಳಿ, ಜಬ್ಬಾರ್ ಸಮೋ ಭಾಗವಹಿಸಲಿದ್ದಾರೆ.

ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ, ಹಿಲ್ಲೂರು, ಚಂದ್ರಕಾಂತ್ ರಾವ್, ಮೂಡುಬೆಳ್ಳೆ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮಧುಕರ ಹೆಗ್ಡೆ ಮಡಾಮಕ್ಕಿ, ಶ್ರೀನಿವಾಸ ಪ್ರಭು, ಅಕ್ಷಯ್ ಆಚಾರ್ಯ, ಶಶಾಂಕ ಆಚಾರ್ಯ, ಪ್ರಜ್ವಲ್ ಮುಂಡಾಡಿ ಭಾಗವಹಿಸಲಿದ್ದಾರೆ.

ಹೊಸ್ತೋಟ ಮಂಜುನಾಥ ಭಾಗವತರು ಬರೆದಿರುವ ರಾಮ ನಿರ್ಯಾಣ ಪ್ರಸಂಗದಲ್ಲಿ ಶ್ರೀರಾಮನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಕಾಲಪುರುಷನಾಗಿ ಕೃಷ್ಣ ಯಾಜಿ ಬಳ್ಕೂರು, ಲಕ್ಷ್ಮಣನಾಗಿ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ದೂರ್ವಾಸನ ಪಾತ್ರದಲ್ಲಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಊರ್ಮಿಳೆಯಾಗಿ ಸುಧೀರ್ ಉಪ್ಪೂರು ಕಾಣಿಸಿಕೊಳ್ಳಲಿದ್ದಾರೆ.

ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ವಿರಚಿತ ಗಿರಿ ಪೂಜೆ ಎರಡನೇ ಪ್ರಸಂಗವಾಗಿ ಪ್ರದರ್ಶನಗೊಳ್ಳಲಿದ್ದು, ಇಂದ್ರನಾಗಿ ಶಂಕರ ಹೆಗಡೆ ನೀಲ್ಕೋಡು, ಕೃಷ್ಣನಾಗಿ ವಿಶ್ವನಾಥ ಹೆನ್ನಾಬೈಲ್, ಮಕರಂಧನ ಪಾತ್ರದಲ್ಲಿ ಪ್ರಜ್ವಲ್ ಕುಮಾರ್, ಗೋಪಾಲಕನಾಗಿ ದಿನೇಶ್ ಕನ್ನಾರ್, ಪಿಂಗಳಾವರ್ತನಾಗಿ ಭಾಸ್ಕರ ಮರಾಠೆ ಪುಷ್ಕಳಾವರ್ತನಾಗಿ ಕೆ.ಜೆ ಕಾರ್ತಿಕ ಅಭಿನಯಿಸಲಿದ್ದಾರೆ.

ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ ಕಾಲಯವನ ಪ್ರಸಂಗದಲ್ಲಿ ಕಾಲಯವನ-ವಿದ್ಯಾಧರ್ ರಾವ್ ಜಲವಳ್ಳಿ, ಮುಚುಕುಂದ- ಜಬ್ಬಾರ್ ಸಮೋ, ಕೃಷ್ಣ-ಉದಯ ಹೆಗಡೆ ಕಡಬಾಳ್, ಬಲರಾಮ-ಕಾರ್ತಿಕ್ ಕಣ್ಣಿಮನೆ, ಮಾಗದ-ಸುನಿಲ್ ಹೊಲಾಡು, ಕಾಲಯವನ ಸಖ-ರವೀಂದ್ರ ದೇವಾಡಿಗ ನಾರದ-ಪ್ರಜ್ವಲ್ ಕುಮಾರ್.

ದೇವಿದಾಸ ವಿರಚಿತ ಚಿತ್ರಸೇನ ಕೊನೆಯ ಪ್ರಸಂಗವಾಗಿ ಪ್ರದರ್ಶನಗೊಳ್ಳಲಿದೆ. ಕೌರವನ ಪಾತ್ರದಲ್ಲಿ ನರಸಿಂಹ ಚಿಟ್ಟಾಣಿ, ಚಿತ್ರಸೇನನಾಗಿ ವಿಶ್ವನಾಥ ಆಚಾರ್ಯ ತೊಂಬಟ್ಟು, ಧರ್ಮರಾಯನಾಗಿ ಅಣ್ಣಪ್ಪ ಮಾಗೋಡು, ಅರ್ಜುನ (ಕಾದಿರಿಸಲಾಗಿದೆ), ಮಾಯಾಕೋವಿದನಾಗಿ ನಂದೀಶ್ ಜನ್ನಾಡಿ, ಹಾಸ್ಯ : ಪುರಂದರ ಮೂಡ್ಕಣಿ, ಭಾನುಮತಿಯಾಗಿ ಸಂತೋಷ್ ಹೆಂಗವಳ್ಳಿ, ದ್ರೌಪದಿಯಾಗಿ ಪುರುಷೋತ್ತಮ ಸಾಗರ, ಕರ್ಣನಾಗಿ ದಿನೇಶ್ ಕನ್ನಾರ್, ದುಷ್ಕರ್ಣನಾಗಿ ಕೆ.ಜೆ ಕಾರ್ತಿಕ, ವಿಕರ್ಣನಾಗಿ ಭಾಸ್ಕರ ಮರಾಠೆ, ದುಶ್ಯಾಸನನ ಪಾತ್ರದಲ್ಲಿ ಮಾಸ್ಟರ್ ಆತ್ರೇಯ ಗಾಂವ್ಕರ್ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಆನ್‌ಲೈನ್ ಟಿಕೇಟ್ ಬುಕ್ಕಿಂಗ್ ಆರಂಭಗೊಂಡಿದ್ದು ಮಾಹಿತಿಗೆ ಈ ದೂರವಾಣಿ ಸಂಖ್ಯೆಯನ್ನು ೯೭೪೧೪೭೪೨೫೫ ಸಂಪರ್ಕಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!