spot_img
Friday, March 13, 2026
spot_img

ಬೀಜಾಡಿ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 58 ಕೋಟಿ ಠೇವಣಾತಿ | 1.25 ಕೋಟಿ ಲಾಭ | ಶೇ.15 ಡಿವಿಡೆಂಡ್ ಘೋಷಣೆ

ಕುಂದಾಪುರ: ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಕಟ್ಟಿ ಬೆಳೆಸಿದ ಈ ಸಂಘವು ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಿದೆ. ಸಂಘವು ವರದಿ ವರ್ಷದಲ್ಲಿ ಅಂತ್ಯಕ್ಕೆ 17,001 ಸದಸ್ಯರನ್ನು ಹೊಂದಿ, ರೂ.1,61,72,876 ಪಾಲುಬಂಡವಾಳವನ್ನು ಹೊಂದಿದೆ. ರೂ.58,89,46,876 ಠೇವಣಾತಿ ಹೊಂದಿದ್ದು ಕಳೆದ ಸಾಲಿಗಿಂತ 10.56 ಕೋಟಿ ಹೆಚ್ಚುವರಿ ಠೇವಣಿ ಸಂಗ್ರಹವಾಗಿದ್ದು, ಶೇ.21.84ರಷ್ಟು ಹೆಚ್ಚಳವಾಗಿದೆ. ವರದಿ ವರ್ಷದ ಅಂತ್ಯಕ್ಕೆ ರೂಪಾಯಿ 1,25,60,279 ಲಾಭ ಗಳಿಸಿದೆ. ಶೇಕಡಾ 15 ಡಿವಿಡೆಂಡ್ ನಿರ್ಧರಿಸಲಾಗಿದೆ ಎಂದು ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ ಪೂಜಾರಿ ಬೀಜಾಡಿ ಹೇಳಿದರು.
ಅವರು ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಒಟ್ಟು 3,69,30,908.34 ವಿವಿಧ ನಿಧಿಗಳನ್ನು ಹೊಂದಿದೆ. ವರದಿ ಸಾಲಿನ ಆರಂಭದಲ್ಲಿ ರೂ.4641.61 ಲಕ್ಷ ಹೊರಬಾಕಿ ಸಾಲ ಇದ್ದು, ವರದಿ ಸಾಲಿನಲ್ಲಿ ರೂ.5602.32 ಲಕ್ಷ ಸಾಲ ನೀಡಿ, ರೂ. 4431.27 ಲಕ್ಷ ಸಾಲ ವಸೂಲಾತಿ ಮಾಡಲಾಗಿದೆ. ವರದಿ ಸಾಲಿನ ಅಂತ್ಯಕ್ಕೆ ಹೊರಬಾಕಿಯು ರೂ.5816.66 ಲಕ್ಷ ಇದ್ದು ಈ ಸಾಲಿನಲ್ಲಿ ಶೇ.97.85 ಸಾಲ ವಸೂಲಾತಿ ಆಗಿದೆ ಎಂದರು.
ಸಂಘವು ವಿವಿಧ ಬ್ಯಾಂಕ್‍ನ ಉಳಿತಾಯ ಖಾತೆಗಳಲ್ಲಿ ರೂ.1,84,26,778.53 ಹೊಂದಿದೆ. ವರ್ಷಾಂತ್ಯಕ್ಕೆ ವಿವಿಧ ಬ್ಯಾಂಕು ಮತ್ತು ಸಹಕಾರ ಸಂಸ್ಥೆಗಳಲ್ಲಿ ಹೂಡಿದ ಧನ ವಿನಿಯೋಗ ಒಟ್ಟು ರೂ.9,44,24,929.40 ಆಗಿದ್ದು ಬಡ್ಡಿ ರೂ.79,06,278 ಬಂದಿರುತ್ತದೆ. ಸಂಘವು ಒಟ್ಟು ರೂ.1,50,15,719.98 ಮೌಲ್ಯದ ಸ್ಥಿರ ಮತ್ತು ಚರ ಸೊತ್ತುಗಳನ್ನು ಹೊಂದಿದೆ.
ವರದಿ ವರ್ಷದಲ್ಲಿ ಸಂಘದ 42 ಮಂದಿ ಸದಸ್ಯರು ಮರಣ ಹೊಂದಿದ್ದು ಶವ ಸಂಸ್ಕಾರಕ್ಕಾಗಿ ರೂ.1,19,000 ಮರಣ ನಿಧಿ ಪರಿಹಾರ ನೀಡಲಾಗಿದೆ. ಮೀನುಗಾರಿಕಾ ಇಲಾಖೆಯ ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ 2 ಮಂದಿ ಮೀನುಗಾರರು ಮೀನುಗಾರಿಕೆ ಸಂದರ್ಭ ಮೃತ ಪಟ್ಟಿದ್ದು ಮೃತರ ವಾರಿಸುದಾರರಿಗೆ ಒಬ್ಬರಿಗೆ ರೂ.8ಲಕ್ಷ, ಇನ್ನೋರ್ವರಿಗೆ 6ಲಕ್ಷ, ಮೀನುಗಾರರ ಸಾಮೂಹಿಕ ಜನತಾ ಅಪಘಾತ ವಿಮಾ ಯೋಜನೆಯಡಿ ಮೀನುಗಾರಿಕೆಯಲ್ಲಿ ಮೃತಪಟ್ಟ ಸದಸ್ಯರ 1 ಕುಟುಂಬಕ್ಕೆ ರೂ.5 ಲಕ್ಷ ವಿಮಾ ಪರಿಹಾರವನ್ನು ಒದಗಿಸಿಕೊಡಲಾಗಿದೆ ಎಂದರು.
ಸಂಘದ ಮೂಲಕ ಆಯೋಜಿಸಲ್ಪಟ್ಟ ಸುಮಾರು 700 ಸ್ವ-ಸಹಾಯ ಗುಂಪುಗಳು ಇದ್ದು, ಈ ಪೈಕಿ ವರದಿ ಸಾಲಿನಲ್ಲಿ 105 ಗುಂಪುಗಳಿಗೆ ಯೂನಿಯನ್ ಬ್ಯಾಂಕ್ ಮೂಲಕ ರೂ.5,30 ಕೋಟಿ ಸಾಲ ಒದಗಿಸಿಕೊಡಲಾಗಿದೆ. ಅಲ್ಲದೆ ನಮ್ಮ ಸಂಘದಿಂದ 139 ಸಂಘಗಳಿಗೆ ರೂ.7.37 ಕೋಟಿ ಸಾಲ ನೀಡಲಾಗಿದೆ ಎಂದರು.
ಮತ್ಸ್ಯಾಶ್ರಯ ಯೋಜನೆಯಡಿ ಹಿಂದಿನ ಸಾಲಿನಲ್ಲಿ ಮಂಜೂರಾದ 99 ಮನೆಗಳಿಗೆ ಮೀನುಗಾರಿಕಾ ಇಲಾಖೆಯಿಂದ ವರದಿ ಸಾಲಿನಲ್ಲಿ ಅನುದಾನ ಬಿಡುಗಡೆಯಾಗಿದೆ. 2024-25ನೇ ಸಾಲಿಗೆ ಮಂಜೂರಾದ20 ಮನೆಗಳಿಗೆ ಅನುದಾನಕ್ಕೆ ಇಲಾಖೆಯ ಜೊತೆ ಪರಿವೀಕ್ಷಣೆ ನಡೆಸಿ ವರದಿ ಸಲ್ಲಿಸಲಾಗಿದೆ ಎಂದರು.
ಸಂಘದ ಸಾಧನೆಗೆ ಹಲವು ಪ್ರಶಸ್ತಿಗಳು ಲಭಿಸಿದ್ದು, 2023ರಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ದಿ ನಿಗಮ ನವದೆಹಲಿಯಿಂದ ಸಹಕಾರ ಶ್ರೇಷ್ಠತೆ ಮತ್ತು ಸಹಕಾರ ಅಭಿವೃದ್ಧಿ ಪ್ರಶಸ್ತಿ ನ್ಯಾಶನಲ್ ಆವಾರ್ಡ್, ಮೀನುಗಾರಿಕಾ ಇಲಾಖೆಯಿಂದ ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿಗಳಿಂದ ರಾಜ್ಯ ಮಟ್ಟದ ಅತ್ಯುತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ, 70ನೇ ಸಹಕಾರ ಸಪ್ತಾಹದಲ್ಲಿ ಸಹಕಾರ ಸಚಿವ ಕೆ.ರಾಜಣ್ಣ ಅವರಿಂದ ರಾಜ್ಯ ಮಟ್ಟದ ಅತ್ಯುತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ ಸಾಧನಾ ಪ್ರಶಸ್ತಿ ಲಭಿಸಿದೆ ಎಂದರು.
ಸಂಘವು ಹಿಂದಿನಂತೆ ಆಡಿಟ್ ವರ್ಗೀಕರಣದಲ್ಲಿ ಎ ವರ್ಗದ ಆಡಿಟ್ ವರ್ಗೀಕರಣಗೊಂಡಿದೆ. ಸಂಘವು ಕುಂದಾಪುರದ ವಡೇರಹೋಬಳಿ, ಕೋಟೇಶ್ವರ, ಹುಣ್ಸೆಮಕ್ಕಿಯಲ್ಲಿ ಶಾಖೆಗಳನ್ನು ಹೊಂದಿದ್ದು, ವರದಿ ಸಾಲಿನಲ್ಲಿ ತೆಕ್ಕಟ್ಟೆಯಲ್ಲಿ ಹೊಸ ಶಾಖೆಯನ್ನು ತೆರೆಯಲಾಗಿದೆ. ನಿಮ್ಮೆಲ್ಲರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸಂಘವನ್ನು ಮುನ್ನೆಡೆಸುತ್ತೇವೆ ಎಂದು ಅಶೋಕ್ ಪೂಜಾರಿ ಬೀಜಾಡಿ ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ, ಪದವಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಜು ತೋಟದಬೆಟ್ಟು, ನಿರ್ದೇಶಕರಾದ ಬಿ.ಮಂಜುನಾಥ ಕುಂದರ್ ಚಾತ್ರಬೆಟ್ಟು, ಬಿ.ಶಿವರಾಮ ಅಮೀನ್ ಬೀಜಾಡಿ, ಬಿ.ಶೇಖರ ಮೊಗವೀರ ಅಂಕದಕಟ್ಟೆ, ದಿನೇಶ ಮೆಂಡನ್ ಗೋಪಾಡಿ, ಅಣ್ಣಯ್ಯ ಪುತ್ರನ್ ಕುಂಭಾಶಿ, ಶ್ರೀಮತಿ ಜಾನಕಿ ಹಳೆ ಅಳಿವೆ, ಕುಮಾರಿ ಅನುಷಾ ಕೊರವಡಿ, ಶ್ರೀನಿವಾಸ ಮರಕಾಲ ಗೋಪಾಡಿ, ಶ್ರೀಮತಿ ಜ್ಯೋತಿ ಡಿ ಮೆಲ್ಲೋ ಕುಂದಾಪುರ, ನಾಗೇಶ ಬೀಜಾಡಿ, ಸಹ ನಿರ್ದೇಶಕರಾದ ವೆಂಕಟೇಶ್ ಕುಮಾರ್ ಬೀಜಾಡಿ, ಸುನೀಲ್ ಜಿ.ನಾಯ್ಕ್ ಚಾತ್ರಬೆಟ್ಟು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ ವರದಿ ಮಂಡಿಸಿದರು.
ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಿದರು.
ಸಂಘದ ಮೆನೇಜರ್ ಗಣೇಶ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ದಿನೇಶ ಸುವರ್ಣ ಪ್ರಾರ್ಥನೆ ಮಾಡಿದರು. ಉಪಾಧ್ಯಕ್ಷ ರಾಜು ತೋಟದಬೆಟ್ಟು ಸ್ವಾಗತಿಸಿದರು. ನಿರ್ದೇಶಕ ಅಣ್ಣಯ್ಯ ಪುತ್ರನ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!