spot_img
Friday, March 13, 2026
spot_img

ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : 86 ಕೋಟಿ ಠೇವಣಿ | ರೂ.1.3 ಕೋಟಿ ಲಾಭ : 15% ಡಿವಿಡೆಂಡ್ ಘೋಷಣೆ

ಬ್ರಹ್ಮಾವರ: ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ, ಸಹಕಾರ ಕ್ಷೇತ್ರದಲ್ಲಿ ಯಶಸ್ವಿ ಹೆಜ್ಜೆ ಇಡುತ್ತಿದೆ. ಸಂಘಕ್ಕೆ ಸತತವಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ದೊರಕುತ್ತಿದ್ದು, ಈ ಬಾರಿಯೂ ಲಭಿಸಿದೆ. ಉಪ್ಪೂರು ಮತ್ತು ಹಾವಂಜೆ ಕೇವಲ 2 ಗ್ರಾಮದ ಕಾರ್ಯವ್ಯಾಪ್ತಿಗೆ ಒಳಪಟ್ಟು ವ್ಯವಹಾರ ನಡೆಸಿ ಮುನ್ನಡೆಯುತ್ತಿರುವ ಸಂಘವು ವರದಿ ವರ್ಷದಲ್ಲಿ 1 ಕೋಟಿ 3 ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 15% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎನ್. ರಮೇಶ ಶೆಟ್ಟಿ ತಿಳಿಸಿದರು.

ಕೊಳಲಗಿರಿ ಚರ್ಚ್ ವಠಾರದ ಸೌಹಾರ್ದ ಸಭಾಂಗಣದಲ್ಲಿ ನಡೆದ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2024/2025ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ ಶೆಟ್ಟಿ ರವರು ಮಂಡಿಸಿದರು. ಸಂಘವು ವರದಿ ಸಾಲಿನಲ್ಲಿ 280 ಕೋಟಿ ವ್ಯವಹಾರ ನಡೆಸಿ, ಉತ್ತಮ ಪ್ರಗತಿ ಸಾಧಿಸಿದೆ. ಠೇವಣಾತಿಯು 86 ಕೋಟಿ 14 ಲಕ್ಷ ದಾಟಿದ್ದು, 64 ಕೋಟಿ 80 ಲಕ್ಷ ಸಾಲ ಹೊರ ಬಾಕಿ ಇರುತ್ತದೆ. ವರದಿ ಸಾಲಿನಲ್ಲಿ ಶೇಕಡಾ 95% ರಷ್ಟು ಸಾಲ ವಸೂಲಾಗಿದ್ದು ಶೇಕಡಾ 5% ರಷ್ಟು ಸುಸ್ತಿ ಸಾಲ ಬಾಕಿ ಇರುತ್ತದೆ. ವರದಿ ಸಾಲಿನಲ್ಲಿ 1 ಕೋಟಿ 3 ಲಕ್ಷ ಲಾಭ ಗಳಿಸಿದ್ದು, ಸತತವಾಗಿ 26 ವರ್ಷಗಳಿಂದ ‘ಎ’ ಶ್ರೇಣಿಯಲ್ಲಿ ಮುಂದುವರಿಯುತ್ತಿದೆ. ಸುಮಾರು 32 ಕೋಟಿ ಹಣವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ವಿವಿಧ ರೀತಿಯ ಠೇವಣಾತಿ ರೂಪದಲ್ಲಿ ವಿನಿಯೋಗ ಮಾಡಲಾಗಿದೆ ಎಂದು ವಿವರಿಸಿದರು.

ಸಂಘದ ಸದಸ್ಯರಲ್ಲಿ ಉತ್ತಮ ಭತ್ತದ ಬೇಸಾಯ ಮಾಡಿರುವ ರೈತ ಸದಸ್ಯರಾದ ದಿನೇಶ್ ಶೆಟ್ಟಿ ಅಮ್ಮುಂಜೆ ಹಾಗೂ ಶ್ರೀಕಾಂತ್ ಶೆಟ್ಟಿ ಮುಗ್ಗೇರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಶಿಕ್ಷಕರು ಎಚ್.ಸಖಾರಾಮ್ ಗೋಳಿಕಟ್ಟೆ, ಗ್ರಾಮ ಪಂಚಾಯತ್‍ನ ನಿವೃತ್ತರಾದ ಉಷಾ ಜೆ ಶೆಟ್ಟಿ ಮುಗ್ಗೇರಿ, ಬಸವ ಕೊಳಲಗಿರಿ ರವರನ್ನು ಸನ್ಮಾನಿಸಲಾಯಿತು.

ಸಿಎ ಉತ್ತೀರ್ಣರಾದ ಪಡಿವಾಳರ ಮನೆ ಆಕಾಶ್ ಆರ್ ಶೆಟ್ಟಿ, ಪೂರ್ವಿ ದಯಾನಂದ ಶೆಟ್ಟಿ ಮುಗ್ಗೇರಿ, ಶೈಕ್ಷಣಿಕ ಕ್ಷೇತ್ರದ ಪದವಿಯಲ್ಲಿ ರ್ಯಾಂಕ್ ಪಡೆದ ಪ್ರಜ್ವಲ್ ರಮೇಶ್ ನಾಯಕ್ ಹಾವಂಜೆ ಇವರನ್ನು ಸನ್ಮಾನಿಸಲಾಯಿತು.

ಸಂಘದ ಸದಸ್ಯರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಪ್ರತಿಭಾನ್ವಿತ 45 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಆಕಸ್ಮಿಕ ಅಪಘಾತದಿಂದ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವು, ಅನಾರೋಗ್ಯದಲ್ಲಿರುವ ಸದಸ್ಯರ ವೈದ್ಯಕೀಯ ಆರೋಗ್ಯ ಚಿಕಿತ್ಸೆಗೆ ಆರ್ಥಿಕ ನೆರವಿನ ಚಕ್ಕನ್ನು ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಯು. ಕೃಷ್ಣಪ್ಪ ಪೂಜಾರಿ, ನಿರ್ದೇಶಕರಾದ ಯು. ಹೂವಯ್ಯ ಸೇರ್ವೆಗಾರ್, ಪ್ರಪುಲ್ಲಚಂದ್ರ, ದೋಗು ಪೂಜಾರಿ, ಸುರೇಶ್ ಸುವರ್ಣ, ಪರಮೇಶ್ವರ ಯು, ಪ್ರೇಮಾ ಲೂವಿಸ್, ವಿದ್ಯಾ ಜಯರಾಮ ಶೆಟ್ಟಿ, ರಮೇಶ್ ಕರ್ಕೇರಾ, ಜಯಕರ ಆಚಾರ್, ಗುಣಾಕರ ನಾಯ್ಕ, ಕರುಣಾಕರ ಪೂಜಾರಿ, ಶಂಕರ ಶೆಟ್ಟಿ, ವಲಯ ಮೇಲ್ವಿಚಾರಕರಾದ ಕೆ. ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದರು.

ಸದಸ್ಯರಾದ ವನಿತಾ ಆಚಾರ್ ಪ್ರಾರ್ಥನೆ ಮಾಡಿದರು. ನಿರ್ದೇಶಕರಾದ ಪ್ರೇಮಾ ಲೂವಿಸ್ ಸ್ವಾಗತಿಸಿ, ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!