spot_img
Thursday, April 2, 2026
spot_img

ಸಾಂಸ್ಕೃತಿಕ ಚಿಂತಕ ಸಂತೋಷ್ ಕುಮಾರ್ ಪಡುಕೆರೆ ಅವರಿಗೆ ನುಡಿನಮನ

ಕೋಟ: ಇತ್ತೀಚಿಗೆ ಆಕಸ್ಮಿಕವಾಗಿ ಅಗಲಿದ ಶಿಕ್ಷಕ, ಸಾಂಸ್ಕ್ರತಿಕ ಸಂಘಟಕ, ಕೋಟ ದಸಂಸ ಕಾರ್ಯಕರ್ತ ಸಂತೋಷ್ ಕುಮಾರ್ ಪಡುಕೆರೆ ಯವರಿಗೆ ಕೋಟ ಹೋಬಳಿ ಶಾಖೆಯ ವತಿಯಿಂದ ನುಡಿನಮನ ಕಾರ್ಯಕ್ರಮ ಭಾನುವಾರ ಶ್ರೀದೇವಿ ಕಿರಣ್ ಕಾಂಪ್ಲೆಕ್ಸ್‌ನಲ್ಲಿ ಜರಗಿತು.

ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಂಜೀವ ಸಿ ಗುಂಡ್ಮಿ ನುಡಿನಮನ ಸಲ್ಲಿಸಿ ಸಂತೋಷ್ ಮೇಷ್ಟ್ರ ಮಾನವೀಯ ಕೆಲಸ ಕಾರ್ಯ ಗುಣನಡತೆ, ಪ್ರಾಮಾಣಿಕತೆ ಮತ್ತು ಸಮಾಜಮುಖಿ ದೃಷ್ಟಿಕೋನಗಳ ಬಗ್ಗೆ ಮಾತಾಡಿ ಅವರ ವ್ಯಕ್ತಿತ್ವದ ಗುಣಗಾನ ಮಾಡಿ ಮೃತರ ಆತ್ಮಕ್ಕೆ ಸದ್ಗತಿ ಕೋರಿದರಲ್ಲದೆ ಅವರ ಜೀವನದ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಲು ಸಭೆಯಲ್ಲಿ ತಿಳಿಸಿದರು.
ಇದೇ ವೇಳೆ ಮೃತರ ಸದ್ಗತಿಗಾಗಿ ಮೌನ ಪ್ರಾರ್ಥನೆ ಹಾಗೂ ಭಾವಚಿತ್ರಕ್ಕೆ ಪುಷ್ಭ ನಮನ ಸಲ್ಲಿಸಲಾಯಿತು.

ಸಭೆಯಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು,ಜಿಲ್ಲಾ ಸಂಘಟನಾ ಸಂಚಾಲಕರಾದ ಶಾಮಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ,ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು.ಬೆಟ್ಟಿನಮನೆ. ಕೋಟ ಹೋಬಳಿ ಶಾಖೆ ಸಂಚಾಲಕ ನಾಗರಾಜ ಪಡುಕರೆ, ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ,ಗೋಪಾಲ್ ಗಿಳಿಯಾರು ಬ್ರಹ್ಮಾವರ ತಾಲೂಕು ಸಂಘಟನಾ ಸಂಚಾಲಕ ವಿಜಯ ಗಿಳಿಯಾರು, ಕೋಟ ಹೋಬಳಿ ಶಾಖೆಯ ನಾಗೇಶ್ ಪಡುಕರೆ,ಸಕೇಶ್ ಬನ್ನಾಡಿ,ಮಹೇಶ್ ಕಾರ್ಕಡ,ಐತ ಕಾರ್ಕಡ,ಕೃಷ್ಣ ಪಿ.ಎಂ.ಇಂಡಿಕಾ ಕಲಾ ಬಳಗದ ಅಧ್ಯಕ್ಷ ಮಣೂರು ಜಯರಾಮ ಶೆಟ್ಟಿ,ಗಾಯಕ ರವಿ ಬನ್ನಾಡಿ ಉಪಸ್ಥಿತರಿದ್ದರು.

ಬಿ‌ಎಸ್‌ಎನ್ ಎಲ್ ಅಧಿಕಾರಿ ಪ್ರಭಾಕರ ಮಣೂರು ಕಾರ್ಯಕ್ರಮ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!