spot_img
Thursday, April 2, 2026
spot_img

ಆಲೂರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ಜೋಗಿ ಅವರಿಗೆ ಗುರುಶ್ರೀ ರಾಜ್ಯ ಪ್ರಶಸ್ತಿ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಸ್ವಾಮಿ ವಿವೇಕಾನಂದ ಚಿಂತನಶೀಲ ವಿಚಾರ ವೇದಿಕೆ ಸಾರಥ್ಯದ ವಿವೇಕ ಚೇತನ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ರಾಘವೇಂದ್ರ ಪ್ರಕಾಶನ ಸಹಯೋಗದಲ್ಲಿ ವಿವೇಕ ಚೇತನ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನೀಡುವ ಗುರುಶ್ರೀ ರಾಜ್ಯ ಪ್ರಶಸ್ತಿಗೆ ಬೈಂದೂರು ಶೈಕ್ಷಣಿಕ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ಜೋಗಿ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ರೆ ಗ್ರಾಮದ ಹರವರಿಯಲ್ಲಿ ಶ್ರೀ ಸರ್ವೋತ್ತಮ ಜೋಗಿ ಹಾಗೂ ಶ್ರೀಮತಿ ಪಾರ್ವತಿ ಜೋಗಿ ಯವರ ಸುಪುತ್ರನಾಗಿ ಜನಿಸಿರುವ ವೀರೇಂದ್ರ ಜೋಗಿ ಅವರು ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಬೈಂದೂರು ವಲಯ ಇಲ್ಲಿ ಕಳೆದ 12 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿ.ಎ.ಸಿ.ಪಿ.ಎಡ್ ಪದವೀಧರರಾಗಿರುವ ಇವರು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುತ್ತಾರೆ. ದಿನಾಂಕ 01-09-2007 ರಂದು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಗಂಡಿಬಾಗಿಲು, ಪುತ್ತೂರು ತಾಲೂಕು ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸಕ್ಕೆ ಸೇರ್ಪಡೆಗೊಂಡ ಇವರು ಆ ಶಾಲೆಯಲ್ಲಿ ಕ್ರೀಡಾ ವಿಭಾಗದಲ್ಲಿ ಹಲವಾರು ಮಕ್ಕಳನ್ನು ಸ್ಪರ್ಧಿಸುವಂತೆ ಮಾಡಿ ರಾಜ್ಯಮಟ್ಟದವರೆಗೆ ಅವರ ಪ್ರತಿಭೆಯನ್ನು ಅನಾವರಣಗೊಳಿದರು. ದಿನಾಂಕ 26.08.2013 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲೂರು ಇಲ್ಲಿ ವರ್ಗಾವಣೆಯಾದರು. ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ಕ್ರೀಡಾ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಇಲ್ಲದಿರುವ ಸಂದರ್ಭದಲ್ಲಿ ಇವರು ಈ ಶಾಲೆಗೆ ಬಂದ ನಂತರ ಹೋಬಳಿ ತಾಲೂಕು ಮಟ್ಟದಲ್ಲಿ ಸತತವಾಗಿ 6 ವರ್ಷ ಅಥ್ಲೆಟಿಕ್ಸ್ ನಲ್ಲಿ ಸಮಗ್ರ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಿದ್ದಾರೆ.
ರಾಜ್ಯಮಟ್ಟದಲ್ಲಿ ಸುಮಾರು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ತರಬೇತಿ ನೀಡಿರುವುದಲ್ಲದೆ ಎಚ್.ಸಿ.ಎಲ್ ಫೌಂಡೇಶನ್ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಇವರ ಶಾಲೆಯ ವಿದ್ಯಾರ್ಥಿ ನಿತೇಶ್, ಜೆ.ಪೂಜಾರಿ ಪದಕ ಪಡೆದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯನ್ನು ತಂದಿರುವುದು ಇವರ ಕ್ರೀಡಾ ತರಬೇತಿಗೆ ಸಾಕ್ಷಿಯಾಗಿದೆ.
ಇವರು ತರಬೇತಿ ನೀಡಿದ ವಿದ್ಯಾರ್ಥಿ ಸಚ್ಚಿದಾನಂದ ದೇವಾಡಿಗ ಪ್ಯಾರಾ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಲ್ಲಿ ಅನೇಕ ಪದಕಗಳನ್ನು ಗಳಿಸಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿರುತ್ತಾನೆ. ಇವರ ವಿದ್ಯಾರ್ಥಿಗಳು ತ್ರೋಬಾಲ್ ಪಂದ್ಯಾಟದಲ್ಲಿ ಸತತ ಮೂರು ಬಾರಿ ಜಿಲ್ಲಾ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಇವರು ತ್ರೋಬಾಲ್ ನಲ್ಲಿ ತರಬೇತಿಗೊಳಿಸಿದ ವಿದ್ಯಾರ್ಥಿಗಳು ಪ್ರೌಢಶಾಲೆ ಹಾಗೂ ಕಾಲೇಜು ಹಂತದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವುದು ಇವರ ಹಿರಿಮೆ.
ಇವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ತರಬೇತಿಯಿಂದ ಅನೇಕ ಕ್ರೀಡಾ ಸಾಧನೆಗಳನ್ನು ಗುರುತಿಸಿ ಶಾಸಕರ ಅನುದಾನದಿಂದ ಇವರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗೆ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಶ್ವತ 200 ಮೀಟರ್ ಟ್ರಾಕ್ ಅನ್ನು ನೀಡಿದ್ದಾರೆ.
ಶಿಕ್ಷಣ ಫೌಂಡೇಶನ್ ಕರ್ನಾಟಕ, ಉಡುಪಿ ಜಿಲ್ಲೆ ಇವರು ಕಳೆದ ಬಾರಿ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಉಡುಪಿ ಜಿಲ್ಲೆಯ ಏಕೈಕ ಕ್ರೀಡಾ ಸಾಧಕ ಶಾಲೆ ಎಂದು ತಿಳಿದು ಶಾಲೆಯ ಸುಮಾರು 105 ವಿದ್ಯಾರ್ಥಿಗಳಿಗೆ 1.50 ಲಕ್ಷ ರೂಪಾಯಿ ವೆಚ್ಚದಲ್ಲಿ ಕ್ರೀಡಾ ಸಮವಸ್ತ್ರ ಮತ್ತು ಶಾಲೆಗೆ ಅಗತ್ಯವಿರುವ ಕ್ರೀಡಾ ಪರಿಕರಗಳನ್ನು ನೀಡಿದ್ದಾರೆ.
ಪ್ರತಿ ವರ್ಷ ಪ್ರೇರಣೆ ಯುವ ವೇದಿಕೆ ನೈಕಂಬ್ಳಿ ಚಿತ್ತೂರು ಇವರು ನಡೆಸುವ ಬೈಂದೂರು ತಾಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಸತತ ಮೂರು ಬಾರಿ ಸಮಗ್ರ ತಂಡ ಪ್ರಶಸ್ತಿಯನ್ನು ಮೂಡಿಗೇರಿಸಿರುವುದು ಕ್ರೀಡೆಯಲ್ಲಿ ಮತ್ತೊಂದು ಸಾಧನೆಯಾಗಿದೆ.
ಈ ಶಾಲೆಯಲ್ಲಿ ವಿಭಾಗ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಹಲವಾರು ವಿದ್ಯಾರ್ಥಿಗಳು ಆಳ್ವಾಸ್ ನಂತಹ ಸಂಸ್ಥೆಯಲ್ಲಿ ಕ್ರೀಡಾ ಕೋಟಾದಡಿ ಉಚಿತ ಶಿಕ್ಷಣ ಪಡೆಯುತ್ತಿರುವುದು ಇವರ ಹಿರಿಮೆಗೆ ಇನ್ನೊಂದು ಗರಿಮೆ.
ತಾಲೂಕು ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟಗಳಲ್ಲಿ ಹಾಗೂ ಸಂಘ ಸಂಸ್ಥೆಗಳು ನಿರ್ವಹಿಸುವ ಕ್ರೀಡಾಕೂಟಗಳಲ್ಲಿ ಯಶಸ್ವಿ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ನಿರಂತರ ಕ್ರೀಡಾ ತರಬೇತಿಯ ಜೊತೆಗೆ ಇವರು ಚುನಾವಣಾ ಅಧಿಕಾರಿಯಾಗಿಯೂ ಚೆಕ್ ಪೋಸ್ಟ್  ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜೊತೆಗೆ ಬಿ. ಎಲ್.ಓ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಯಶಸ್ವಿ ನಿರೂಪಕರಾಗಿ, ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಇವರ ಕ್ರೀಡಾ ಸಾಧನೆಯನ್ನು ಗುರುತಿಸಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೈಂದೂರು, ರಾಮೇಶ್ವರ ಸ್ಪೋಟ್ರ್ಸ್ ಕ್ಲಬ್ ಅಲೂರು, ಬ್ರಾಹ್ಮಣ ಮಹಿಳಾ ಸಂಘ ಮಾರಣಕಟ್ಟೆ ಹಾಗೂ ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದಲ್ಲದೆ ತಮ್ಮ ಮಕ್ಕಳಿಗೂ ಕೂಡ ತರಬೇತಿ ನೀಡುವುದರ ಮೂಲಕ ತಮ್ಮ ಇಬ್ಬರು ಪುತ್ರಿಯರಾದ ಬೃಂದಾ ಮತ್ತು ತನ್ವಿ ಅವರು ಮೈಸೂರು ವಿಭಾಗ ಮಟ್ಟದ ಶೆಟ್ಲ್ ಬ್ಯಾಡ್ಮಿಂಟನ್, ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುವುದು ಗಮನಾರ್ಹ. ಇವರ ಸಾಧನೆಗೆ ಮುಖ್ಯ ಗುರುಗಳು ಮತ್ತು ಶಿಕ್ಷಕರ ವೃಂದ ಹಾಗೂ ಪುಷ್ಪಲತಾ ಅವರ ಸಹಕಾರವೂ ಪ್ರಮುಖವಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!