spot_img
Tuesday, March 31, 2026
spot_img

ಲಕ್ಷ್ಮೀ ಸೋಮ ಬಂಗೇರ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಭಿವಿನ್ಯಾಸ ಹಾಗೂ ಜೆನೆವಾ ಕನ್ವೆನ್ಷನ್ ದಿನಾಚರಣೆ

ಕೋಟ: ಲಕ್ಷ್ಮೀ ಸೋಮ ಬಂಗೇರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ೨೫ ಆಗಸ್ಟ್ ೨೦೨೫ ರಂದು ‘ಯುವ ರೆಡ್ ಕ್ರಾಸ್ ಅಭಿವಿನ್ಯಾಸ ಕಾರ್ಯಕ್ರಮ ಮತ್ತು ಜೆನೆವಾ ಕನ್ವೆನ್ಷನ್ ದಿನಾಚರಣೆ’ ಆಯೋಜಿಸಲಾಯಿತು.

ಉಡುಪಿ ಜಿಲ್ಲೆಯ ಭಾರತೀಯ ರೆಡ್ ಕ್ರಾಸ್ ಸಂಘದ ಕಾರ್ಯದರ್ಶಿ ಡಾ. ಗಣನಾಥ್ ಎಕ್ಕಾರ್ ಮತ್ತು ಕುಂದಾಪುರ ತಾಲ್ಲೂಕು ಶಾಖೆಯ ಅಧ್ಯಕ್ಷರು ಜಯಕರ ಎಸ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಜಯಕರ ಎಸ್. ಶೆಟ್ಟಿಯವರು ರಕ್ತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. “ರಕ್ತದ ಒಂದು ಘಟಕವು ಹಲವು ಜೀವಗಳನ್ನು ಉಳಿಸಬಹುದು. ತಂತ್ರಜ್ಞಾನ ಎಷ್ಟು ಮುಂದಾದರೂ, ರಕ್ತದ ಪರ್ಯಾಯವನ್ನು ನಾವು ಕಂಡು ಹಿಡಿಯಲು ಆಗಲಿಲ್ಲ” ಎಂದ ಅವರು, ಕುಂದಾಪುರ ರೆಡ್ ಕ್ರಾಸ್ ಸಂಘ ನಿರ್ವಹಣೆಯ ರಕ್ತಬ್ಯಾಂಕ್ ಕಳೆದ ಹಲವು ವರ್ಷಗಳಲ್ಲಿ ೫೦,೦೦೦ಕ್ಕೂ ಹೆಚ್ಚು ಘಟಕ ರಕ್ತ ಸಂಗ್ರಹಿಸಿ ೧,೦೦,೦೦೦ಕ್ಕೂ ಹೆಚ್ಚು ಜೀವಗಳನ್ನು ರಕ್ಷಿಸಿದೆ ಎಂದು ತಿಳಿಸಿದರು.

ಡಾ. ಗಣನಾಥ್ ಎಕ್ಕಾರ್, ರೆಡ್ ಕ್ರಾಸ್ ಘಟಕದ ಕಾರ್ಯ, ಉದ್ದೇಶಗಳು ಮತ್ತು ಜೆನೆವಾ ಕನ್ವೆನ್ಷನ್ನ ಪ್ರಾಮುಖ್ಯತೆಯನ್ನು ವಿವರಿಸಿದರು. ರೆಡ್ ಕ್ರಾಸ್ನ ಏಳು ಮೂಲಭೂತ ತತ್ವಗಳು ವ್ಯಕ್ತಿತ್ವ ಅಭಿವೃದ್ಧಿಗೆ ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಮುಂದೆ ತಮ್ಮ ವೃತ್ತಿಜೀವನದ ಜೊತೆಗೆ ಸಮಾಜ ಸೇವೆಗೆ ಸಹ ಪ್ರಾಮುಖ್ಯತೆ ನೀಡುವಂತೆ ಪ್ರೇರೇಪಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ಅಧ್ಯಕ್ಷೀಯ ನುಡಿಗಳನ್ನಾಡಿ, “ಉತ್ತಮ ಜೀವನವನ್ನು ಕೇವಲ ವಿದ್ಯಾಭ್ಯಾಸದಿಂದ ಅಳೆಯಲಾಗುವುದಿಲ್ಲ. ಇತರರ ಸೇವೆಯಲ್ಲಿ ಬದುಕುವವನು ನಿಜವಾಗಿಯೂ ಸಂಪೂರ್ಣ ಜೀವನವನ್ನು ಅನುಭವಿಸುತ್ತಾನೆ” ಎಂದರು. ಅವರು ಜಿಲ್ಲೆ ವ್ಯಾಪ್ತಿಯ ರೆಡ್ ಕ್ರಾಸ್ ಸಂಘದ ಸೇವೆಯನ್ನು ಮೆಚ್ಚಿ, ವಿದ್ಯಾರ್ಥಿಗಳನ್ನು ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಲು ಪ್ರೇರೇಪಿಸಿದರು.

ಕಾರ್ಯಕ್ರಮವನ್ನು ಕು. ಅಶ್ಲೇಷಾ ನಿರ್ವಹಿಸಿದರು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ರಾಮಚಂದ್ರ ಭಟ್ ಕೆ. ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ರಮೇಶ್ ಅಚಾರ್ ಐ ಕ್ಯೂ ಏ ಸಿ ಸಂಚಾಲಕರಾದ ಡಾ. ಸುಬ್ರಮಣ್ಯ ಎ., ಘಟಕದ ವಿದ್ಯಾರ್ಥಿ ನಾಯಕರು ಸೌಪರ್ಣಿ ಮತ್ತು ಪ್ರೀತಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!