spot_img
Monday, February 16, 2026
spot_img

ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ.,: ನೂತನ ಸಾಸ್ತಾನ ಶಾಖೆ ಉದ್ಘಾಟನೆ

ಸಾಸ್ತಾನ: ”ಸಹಕಾರ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘ ಸದಸ್ಯರಿಗೆ ಸಾಲ ಸೌಲಭ್ಯ, ಠೇವಣಿ ಸಂಗ್ರಹದಲ್ಲಿ ಗಮನಾರ್ಹವಾದ ಸಾಧನೆ ಮಾಡಿದೆ. ಯಶಸ್ಸಿನ ಮೆಟ್ಟಿಲೇರಲು ಸಾಧ್ಯವಿದೆ ಎಂಬುವುದನ್ನು ರಾಮಾಂಜನೇಯ ತೊರಿಸಿಕೊಟ್ಟಿದೆ. ಇನ್ನಷ್ಟು ಶಾಖೆಯನ್ನು ಈ ಸಂಸ್ಥೆ ತೆರೆಯಲಿ” ಎಂದು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಹೇಳಿದರು.

ಅವರು ಆ.20ರಂದು ಸಾಸ್ತಾನ ಗೋಳಿಗರಡಿ ರಸ್ತೆಯ ದಿವ್ಯಾ ಕಾಂಪ್ಲೆಕ್ಸ್‌ನಲ್ಲಿ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕೋಡಿ ಇದರ ಸಾಸ್ತಾನ ಶಾಖಾ ಕಛೇರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಾಂಜನೇಯ ಸಂಘದ ಅಧ್ಯಕ್ಷ ಶಂಭು ಪೂಜಾರಿ ವಹಿಸಿದ್ದರು. ವಿದ್ವಾನ್ ಡಾ. ವಿಜಯ ಮಂಜರು ಶುಭಾಶಂಶನೆಗೈದರು.

ಭದ್ರತಾಕೋಶವನ್ನು ಉದ್ಯಮಿ ಲಕ್ಷ್ಮೀನಾರಾಯಣ, ಗಣಕೀಕೃತ ಬ್ಯಾಂಕಿಂಗ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ್ ಎಸ್. ಕೆ, ಠೇವಣಿ ಪತ್ರವನ್ನು ಗೋಳಿಗರಡಿ ದೈವಸ್ಥಾನದ ಮುಖ್ಯಸ್ಥ ಜಿ.ವಿಠಲ್ ಪೂಜಾರಿ, ಆವರ್ತನ ಠೇವಣಿಯನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ನಿರಖು ಠೇವಣಿಪತ್ರವನ್ನು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಕೊರಗ ಪೂಜಾರಿ ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಸುರೇಶ್ ಅಡಿಗ, ಸಿ‌ಇ‌ಒ ವಿಜಯ ಪೂಜಾರಿ, ಕಟ್ಟಡದ ಮಾಲಿಕರಾದ ಉಮೇಶ್ ಪ್ರಭು, ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನಾಥ್ ಜಗನಾಥ ಶೆಟ್ಟಿ, ಸಿ‌ಇ‌ಒ ಲೋಹಿತ್ ಜಿ ಸಾಲಿಯಾನ್, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಕ.ರಾ.ಸೌ.ಸಂ.ಸ. ನಿ ಬೆಂಗಳೂರು ವಿಜಯ ಬಿ.ಎಸ್, ಕೋಡಿ ಮಾಧವ ಉಪಾಧ್ಯ, ವೇದಮೂರ್ತಿ ಸುಬ್ರಹ್ಮಣ್ಯ ಭಟ್, ಋಷಿಕುಮಾರ್ ಮಯ್ಯ, ವಿಶ್ವೇಶ್ವರ ಚಡಗ, ಶಿವ ಎಸ್ ಕಕೇರ, ಗೋಪಾಲ ಎ ಮೆಂಡನ್, ಡಾ.ಹೇಮಂತ್ ಕುಮಾರ್, ಡಾ. ಕರುಣಾಕರ, ಆನಂದ್ ಆಶಿತಾ ಎಂಟರ್‌ಪ್ರೈಸಸ್, ಗೋಳಿಗರಡಿ ಕ್ಷೇತ್ರದ ಪಾತ್ರಗಳಾದ ಜಿ.ಶಂಕರ್ ಪೂಜಾರಿ, ವಿಠಲ್ ಪೂಜಾರಿ ಐರೋಡಿ, ಸುರೇಶ್ ಕುಂದರ್, ಅನಿಲ್, ನಂದಿನಿ, ಸರಿತಾ, ಗಿರೀಶ್ ಪೈ ಬಿ., ಪ್ರತಾಪ್ ಶೆಟ್ಟಿ, ಎಮ್.ಸಿ.ಚಂದ್ರಶೇಖರ, ರೊನಾಲ್ಡ್ ಅಂದ್ರಾದೆ, ವೆಂಕಟೇಶ್ ಪೈ. ಜಿಲ್ಲೆಯ ವಿವಿಧ ಸೌಹಾರ್ದ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಮಹಾಬಲ ಕುಂದರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೆರಾ, ಸಂಘದ ನಿರ್ದೇಶಕರು, ಸಿಬ್ಬಂದಿಗಳ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!