spot_img
Friday, April 3, 2026
spot_img

ಆ.24ರಂದು ವಂಡ್ಸೆಯಲ್ಲಿ ‘ಯಕ್ಷಹೆಜ್ಜೆ’ ಅದ್ದೂರಿಯ ಯಕ್ಷಗಾನ | ಜನ್ಸಾಲೆ-ಪಟ್ಲ ಗಾನ ಸಾರಥ್ಯ | ಪಾರಿಜಾತ-ಯಾಜ್ಞಸೇನೆ

ಕುಂದಾಪುರ: ಆಶೀರ್ವಾದ್ ಫ್ರೆಂಡ್ಸ್ ಅಬ್ಬಿ ಹರವರಿ, ವಂಡ್ಸೆ ಇವರ ಆಯೋಜನೆಯಲ್ಲಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಟಾನ ಹಾಗೂ ತೆಂಕು-ಬಡಗು ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ ಇವರ ಸಾರಥ್ಯದಲ್ಲಿ ಯಕ್ಷ ಹೆಜ್ಜೆ ವಂಡ್ಸೆ ಉಪಾಧ್ಯಾಯರ ಗದ್ದೆಯಲ್ಲಿ ಆಗಸ್ಟ್ 24 ರವಿವಾರ ಸಂಜೆ 4 ಗಂಟೆಯಿಂದ ಪಾರಿಜಾತ-ಯಾಜ್ಞಸೇನೆ ಎನ್ನುವ ಪ್ರಸಂಗದ ಅದ್ದೂರಿಯ ಪ್ರದರ್ಶನ ನಡೆಯಲಿದೆ.
ಪಾರಿಜಾತ ಪ್ರಸಂಗದಲ್ಲಿ ಭಾಗವತರು- ಪ್ರಸನ್ನ ಭಟ್ ಬಾಳ್ಕಲ್, ಮಧುಕರ ಹೆಗಡೆ, ಮದ್ದಳೆಯಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆಯಲ್ಲಿ ಶಿವಾನಂದ ಕೋಟ ಸಾಥ್ ನೀಡಲಿದ್ದಾರೆ.
ಪಾತ್ರವರ್ಗದಲ್ಲಿ ಶ್ರೀಕೃಷ್ಣನಾಗಿ ಕಡಬಾಳ ಉದಯ ಹೆಗಡೆ, ನರಕಾಸುರ-ತೊಂಬಟ್ಟು ವಿಶ್ವನಾಥ ಆಚಾರ್ಯ, ಸತ್ಯಭಾಮೆ-ಸುಧೀರ್ ಉಪ್ಪೂರು, ದೇವೇಂದ್ರ-ಕಾರ್ತಿಕ್ ಕೆ.ಜಿ., ನಾರದ-ಪುರಂದರ ಮೂಡ್ಕಣಿ, ಸಖ-ರವೀಂದ್ರ ದೇವಾಡಿಗ ಕಮಲಶಿಲೆ, ಸಖಿ-ಹೆಂಗವಳ್ಳಿ ಪಾತ್ರ ನಿರ್ವಹಿಸಲಿದ್ದಾರೆ.
ಯಾಜ್ಞಸೇನೆ ಪ್ರಸಂಗದಲ್ಲಿ ತೆಂಕುxಬಡಗು ಸಂಯೋಜನೆಯಲ್ಲಿ ವಿಶಿಷ್ಟವಾಗಿ ಮೂಡಿ ಬರಲಿದೆ. ಉಭಯ ತಿಟ್ಟುಗಳ ಬಹುಬೇಡಿಕೆಯ ಭಾಗವತರುಗಳ ಗಾನ ಸಾರಥ್ಯದಲ್ಲಿ ರಂಗದ ಬಿಸಿ ಏರಲಿದೆ. ಹಿಮ್ಮೇಳದಲ್ಲಿ ಭಾಗವತರು-ಜನ್ಸಾಲೆ ರಾಘವೇಂದ್ರ ಆಚಾರ್ಯ, ಪಟ್ಲ ಸತೀಶ್ ಶೆಟ್ಟಿ, ಮದ್ದಳೆಯಲ್ಲಿ ಶಶಾಂಕ್ ಆಚಾರ್ಯ, ಗುರುಪ್ರಸಾದ್, ಚಂಡೆಯಲ್ಲಿ ಪ್ರಜ್ವಲ್ ಮುಂಡಾಡಿ, ಕೌಶಿಕ್ ರಾವ್ ಪುತ್ತಿಗೆ ಸಾಥ್ ನೀಡಲಿದ್ದಾರೆ.
ಪಾತ್ರವರ್ಗದಲ್ಲಿ ಅರ್ಜುನ-ಜಲವಳ್ಳಿ ವಿದ್ಯಾದರ ರಾವ್, ಭೀಮ-ಸುಬ್ರಾಯ ಹೊಳ್ಳ ಕಾಸರಗೋಡು, ದ್ರೌಪದಿ-ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಸೌಭದ್ರೆ-ನೀಲ್ಕೊಡು ಶಂಕರ ಹೆಗಡೆ, ಕೃಷ್ಣ-ವಿಶ್ವನಾಥ ಹೆನ್ನಾಬೈಲು, ಮನ್ಮಥ-ಕಣ್ಣಿಮನೆ, ಬಲರಾಮ-ಮಾಗೋಡು, ನಾರದ ಮೂಡ್ಕಣಿ, ಈಶ್ವರ-ಮರಾಠೆ, ಪಾರ್ವತಿ-ಪುರುಷೊತ್ತಮ ಸಾಗರ ಕಾಣಿಸಿಕೊಳ್ಳಲಿದ್ದಾರೆ.
ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿದ್ದು ಮಳೆಗಾಲದಲ್ಲಿ ಬಹುಬೇಡಿಕೆಯ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿಯ ಯಕ್ಷಹೆಜ್ಜೆಗೆ ಅಣಿಯಾಗುತ್ತಿದ್ದೇವೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರಾದ ಮಹೇಶ್ ಗಾಣಿಗ, ವಿಜಯ್ ಪೂಜಾರಿ, ಸಂದೀಪ್ ಪೂಜಾರಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!