spot_img
Friday, April 3, 2026
spot_img

ರೋಯಲ್ ಕ್ಲಬ್ ಕುಂದಾಪುರ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ 29ನೇ ವರ್ಷದ ರಕ್ತದಾನ ಶಿಬಿರ

ಕುಂದಾಪುರ: 79ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರೋಯಲ್ ಕ್ಲಬ್ (ರಿ) ಕುಂದಾಪುರ ಇದರ ನೇತೃತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತ ನಿಧಿ ಕುಂದಾಪುರ, ಜೆಸಿ‌ಐ ಕುಂದಾಪುರ, ಮಾರ್ಕೆಟ್ ಬಾಯ್ಸ್ ಕುಂದಾಪುರ ಇವರೊಂದಿಗೆ 29ನೇ ವರ್ಷದ ರಕ್ತದಾನ ಶಿಬಿರ ನೆರವೇರಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ಅಧಿಕಾರಿಗಳು, ಹಾಗೂ ಜೇಸಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಸ್ಥೆ ವತಿಯಿಂದ 41 ಯುನಿಟ್ ರಕ್ತವನ್ನು ಸಂಗ್ರಹಿಸಿ ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾಯಿತು.

ಈ ಸಂದರ್ಭದಲ್ಲಿ ೨೫ಕ್ಕೂ ಅಧಿಕ ಬಾರಿ ರಕ್ತದಾನ ನೀಡಿದ ಜಗದೀಶ್ ಕೆ., ಶ್ರೀನಿವಾಸ ರಾವ್, ರಮೇಶ್ ಹೊಬ್ಳಿದಾರ್, ಪ್ರಕಾಶ್ ಎನ್., ಶಂಕರ್ ಕಂಚುಗಾರ್, ಪ್ರಕಾಶ್ ಕೆ., ಚಂದ್ರ ವಿ., ರತ್ನಾಕರ ಮಕ್ಕಿಮನೆ, ಸಂತೋಷ್ ಮಾಣಿ ಮನೆ ಇವರನ್ನು ಸನ್ಮಾನಿಸಲಾಯಿತು. ರೋಯಲ್ ಕ್ಲಬ್ಬಿನ ಅಧ್ಯಕ್ಷ ಪ್ರಮೋದ್ ಕುಮಾರ್, ಕಾರ್ಯದರ್ಶಿ ಪ್ರಶಾಂತ ಮೊಗವೀರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!