spot_img
Wednesday, February 18, 2026
spot_img

ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಸ್ವಾಗತ ಗೋಪುರದ ಲೋಕಾರ್ಪಣೆ 

ಹಾಲಾಡಿ: ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜು.26 ಶನಿವಾರ ಶ್ರೀ ದೇವರಿಗೆ ದೃಢ ಸಂಪ್ರೋಕ್ಷಣೆ ಮತ್ತು ದ್ರವ್ಯ ಕಲಶಾಭಿಷೇಕ ಸೇವೆ ನಡೆಯಿತು. ನಂತರ ಹಾಲಾಡಿ ದಿ.ರಾಮಚಂದ್ರ ಕಿಣಿಯವರ ಸ್ಮರಣಾರ್ಥ ಅವರ ಮರಿಮಕ್ಕಳು ಸೇವಾರೂಪವಾಗಿ ನಿರ್ಮಿಸಿಕೊಟ್ಟಿರುವ ಸ್ವಾಗತ ಗೋಪುರದ ಲೋಕಾರ್ಪಣೆಯನ್ನು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಜೋತಿಷ್ಯ ವಿದ್ವಾನ್ ವಾಸುದೇವ ಜೋಯಿಸರು, ಕುಂದಾಪುರದ ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಾಲಾಡಿ ಕಿಣಿ ಕುಟುಂಬದ ಅಣ್ಣಯ್ಯ ಕಿಣಿ, ಮುರುಳಿದರ ಕಿಣಿ, ವಸಂತ ಕಿಣಿ, ರಾಮಚಂದ್ರ ಕಿಣಿಯವರು ದೀಪ ಪ್ರಜ್ವಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಶೇಖರ ಶೆಟ್ಟಿ, ಗೌರವ ಉಪಾಧ್ಯಕ್ಷರಾದ ಎಂ ವಿವೇಕ ಮಿತ್ಯಾಂತ. ದೇವಸ್ಥಾನದ ಅರ್ಚಕರಾದ ಭಾಸ್ಕರ ಅಡಿಗ, ಹಾಲಾಡಿ ನರೇಶ್ ರಾಮದಾಸ ಕಿಣಿ, ಲೆಕ್ಕ ಪರಿಶೋಧಕರಾದ ಅರುಣ್ ಶೆಟ್ಟಿ ಜವಳಿಜಡ್ಡು, ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ದಿನಕರ ತೋಳಾರ್ ಮತ್ತು ಸದಸ್ಯರು ಮತ್ತು ಸೌಡ ಮೆಟ್ಕಲ್ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಮತ್ತು ಸದಸ್ಯರು. ಎಂ. ಸುಧೀರ್ ರಾವ್, ದೀಪಕ್ ಶೆಟ್ಟಿ, ವಿದ್ಯಾನಂದ ಮಿತ್ಯಾಂತ, ರಮೇಶ ಭಟ್, ಅಕ್ಷಯ ಅಡಿಗ, ರವೀಂದ್ರ ಶೆಟ್ಟಿ, ಕಿರಣ್ ರಾಜ್ ಶೆಟ್ಟಿ, ಸುಬ್ರಹ್ಮಣ್ಯ ಆಚಾರ್ಯ, ಸಂತೋಷ ಶೆಟ್ಟಿ, ಹಾಲಾಡಿ, ಉಮೇಶ ಆಚಾರ್ಯ, ಶ್ರೀಕಾಂತ ಆಚಾರ್ಯ, ಶಂಕರ ಶೆಟ್ಟಿ, ಸುರೇಶ ಭಟ್, ನಾಗೇಶ ಹಾಲಾಡಿ, ಆನಂದ ಶೆಟ್ಟಿ, ರಾಮ ಕುಲಾಲ್, ಆದಿತ್ಯ ಅಡಿಗ, ಚಂದ್ರಶೇಖರ ಶೆಟ್ಟಿ, ರಾಘು ಆಟೋ, ಮೋಹನ್ ಜಮದಗ್ನಿ, ರಾಜೇಶ್ ನಾಯ್ಕ, ಗೌತಮ ಆಚಾರಿ ಸೇರಿದಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀ ಲಕ್ಷ್ಮೀನರಸಿಂಹ ಗೆಳೆಯರ ಬಳಗದ ಸದಸ್ಯರು, ಜಮದಗ್ನಿ ಕ್ರಾಸ್‌ನ ಆಟೋ ಮಾಲಕರು ಮತ್ತು ಗ್ರಾಮಸ್ಥರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಸೂರ್ಯಪ್ರಕಾಶ ದಾಮ್ಲೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!