spot_img
Saturday, March 7, 2026
spot_img

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಮಾದಕ ದ್ರವ್ಯ ಮುಕ್ತ ಜಾಗೃತ ಕಾರ್ಯಕ್ರಮ”

ಬಸ್ರೂರು: ಸ್ಥಳೀಯ ಪೊಲೀಸ್ ಅಧಿಕಾರಿಯದ ಶಂಕರ್ ಎಸ್ ಐ ಕಂಡ್ಲೂರು ಇವರು ವಿದ್ಯಾರ್ಥಿಗಳನ್ನು ಕುರಿತು ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ನಿರ್ದೇಶನದ ಮೂಲಕ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು. ಹಾಗೆಯೇ ಪ್ರತಿಯೊಬ್ಬರೂ ವಾಹನವನ್ನು ಚಲಾಯಿಸಲು ಲೈಸೆನ್ಸ್ ಅನ್ನು ಹೊಂದಬೇಕು ಹಾಗೆ ಹೆಲ್ಮೆಟ್ ಇಲ್ಲದೆ ಗಾಡಿಯನ್ನು ಚಲಾಯಿಸುವುದು ಅಪರಾಧ ಪ್ರತಿಯೊಬ್ಬರೂ ಕೂಡ ವಾಹನ ಚಲಾಯಿಸುವಾಗ ಹೆಲ್ಮೆಟ್ ಅನ್ನು ಧರಿಸಲೇಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳ ಜೀವನದಲ್ಲಿ ಡ್ರಗ್ಸ್ ಸೇವನೆಯಿಂದ ಉಂಟಾದ ತೊಂದರೆಗಳ ಬಗ್ಗೆ ನಿರ್ದೇಶನದ ಮೂಲಕ ವಿವರಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಯಾವುದು ಉತ್ತಮ ಸ್ಪರ್ಶ ಯಾವುದು ಕೆಟ್ಟ ಸ್ಪರ್ಶ ಎಂದು ಪ್ರಾಯೋಗಿಕವಾಗಿ ತಿಳಿಸಿದರು. ವಿದ್ಯಾರ್ಥಿ ಸಹಾಯವಾಣಿ ಉಪಯೋಗ ಮತ್ತು ವಿದ್ಯಾರ್ಥಿ ಸಹಾಯವಾಣಿ ನಂಬರ್ ಅನ್ನು ನೀಡಿದರು ವಿದ್ಯಾರ್ಥಿಗಳಿಗೆ ಯಾರಿಂದಲ್ಲಾದರೂ ಯಾವುದಾದರೂ ರೀತಿಯ ತೊಂದರೆ ಉಂಟಾದರೆ ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂದು ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಸಂತೋಷ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಕುರಿತು “ಶಾಲೆಯಲ್ಲಿ ಶಿಕ್ಷೆ ಕಡಿಮೆಯಾದ ಕಾರಣ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು” ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ರೇಷ್ಮಾ ಅಡಪ ಶಿಕ್ಷಕ /ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲರಾದ ವನಿತಾ ಅವರು ಸಂಪೂರ್ಣ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!