spot_img
Saturday, March 7, 2026
spot_img

ಸಾಹಿತ್ಯದಿಂದ ವ್ಯಕ್ತಿತ್ವ ವಿಕಸನ- ಗಣೇಶ್ ಸಿ.ಗುನುಗ

‌ಕುಂದಾಪುರ: ಸಾಹಿತ್ಯವನ್ನು ಓದಬೇಕು, ಅದರ ಸನ್ನಿವೇಶದ ಆಹ್ಲಾದಕರ ವಾತಾವರಣವನ್ನು ಸವಿಯಬೇಕು. ಆಗ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತದೆ ಎಂದು ಸ್ವರ್ಣ ನೂಪುರ ಯಕ್ಷಗಾನ ಮಂಡಳಿ ಕುಂದಾಪುರದ ವ್ಯವಸ್ಥಾಪಕರಾದ ಗಣೇಶ್ ಸಿ.ಗುನುಗರವರು ಅಭಿಪ್ರಾಯ ಪಟ್ಟರು.

‌‌ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಸಾಹಿತ್ಯದ ಭಾವನೆ ನಮ್ಮ ಹೃದಯವನ್ನು ಮುಟ್ಟುತ್ತದೆ. ನಮ್ಮನ್ನು ಸುಸಂಸ್ಕೃತ ಲೋಕಕ್ಕೆ ಕರೆದೊಯ್ಯುತ್ತದೆ ಎಂದು ಹೇಳಿದರು.

ಅತಿಥಿಗಳಾದ ಬಡಗುತಿಟ್ಟಿನ ಭಾಗವತರಾದ ನಾಗೇಂದ್ರ ಅಡಿಗರವರು ಯಕ್ಷಗಾನ ವಿದ್ಯಾರ್ಥಿಗಳಿಗೆ ಭಾಷಾ ಪ್ರೌಢಿಮೆಯ ಜೊತೆಗೆ ಸಭಾ ಕಂಪನವನ್ನು ದೂರ ಮಾಡುತ್ತದೆ ಎಂದರು ಹಾಗೂ ಯಕ್ಷಗಾನದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳ ಮನಗೆದ್ದರು.

ಶಾಲಾ ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗರವರು ಮಕ್ಕಳು ಕಥೆ, ಕವನ, ಕಾದಂಬರಿಗಳನ್ನು ಓದಬೇಕು ಅದರಿಂದ ನಮ್ಮ ನಡತೆಯಲ್ಲಿ ಬದಲಾವಣೆ ಕಂಡು ಬರುತ್ತದೆ ಎಂದರು.

‌‌ ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ರಾವ್ ರವರು ಸಾಹಿತ್ಯ ನಮ್ಮೊಳಗಿನ ಭಾವ- ಭಾವನೆಗಳಿಗೆ ಅಕ್ಷರ ರೂಪ ನೀಡಿ ಓದುಗರ ಮನಸ್ಸಿಗೆ ಆನಂದದ ಜೊತೆಗೆ ಮುನ್ನಡೆವ ದಾರಿಗೆ ದಾರಿ ದೀಪ ವಾಗುತ್ತದೆ ಎಂದು ಹೇಳಿ ಸ್ವರಚಿತ ಕವನ ವಾಚನ ಮಾಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯ ವಹಿಸಿ ಸಾಹಿತ್ಯ ನಮ್ಮನ್ನು ತಿದ್ದಿ ತೀಡುತ್ತದೆ. ನಮ್ಮ ತಪ್ಪಿನ ಅರಿವನ್ನು ಮೂಡಿಸುತ್ತದೆ. ಸುಂದರ ಬದುಕಿನ ಕಲ್ಪನೆಯನ್ನು ಮಾಡುತ್ತದೆ ಎಂದು ಹೇಳಿದರು.

‌‌ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶಶಿಧರ್ ದೇವಾಡಿಗ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಪಲ್ಲವಿ ಮಯ್ಯ ,ಸಾಹಿತ್ಯ ಸಂಘದ ನಿರ್ದೇಶಕರಾದ ಸುಭೀಕ್ಷಾ ಮೇಡಂ ಮತ್ತು ನಳಿನಿ ಎಂ ರಾವ್, ಅಮಿತಾ ಮೇಡಂ, ಸೌರಭ ಮೇಡಂ ವಿದ್ಯಾರ್ಥಿ ನಾಯಕಿ ವೈಷ್ಣವಿ, ಸಾಂಸ್ಕೃತಿಕ ಕಾರ್ಯದರ್ಶಿ ಝಾಯಿನ್, ಸಾಹಿತ್ಯ ಸಂಘದ ಅಧ್ಯಕ್ಷ ಸಚ್ಚಿದಾನಂದ ಭಟ್, ಕಾರ್ಯದರ್ಶಿ ಶಾಂಭವಿ ಎಂ ಭಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹಕ್ಕಿ ಹಾರುತಿದೆ ನೋಡಿದಿರಾ ಮತ್ತು ಸಂಕಲ್ಪ ಗೀತೆ ಎಂಬ ಪಠ್ಯ ಪುಸ್ತಕದ ಕವನಕ್ಕೆ ನರ್ತಿಸಿದರು ಮತ್ತು ಒಂಭತ್ತನೇ ತರಗತಿಯ ‘ಅಧಿಕಾರ’ ಎಂಬ ಪಾಠವನ್ನು ನಾಟಕ ಪ್ರದರ್ಶನ ಮಾಡಿದರು.

ಅದಿತಿ ಪ್ರಾರ್ಥಿಸಿದರು, ಶಿಕ್ಷಕಿ ಸುಭೀಕ್ಷಾ ಸ್ವಾಗತಿಸಿದರು, ಶಿಕ್ಷಕಿ ನಳಿನಿ ವಂದಿಸಿದರು, ಶಿಕ್ಷಕಿಯರಾದ ಅಮಿತಾ ಮತ್ತು ಸೌರಭ ಅತಿಥಿ ಗಣ್ಯರನ್ನು ಪರಿಚಯಿಸಿದರು, ವಿದ್ಯಾರ್ಥಿನಿಯರಾದ ಧನ್ವಿ ಆರ್ ಮಯ್ಯ ಮತ್ತು ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!