spot_img
Sunday, March 8, 2026
spot_img

ಕುಂದಾಪ್ರ ಕನ್ನಡದ ಮೌಲ್ಯವನ್ನು ಎತ್ತರಕ್ಕೇರಿಸಿದವರು ಮೊಗೆಬೆಟ್ಟು-ಡಾ.ಜಗದೀಶ್ ಶೆಟ್ಟಿ

ತೆಕ್ಕಟ್ಟೆ:ಕುಂದಗನ್ನಡ ದಿನಾಚರಣೆಯನ್ನು ವಿಶ್ವವ್ಯಾಪಿಯಾಗಿ ಆಚರಿಸಲಾಗುತ್ತಿರುವುದು ಸ್ವಾಗತಾರ್ಹ. ಯಶಸ್ವಿ ಕಲಾವೃಂದ ಕೊಮೆ ಸಂಸ್ಥೆಯು ಪ್ರಥಮ ಕುಂದಾಪ್ರ ಕನ್ನಡ ದಿನಾಚರಣೆಯಿಂದ ಮೊದಲ್ಗೊಂಡು ಈವರೆಗೂ ಪ್ರತೀ ವರ್ಷವೂ ಆಚರಿಸುತ್ತಿರುವುದು ಗಮನಾರ್ಹ ಸಂಗತಿ, ಶ್ಲಾಘ್ಯಾಯೋಗ್ಯ ವಿಚಾರವೂ ಹೌದು. ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಬಹು ಕ್ಲಿಷ್ಠವಾದ ಕುಂದಾಪ್ರ ಕನ್ನಡ ಸಾಹಿತ್ಯವನ್ನು ಯಕ್ಷಗಾನದಲ್ಲಿ ಛಂದೋಬದ್ಧವಾಗಿ ರಚಿಸುತ್ತಾ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದರು. ಬಾಲ್ಯದಿಂದಲೂ ಕುಂದಾಪ್ರ ಕನ್ನಡದ ಬಗೆಗಿನ ಅತೀವ ಆಪ್ತತೆಯನ್ನು ಸಾಹಿತ್ಯಾತ್ಮಕವಾಗಿ ಬಿಂಬಿಸಿ ಭಾಷೆಯ ಮೌಲ್ಯವನ್ನು ಎತ್ತರಕ್ಕೇರಿಸಿದವರು ಮೊಗೆಬೆಟ್ಟು ಎಂದು ಪ್ರಸಿದ್ಧ ಸಂಘಟಕ ಡಾ. ಜಗದೀಶ್ ಶೆಟ್ಟಿ ಪ್ರಸಾದರನ್ನು ಅಭಿನಂದಿಸಿ ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಜುಲೈ 27ರಂದು ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ಕುಂದಾಪ್ರ ಕನ್ನಡದ ದಿನಾಚರಣೆಯ ಅಂಗವಾಗಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ರಾಜಿ ರಂಗ ತಾಳಮದ್ದಳೆಯಲ್ಲಿ ಪ್ರಸಾದರನ್ನು ಅಭಿನಂದಿಸಿ ಮಾತನ್ನಾಡಿದರು.

ಕುಂದಾಪ್ರ ಕನ್ನಡ ನಮ್ಮೆಲ್ಲರ ಮಾತೃಭಾಷೆ. ಎಳೆಯ ವಯಸ್ಸಿನಲ್ಲಿಯೇ ಅತ್ಯಂತ ಪ್ರೀತಿಯಿಂದ ಕೋಳಿಪಡೆ ರಂಗ ಯಕ್ಷಗಾನವನ್ನು ಬರೆದಾಗ ಅಪಾರ ಜನ ಮೆಚ್ಚುಗೆಗೆ ಪಾತ್ರವಾಯಿತು. ಇದೀಗ ಕುಂದಾಪ್ರ ಕನ್ನಡ ದಿನಾಚರಣೆ ಆರಂಭದಿಂದಲೂ ಪ್ರತೀ ವರ್ಷವೂ ನನ್ನ ಕೈ ಬರಹದ ಪ್ರತಿಯನ್ನೇ ಕೈಗೆತ್ತಿಕೊಂಡು ಅತ್ಯಂತ ಮುತುವರ್ಜಿಯಿಂದ ಪ್ರಸಿದ್ಧ ಕಲಾವಿದರ ಗಡಣವನ್ನೇ ಕುಂದಾಪ್ರ ಕನ್ನಡದ ಪ್ರಸಂಗದ ಅರ್ಥಕ್ಕೆ ಇಳಿಸಿದ್ದು ಸಂಸ್ಥೆಯ ಸಾಹಸವೇ ಸರಿ ಎಂದು ಅಭಿನಂದನೆ ಸಲ್ಲಿಸಿಕೊಂಡ ಪ್ರಸಾದ್ ಮೊಗೆಬೆಟ್ಟು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸತೀಶ್ ಶೆಟ್ಟಿ ಮೂಡಬಗೆ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಕೊಮೆ ಶನೇಶ್ವರ ದೇಗುಲದ ಅಧ್ಯಕ್ಷ ಗಣೇಶ್ ಅಮೀನ್ ಕೊಮೆ, ಸುಧಾ ಕದ್ರಿಕಟ್ಟು, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ನಾಗರತ್ನ ಜಿ. ಹೇರ್ಳೆ ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ವಂದಿಸಿದರು. ಬಳಿಕ ಮೊಗೆಬೆಟ್ಟು ವಿರಚಿತ ಯಕ್ಷಗಾನ ತಾಳಮದ್ದಳೆ ರಾಜಿ ರಂಗ ಪ್ರದರ್ಶನಗೊಂಡಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!