spot_img
Friday, April 3, 2026
spot_img

ಬೈಂದೂರು ಬಂಟರ ಸಂಘದ ಮೂವತ್ತರ ಸಂಭ್ರಮದ ಸಾಧಕ ಪ್ರಶಸ್ತಿ: ಸಾಧಕರ ಪಟ್ಟಿ ಪ್ರಕಟ

ಬೈಂದೂರು: ಬೈಂದೂರು ಬಂಟರ ಸಂಘದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಇದೇ ತಿಂಗಳ 27ನೇ ತಾರೀಖಿನಂದು ಹೆಮ್ಮಾಡಿ ಜೈ ಶ್ರೀ ಸಭಾಭವನದಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತರ ಸಾಧನೆ ಮಾಡಿದ 18 ಜನರನ್ನು ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಆ ದಿನ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಚಲನಚಿತ್ರ ಕ್ಷೇತ್ರದಲ್ಲಿ ಚಿತ್ರನಟ ರಿಷಬ್ ಶೆಟ್ಟಿ, ರಾಷ್ಟ್ರೀಯ ಉತ್ತಮ ಚಲನಚಿತ್ರ ನಟ ಪ್ರಶಸ್ತಿ ಪುರಸ್ಕೃತರು, ಸಾಹಿತ್ಯ ಕ್ಷೇತ್ರದಲ್ಲಿ ಕಂದಾವರ ರಘುರಾಮ ಶೆಟ್ಟಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಪ್ರಸಂಗಕರ್ತರು, ಧಾರ್ಮಿಕ ಕ್ಷೇತ್ರದಲ್ಲಿ ಅರುಣ್ ಕುಮಾರ್ ಶೆಟ್ಟಿ ಗುಡ್ಡಮ್ಮಾಡಿ, ಸಮಾಜ ಸೇವೆಯಲ್ಲಿ ಬಿ.ಎನ್ ಶೆಟ್ಟಿ ಬಗ್ವಾಡಿ, ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಕರ್ನಾಟಕ ಸರಕಾರ, ಸಹಕಾರಿ ಕ್ಷೇತ್ರದಲ್ಲಿ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು, ವೈದ್ಯಕೀಯ ಕ್ಷೇತ್ರ ಡಾ. ಅತುಲ್ ಕುಮಾರ್ ಶೆಟ್ಟಿ, ಬಹುರೂಪಿ ಸಮಾಜ ಸೇವೆ-ಕೆರಾಡಿ ಚಂದ್ರಶೇಖರ್ ಶೆಟ್ಟಿ, ಜನ ಮೆಚ್ಚಿದ ಗುತ್ತಿಗೆದಾರರು-ಸೂರ್ಯಣ್ಣ ಶೆಟ್ಟಿ ಪಡುವರಿ, ಪಶು ವೈದ್ಯಕೀಯ ಕ್ಷೇತ್ರ-ಡಾ.ಅರುಣ್ ಕುಮಾರ್ ಶೆಟ್ಟಿ ಕರ್ಕಿ, ಜನಾನುರಾಗಿ ಅಭಿಯಂತರರು-ರವೀಂದ್ರನಾಥ ಶೆಟ್ಟಿ ಬಾಳೆಕೆರೆ, ದಂತ ವೈದ್ಯಕೀಯ ಕ್ಷೇತ್ರ-ಡಾ. ರಾಜ ಮೋಹನ್ ಶೆಟ್ಟಿ ಯಡ್ತರೆ, ವಿಜ್ಞಾನ ಮತ್ತು ಸಂಶೋಧನೆ-ಡಾ. ದಿನೇಶ್ ಶೆಟ್ಟಿ ಕೂಡ್ಲು.

ಯುಪಿ‌ಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ-ಇಂದ್ರಚಿತ್ರ ಶೆಟ್ಟಿ ಬೊಳಂಬಳ್ಳಿ, ಉದಯ ಶೆಟ್ಟಿ ಆಲೂರು-ಬೆಲ್ತೂರು ನಾಗಯ್ಯ ಶೆಟ್ಟಿ ಉತ್ತಮ ಶಿಕ್ಷಕ ಪ್ರಶಸ್ತಿ, ಸೂರ್ಯ ನಮಸ್ಕಾರದಲ್ಲಿ ಗಿನ್ನಿಸ್ ದಾಖಲೆ ನಿರಂಜನ್ ಶೆಟ್ಟಿ ತಲ್ಲೂರು, ಮಂಡಲ್ ಆರ್ಟ್ ನಲ್ಲಿ ಕಲಾಮ್ಸ್ ವಲ್ಡ್ ರೆಕಾರ್ಡ್ ಭುವನ ಎ ಶೆಟ್ಟಿ ಅರೆಹೊಳೆ, ಯಕ್ಷಗಾನ ಕ್ಷೇತ್ರ- ಸಂಜೀವ ಶೆಟ್ಟಿ ಅರೆಹೊಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಚಾರ್ಟೆಡ್ ಅಕೌಂಟೆಂಟ್-ಸುದೇಶ್ ಕುಮಾರ್ ಶೆಟ್ಟಿ ಮೇಲ್ ಗಾಯಾಡಿ ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!