spot_img
Sunday, February 15, 2026
spot_img

ಧಾರಾಕಾರ ಮಳೆಯ ನಡುವೆಯೂ ಮರವಂತೆ ಕರ್ಕಾಟಕ ಅಮಾವಾಸ್ಯೆ ಜಾತ್ರೆಯ ಸಂಭ್ರಮ

ಜನಪ್ರತಿನಿಧಿ ವಾರ್ತೆ] ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಇಂದು (ಜು.24) ವಿಜೃಂಭಣೆಯಿಂದ ನೆರವೇರಿತು. ಮಳೆಗಾಲದಲ್ಲಿ ನಡೆಯುವ ಈ ಜಾತ್ರೆಗೆ ನಾಡಿನ ವಿವಿಧೆಡೆಯಿಂದ ಜನಸಾಗರವೇ ಹರಿದು ಬಂತು. ಈ ಬಾರಿಯಂತೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಕೂಡಾ ಮಳೆಯನ್ನು ಲೆಕ್ಕಿಸದೇ ಭಕ್ತರ ದಂಡೇ ಹರಿದು ಬಂತು. ಕಳೆದ ಮೂರ್‍ನಾಲ್ಕು ದಿನಗಳಿಂದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕರ್ಕಾಟಕ ಅಮಾವಾಸ್ಯೆಯ ಇಂದು ಧೋ ಎಂದು ಮಳೆ ಸುರಿಯುತ್ತಿತ್ತು. ಈ ಮಳೆಯಲ್ಲಿಯೇ ಮರವಂತೆಗೆ ಜನಸಂಧೋಹ ಹರಿದುಬಂತು,

ಸರದಿ ಸಾಲಿನಲ್ಲಿ ಭಕ್ತಾಧಿಗಳು ದೇವರ ದರ್ಶನ, ಪೂಜೆ ಇತ್ಯಾದಿಗಳನ್ನು ಸಲ್ಲಿಸಿದರು. ಭಕ್ತರಿಗೆ ಸೇವಾರ್ಥಿಗಳ ಮೂಲಕ ಚಿತ್ರಾನ್ನ, ಪಾಯಸ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮರವಂತೆ ಜಾತ್ರೆಯ ಸಂದರ್ಭದಲ್ಲಿ ಸಮುದ್ರ ಸ್ನಾನಕ್ಕೆ ವಿಶೇಷ ಮಹತ್ವ ಇತ್ತು. ಸಮುದ್ರದಲ್ಲಿ ಸ್ನಾನ ಮಾಡಿ ಬಳಿಕ ಸೌಪರ್ಣಿಕ ನದಿಯಲ್ಲಿ ಸ್ನಾನ ಮಾಡಬೇಕು ಎನ್ನುವ ನಂಬಿಕೆ ಇದೆ. ಆದರೆ ಈ ಬಾರಿ ಸಮುದ್ರದ ಅಬ್ಬರ ಜಾಸ್ತಿಯಿತ್ತು. ಹಾಗಾಗಿ ಸಮುದ್ರದ ನೀರನ್ನು ಪ್ರೋಕ್ಷಿಸಿಕೊಳ್ಳಲು ಹಾಗೂ ಸಮುದ್ರದ ಅಲೆ ಸ್ಪರ್ಶ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಒಂದೇ ಕಡೆಯಲ್ಲಿ ಮಾತ್ರ ಸಮುದ್ರಕ್ಕಿಳಿಯಲು ಅವಕಾಶ ಕಲ್ಪಿಸಲಾಗಿತ್ತು. ಸಮುದ್ರಕ್ಕಿಳಿಯುವ ಭಕ್ತಾದಿಗಳ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಪೊಲೀಸರು, ಸ್ವಯಂ ಸೇವಕರು ಸಮುದ್ರದ ತೀರದಲ್ಲಿ ಕಟ್ಟೇಚ್ಚರ ವಹಿಸಿದ್ದರು.

ಮಳೆಯ ಅಬ್ಬರಕ್ಕೆ ಸೌಪರ್ಣಿಕೆ ಕೂಡಾ ತುಂಬಿ ಹರಿಯುತ್ತಿದ್ದು ದೇವಸ್ಥಾನ ಮೆಟ್ಟಿಲು ತನಕ ನೀರು ಹರಿಯುತ್ತಿತ್ತು. ಪ್ರವಾಹ ಹೆಚ್ಚಿದ್ದರಿಂದ ನದಿಗಿಳಿಯಲು ಭಕ್ತರಿಗೆ ಅವಕಾಶ ನೀಡಲಿಲ್ಲ.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜೇಶ ಹೆಬ್ಬಾರ್, ಸದಸ್ಯರಾದ ನರಸಿಂಹ ಅಡಿಗ, ಸುರೇಶ ಬಿ., ನಾಗವೇಣಿ ಪ್ರಭಾಕರ, ಸುಶೀಲಾ ಎಸ್.ಮೆಂಡನ್, ಲಕ್ಷ್ಮಣ ಪೂಜಾರಿ, ಗಣೇಶ ಪೂಜಾರಿ, ಗೋಪಾಲ ದೇವಾಡಿಗ, ಹೆಚ್.ಅನುಕುಮಾರ್ ಶೆಟ್ಟಿ, ದೇವಸ್ಥಾನದ ಅರ್ಚಕರು, ಉಪಾದಿವಂತರು, ನೌಕರರು, ಸ್ವಯಂಸೇವಕರು ಜಾತ್ರೆಯ ಯಶಸ್ಸಿನಲ್ಲಿ ಶ್ರಮಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!