spot_img
Sunday, February 15, 2026
spot_img

‘ಸ್ವರ್ಣ ನೂಪುರ’ ಮೂರರ ಸಡಗರ- 2025

ಕುಂದಾಪುರ: ಸ್ವರ್ಣನೂಪುರ ಯಕ್ಷಗಾನ ಕಲಾ ಮಂಡಳಿಯ ಯಕ್ಷ ಕಿನ್ನರ ಸಂಭ್ರಮದ ‘ರಂಗ ತಾರ ಚಂದ್ರಮ‘ ವೆಂಬ ಮೂರನೆಯ ವರ್ಷದ ವಾರ್ಷಿಕ ಸಮಾರಂಭ ಹಂಗಳೂರಿನ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಜು.20ರಂದು ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಆದರ್ಶ ಹೆಬ್ಬಾರ್ ಆವರು ಮಾತನಾಡಿ, ಮಕ್ಕಳಲ್ಲಿ ಕನ್ನಡ ಸಾಹಿತ್ಯ ಸಂಪನ್ನತೆ, ಪುರಾಣ ಪುಣ್ಯ ಕತೆಗಳ ಧನಾತ್ಮಕ ಜ್ಞಾನವನ್ನು ಹೆಚ್ಚಿಸುವಲ್ಲಿ ಯಕ್ಷಗಾನವು ಅಗ್ರಸ್ಥಾನವನ್ನು ಪಡೆದಿದೆ ಎಂದು ಪ್ರೇರಣಾತ್ಮಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶ್ರೀಕಾಂತ್ ಗುನಗ ರವರು ಮಾತನಾಡಿ, ಪೌರಾಣಿಕ ಪಾತ್ರಗಳಲ್ಲಿ ಪರಾಕಾಯ ಪ್ರವೇಶ ಮಾಡಿ, ಎದುರಿಗೆ ಕುಳಿತ ಪ್ರೇಕ್ಷಕರನ್ನು ಮೈ ನವಿರೇಳಿಸು ವಂತಹ ಅದ್ಬುತ ಶಕ್ತಿ ಯಕ್ಷಗಾನ ಕಲಾವಿದರಿಗೆ ಭಗವಂತನ ಕೊಡುಗೆ ಎಂದರು.

ಕಲಾ ಮಂಡಳಿಯ ಸಂಸ್ಥಾಪಕ ಗಣೇಶ ಗುನಗಾ ಪ್ರಸ್ತಾವಿಕ ಮಾತುಗಳನ್ನಾಡಿ, ನನ್ನೊಳಗಿನ ಕನಸಿಗೆ ಜೀವ ತುಂಬಿದ ಹೆತ್ತವರು, ಮಡದಿ ಹಾಗೂ ಕುಟುಂಬದವರು, ನನ್ನ ಗುರಿಗೆ ಗುರುವಾದ ವಿಘ್ನೇಶ್ ದೇವಾಡಿಗ, ಗರಿಯಾದ ಮಕ್ಕಳೇ ನನ್ನ ಜೀವಾಳ ಎಂದರು.

ಹವ್ಯಾಸಿ ಭಾಗವತ ರಾಜೇಶ್ ಕರ್ಕೇರಾ ದಂಪತಿಗಳಿಗೆ “ಸ್ವರ್ಣ ನೂಪುರ ಪ್ರಶಸ್ತಿ ೨೦೨೫ “, ಪ್ರದಾನ ಮಾಡಲಾಯಿತು.
ಸತತ ಸ್ವರ್ಣ ನೂಪುರದ ಭಾಗವತರೆಂದೇ ಜನಪ್ರಿಯತೆ ಗಳಿಸಿದ ಪೂಜಾ ಅವರಿಗೆ ತಂದೆಯವರೇ ಪೇಟ ಕಟ್ಟುವುದರ ಮೂಲಕ ಕುಟುಂಬ ಸಮ್ಮಿಳಿತದ ಸ್ವರ್ಣ ಗಾನವಿಬಿರುದನ್ನಿತ್ತು ಗೌರವಿಸಿದರು.

ಸ್ವರ್ಣ ನೂಪುರದ ಭುಜಕ್ಕೆ ಭುಜ ಕೊಟ್ಟು ಸರ್ವ ಕಾರ್ಯಗಳಲ್ಲಿ ತನ್ನ ಬೆಂಬಲವನ್ನು ನೀಡಿದ ಕೇಶವ ಕೈಪಾಡಿ, ದಂಪತಿಗಳನ್ನು ಅಭಿನಂದಿಸಲಾಯಿತು.

ಯಕ್ಷನಕ್ಷತ್ರ ಕಿರಾಡಿ ಟ್ರಸ್ಟ್ ಪ್ರವರ್ತಕರಾದ ಪ್ರಕಾಶ್ ಮೊಗವೀರ ಕಿರಾಡಿಯವರಿಗೆ ’ಧವಳ ಗೆಜ್ಜೆ’, ಯನ್ನು ನೀಡುವುದರ ಮೂಲಕ ಗೌರವಿಸ ಲಾಯಿತು. ಕಾರ್ಯಕ್ರಮದ ರೂವಾರಿ ವಿಘ್ನೇಶ್ ದೇವಾಡಿಗ, ಯಕ್ಷಗಾನ ಪ್ರಸಂಗಕರ್ತೆ ಶಾಂತಾ ವಾಸುದೇವ ಪೂಜಾರಿ ಹಾಗೂ ವಿದ್ಯಾರ್ಥಿನಿ ಕುಮಾರಿ ಶಲಿತಾ ರವರ ಅಭಿಮಾನದ ನುಡಿ ದೋರಣದಲ್ಲಿ ಗಣೇಶ ಗುನಗಾ ದಂಪತಿಗಳು ಗುರುವಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಡ್ಯುಯಲ್ ಸ್ಟಾರ್ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿಗಳಾದ ಪ್ರಕಾಶ್ ಆಚಾರ್ಯ ವಡ್ಡರ್ಸೆ, ಶ್ರೀ ಶನೇಶ್ವರ ದೇವಸ್ಥಾನದ ಧರ್ಮದರ್ಶಿ ಗಳಾದ ಅಣ್ಣಯ್ಯ ಪೂಜಾರಿ, ವಾಸ್ತು ತಜ್ಞರು ಹಾಗೂ ಪ್ರಸಂಗಕರ್ತರು, ಬಸವರಾಜ್ ಶೆಟ್ಟಿಗಾರ್, ರಾಜಾಜಿ ನಗರದ ಶ್ರೀ ಗುರು ಕಾರುಣ್ಯ, ಪ್ಯಾಷನ್ ಡಿಸೈನರ್ ರವಿಕುಮಾರ್, ಆನಗಳ್ಳಿ, ಹಾಗೂ ಉದ್ಯಮಿಗಳಾದ ಕೃಷ್ಣ ಪೂಜಾರಿ ಚಕ್ರಮಕ್ಕಿ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.

ಅನಿತಾ ಗಣೇಶ್ ಗುನಗ ಸ್ವಾಗತಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!