spot_img
Monday, March 16, 2026
spot_img

ಉಡುಪಿ ಜಿಲ್ಲೆಯ 106ನೇ ಸರಕಾರಿ ಪ್ರೌಢಶಾಲೆಯಾಗಿ ‘ಸರ್ಕಾರಿ ಪ್ರೌಢಶಾಲೆ ಮೆಟ್ಟಿನಹೊಳೆ’ ಉದ್ಘಾಟನೆ

ಬೈಂದೂರು: ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಹೊಳೆಯು ಪ್ರೌಢಶಾಲೆಯಾಗಿ ಅಧಿಕೃತವಾಗಿ ಚಾಲನೆಯನ್ನು ಪಡೆಯಿತು. ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಊರವರ ನಿರಂತರ ಪರಿಶ್ರಮದಿಂದ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯು ಪ್ರೌಢಶಾಲೆಯಾಗಿ ರೂಪುಗೊಳ್ಳಲು ಸಾಧ್ಯವಾಯಿತು ಎಂದು ಹೇಳಿದ ಅವರು, ಇದಕ್ಕಾಗಿ ಶ್ರಮಿಸಿದ ನಿವೃತ್ತ ಬ್ಯಾಂಕ್ ಅಧಿಕಾರಿ ಆನಂದ ಶೆಟ್ಟಿ ನಿರಂತರವಾಗಿ ಆರ್ಥಿಕ ಸಹಾಯವನ್ನು ನೀಡುತ್ತಿರುವ ಉದ್ಯಮಿ ಜಯಶೀಲ ಶೆಟ್ಟಿ ಮತ್ತು ಮೂಕಾಂಬಿಕಾ ದೇವಳದ ಧರ್ಮದರ್ಶಿ ಮಹಾಲಿಂಗ ನಾಯ್ಕ ಇವರ ಕೊಡುಗೆಗಳನ್ನು ಶ್ಲಾಘಿಸಿದರು.

ಪ್ರೌಢಶಾಲೆಯನ್ನು ಉದ್ಘಾಟಿಸಿದ ಉದ್ಯಮಿ ಜಯಶೀಲ ಶೆಟ್ಟಿ ಅವರು, ಊರಿನ ಪ್ರಗತಿಯಲ್ಲಿ ಇದೊಂದು ಮೈಲಿಗಲ್ಲು ಆಗಿದೆ. ಶಾಲೆಯ ಬೆಳವಣಿಗೆಗೆ ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ಕರೆ ನೀಡಿದರು.

ಸಂಸ್ಥೆಯ ಸ್ಥಾಪಕ ಪ್ರಭಾರ ಮುಖ್ಯೋಪಾಧ್ಯಾಯರಾದ ಕರುಣಾಕರ ಶೆಟ್ಟಿ ಪೋಷಕರ ವಿಶ್ವಾಸವನ್ನು ಗಳಿಸಿ ಬಹಳ ಒಳ್ಳೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ದೃಷ್ಟಿಕೋನದಿಂದ ಶಾಲೆಗೆ ಉತ್ತಮ ಬುನಾದಿಯನ್ನು ನಿರ್ಮಿಸಿರುವುದಾಗಿ ತಿಳಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಿಕ್ಕಯ್ಯ ಶೆಟ್ಟಿ, ಡಯಟ್ ಉಡುಪಿಯ ಪ್ರಾಂಶುಪಾಲರಾದ ಡಾ.ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ವಿಜಯ ಕುಮಾರ್ ಶೆಟ್ಟಿ, ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಚೇರ್ಮನ್ ಸುಬ್ರಮಣ್ಯ ಮೆಟ್ಟಿನಹೊಳೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ್ ದೇವಾಡಿಗ,ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಮಾ ಬಿ. ಎನ್.ದಾನಿಗಳಾದ ಸೀತಾರಾಮ ಕುಲಾಲ್, ನಾಕಟ್ಟೆ ತೇಜಪ್ಪ ಶೆಟ್ಟಿ, ರವಿರಾಜ್ ಶೆಟ್ಟಿ ಅಲ್ಸಾಡಿ, ಉದಯ್ ಶೆಟ್ಟಿ, ಶಶಿಧರ ಶೆಟ್ಟಿ, ಸುಧಾಕರ ಶೆಟ್ಟಿ, ಕಿರಣ್ ಶೆಟ್ಟಿ ಕಡಾಟೆ, ಗ್ರಾ.ಪಂ.ಸದಸ್ಯರಾದ ಶೇಖರ್ ಶೆಟ್ಟಿ, ಶಾರದಾ ಕುಲಾಲ್, ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಚಂದು ಕುಲಾಲ್, ಮಾದಯ್ಯ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಕುಲಾಲ್ (ವಿಟೂ), ಕುಲಾಲರ ಸಂಘದ ಸುರೇಶ್ ಕುಲಾಲ್ ಪರಮನಮನೆ ಉಪಸ್ಥಿತರಿದ್ದರು.

ಪ್ರೌಢ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಕರುಣಾಕರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಜುದ್ದೀನ್ ದಾನಿಗಳ ವಿವರ ನೀಡಿದರು. ಶಿಕ್ಷಕಿ ಸುನಂದಾ ಮತ್ತು ಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು. ರಾಜೀವ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!