spot_img
Thursday, March 19, 2026
spot_img

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ  ವಿಶ್ವ ಬಾಲ ಕಾರ್ಮಿಕ  ಪದ್ಧತಿ ವಿರೋಧಿ ದಿನಾಚರಣೆ: ಕಾನೂನು ಅರಿವು ಕಾರ್ಯಕ್ರಮ

ಕುಂದಾಪುರ : ಜೂನ್  12 ರಂದು  ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ( ರಿ ). ಅಭಿಯೋಗ ಇಲಾಖೆ, ತಾಲೂಕು ಆಡಳಿತ ಹಾಗೂ ಕಾರ್ಮಿಕ ಇಲಾಖೆ ಕುಂದಾಪುರ, ಇವರ  ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು  ಕಾರ್ಯಕ್ರಮ  ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು.
    ಕುಂದಾಪುರದ ಹೆಚ್ಚುವರಿ  ಸಿವಿಲ್ ನ್ಯಾಯಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಗಳಾದ  ಶ್ರೀಮತಿ ಶ್ರುತಿ ಶ್ರೀ.ಎಸ್   ಕಾರ್ಯಕ್ರಮವನ್ನು ಉದ್ಘಾಟಿಸಿ, ನೀವು ವಾಸಿಸುಸುತ್ತಿರುವ ಸುತ್ತ ಮುತ್ತಲಿನ  ಪ್ರದೇಶದಲ್ಲಿ  ಯಾವುದೇ ಬಾಲ ಕಾರ್ಮಿಕರು ಕಂಡು ಬಂದಲ್ಲಿ  ಪೋಷಕರಿಗೆ  ಮತ್ತು ಮಾಲೀಕರಿಗೆ   ತಿಳಿವಳಿಕೆಯನ್ನು ನೀಡಿ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವಂತೆ ಪ್ರೇರೇಪಿಸಿ ಹಾಗೂ ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆ ಕುರಿತು ಸಂಪೂರ್ಣ ವಾಗಿ ಮಾಹಿತಿ ನೀಡಿದರು.
 ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್ ನ ಕಾರ್ಯದರ್ಶಿ ಗಳಾದ  ಕೆ ರಾಧಾಕೃಷ್ಣ ಶೆಣೈ ವಹಿಸಿದ್ದರು.
ವೇದಿಕೆಯಲ್ಲಿ ಕುಂದಾಪುರದ ಉಪ ತಹಶೀಲ್ದಾರರಾದ ಮಲ್ಲಿಕಾರ್ಜುನ, ವಕೀಲರ ಸಂಘದ ಅಧ್ಯಕ್ಷ ರಾದ  ಶಿರಿಯಾರ  ಗೋಪಾಲಕೃಷ್ಣ ಶೆಟ್ಟಿ, ಸಹಾಯಕ ಸರಕಾರಿ ಅಭಿಯೋಜಕರಾದ  ಉದಯಕುಮಾರ್ ಬಿ ಎ, ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ  ಸುಜಯ್ ಕೋಟೆಗಾರ್, ಶ್ರೀ ವೆಂಕಟರಮಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ  ಶ್ರೀ ಕೃಷ್ಣ ಅಡಿಗ, ಕಾರ್ಮಿಕ ನಿರೀಕ್ಷಕರಾದ  ವಿಜೇಂದ್ರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗಿಳಿಯಾರು  ಪ್ರಕಾಶ್ ಚಂದ್ರ ಶೆಟ್ಟಿ   ಉಪಸ್ಥಿತರಿದ್ದರು.
 ಮುಖ್ಯೋಪಾಧ್ಯಯರಾದ ಶ್ರೀ ಕೃಷ್ಣ ಅಡಿಗ ಸ್ವಾಗತಿಸಿದರು, ಕಾರ್ಮಿಕ ನಿರೀಕ್ಷಕರಾದ ವಿಜೇಂದ್ರ ವಂದಿಸಿ, ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಉಪರಪ್ರಾಂಶುಪಾಲರಾದ ಸುಜಯ್ ಕೋಟೆಗಾರ್ ಪ್ರತಿಜ್ಞಾವಿಧಿ ಬೋಧಿಸಿದರು, ಶ್ರೀ ವೆಂಕಟರಮಣ ಸಂಸ್ಥೆಯ ಸಂಯೋಜಕ ಶಿಕ್ಷಕ ರವೀಂದ್ರ ಪೂಜಾರಿ  ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!