spot_img
Monday, March 16, 2026
spot_img

ಉಡುಪಿ ಬಿಜೆಪಿಗೆ ನೂತನ ಅಧ್ಯಕ್ಷರಾಗಿ ಕುತ್ಯಾರು ನವೀನ್ ಶೆಟ್ಟಿ ನೇಮಕ

ಜನಪ್ರತಿನಿಧಿ (ಉಡುಪಿ) : ರಾಜ್ಯ ಬಿಜೆಪಿ 10 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಈ ಸಂಬ0ಧಿಸಿದ0ತೆ ಚುನಾವಣಾಧಿಕಾರಿ ಕ್ಯಾ. ಗಣೇಶ್ ಕಾರ್ಣಿಕ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಕುತ್ಯಾರು ನವೀನ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.

ದೇಶದಾದ್ಯಂತ ಬಿಜೆಪಿ ಸಂಘಟನೆಯನ್ನು ಬಲಗೊಳಿಸುವುದಕ್ಕೆ ಸಂಕಲ್ಪ ಮಾಡಿದ್ದು, ಇದರ ಭಾಗವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ 10 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ. ಆಯ್ಕೆಯಾದ ಹತ್ತು ನೂತನ ಅಧ್ಯಕ್ಷರಿಗೆ ಚುನಾವಣಾಧಿಕಾರಿ ಕ್ಯಾ. ಗಣೇಶ್ ಕಾರ್ಣಿಕ್ ಅಭಿನಂದನೆ ಸಲ್ಲಿಸಿದ್ದಾರೆ.

ನೂತನ ಅಧ್ಯಕ್ಷರ ವಿವರ :
ಉಡುಪಿ – ಕುತ್ಯಾರು ನವೀನ್ ಶೆಟ್ಟಿ
ಮೈಸೂರು ಗ್ರಾಮಾಂತರ – ಕೆಎನ್ ಸುಬ್ಬಣ್ಣ
ಹಾಸನ – ಸಿದ್ದೇಶ್ ನಾಗೇಂದ್ರ
ಕೊಡಗು – ರವಿ ಕಾಳಪ್ಪ
ದಾವಣಗೆರೆ – ಎನ್ ರಾಜಶೇಖರ್
ಹಾವೇರಿ – ವಿರೂಪಾಕ್ಷಪ್ಪ ಬಳ್ಳಾರಿ
ಚಿತ್ರದುರ್ಗ – ಕೆ.ಟಿ ಕುಮಾರಸ್ವಾಮಿ
ತುಮಕೂರು – ಎಚ್.ಎಸ್.ರವಿಕುಮಾರ್
ಮಧುಗಿರಿ – ಚಿದಾನಂದ ಗೌಡ
ಚಿಕ್ಕಬಳ್ಳಾಪುರ – ಎಸ್.ವಿ. ರಾಮಚಂದ್ರ ಗೌಡ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!