spot_img
Tuesday, March 17, 2026
spot_img

ತೆಕ್ಕಟ್ಟೆ ಯಶಸ್ವಿ ಕಲಾಕೆಂದ್ರದಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ

ತೆಕ್ಕಟ್ಟೆ: ಸನಾತನ ಧರ್ಮದಲ್ಲಿ ಸತ್ಕಾರ್ಯಗಳೆಲ್ಲವಕ್ಕೂ ಮನ್ನಣೆ ಇದೆ. ಪ್ರತೀ ಮನೆ ಮನೆಗಳ ಒಂದೊಂದು ಮಗುವಿನ ಹೃದಯದಲ್ಲೂ ಕಲೆ ಇರುತ್ತದೆ. ಹಲವು ಮಕ್ಕಳು ಜನ್ಮತಃ ಕಲಾವಿದರಾಗಿರುತ್ತಾರೆ. ಅವರನ್ನು ಹೊರ ಪ್ರಪಂಚಕ್ಕೆ ತೋರಿಸುವುದಕ್ಕೆ ಇಂತಹ ಸಂಸ್ಥೆ ಬೇಕು, ಗುರುಗಳು ಬೇಕು. ಅನೇಕ ಮಕ್ಕಳನ್ನು ಕಲಾ ಪ್ರಪಂಚಕ್ಕಾಗಿ ತಯಾರಿ ಮಾಡುವಲ್ಲಿ ಸಂಸ್ಥೆಯ ಸ್ವಾರ್ಥ ಇರುವುದಿಲ್ಲ. ಗುರುಗಳಿಗೆ ಯಾವುದೇ ನಿರೀಕ್ಷೆ ಇರುವುದಿಲ್ಲ. ಕೇವಲ ಕಲೆ ಬೆಳೆಯಬೇಕೆಂಬುದಷ್ಟೇ ಆಗಿರುತ್ತದೆ. ಸಂಸ್ಥೆ ಅನೇಕ ಶಿಷ್ಯರನ್ನು ಹೊಂದಿ ಇನ್ನಷ್ಟು ಬೆಳೆಯಲಿ ಎಂದು ಶ್ರೀ ಶಾರದಾ ಪೀಠಂ ಶೃಂಗೇರಿಯ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಲೋಗೇಶ ಅಡಿಗರು ಹೇಳಿದರು.

ಜೂನ್ 1ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಯಕ್ಷಗಾನ ಕೇಂದ್ರದ ಆರು ತಿಂಗಳುಗಳ ಕಾಲದ ಯಕ್ಷಗಾನದ ತರಗತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದರು.

ಪ್ರಾಚಾರ್ಯ ಕೆ.ಪಿ. ಹೆಗಡೆ ತರಗತಿಯನ್ನು ಮಕ್ಕಳಿಗೆ ಕೋರೆ ತಾಳ ಹೇಳಿಕೊಡುವ ಮೂಲಕ ಉದ್ಘಾಟಿಸಿ ಮಾತನ್ನಾಡಿ ಒಂದು ತರಗತಿ ಕೇಂದ್ರವನ್ನು ನಡೆಸುವುದು ಬಹಳ ಕಷ್ಟ ಎನ್ನುವುದು ತಿಳಿದವರಿಗಷ್ಟೇ ಗೊತ್ತು. ಸಂಸ್ಥೆಗೆ ಬೆನ್ನೆಲುಬಾಗಿ ಗುರುಗಳು, ಶಿಷ್ಯರೂ ಜೊತೆಯಾದಾಗ ಸಂಸ್ಥೆ ಮುಂದುವರಿಯಲು ಸಾಧ್ಯ. ಶಿಷ್ಯರ ಏಳ್ಗೆಯೊಂದೇ ಗುರಿಯಾಗಿಸಿಕೊಂಡು ಶ್ರಮಿಸಿದರೆ ಪ್ರತಿಫಲ ಸುಲಭ ಸಾಧ್ಯ. ಇತ್ತೀಚೆಗೆ ಯಶಸ್ವೀ ಕಲಾವೃಂದ ಅನೇಕ ಶಿಷ್ಯರನ್ನು ಹೊಂದಿ ಬೆಳೆಯುತ್ತಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.

ಯಕ್ಷಗಾಭಿಮಾನಿ ಆಂಡ್ರು ಡಿ ಸಿಲ್ವ ಮಾತನ್ನಾಡಿ, ಯಾವುದೇ ಧರ್ಮ, ಜಾತಿ ಬೇಧಗಳೆನ್ನುವುದು ಕಲೆಗಿಲ್ಲ. ಎಲ್ಲವರೂ ಕಲೆತು, ಕಲಿಕೆಗಾಗಿ ಸೇರುವ ಕೇಂದ್ರವಿದು ಎನ್ನುವದನ್ನು ಹತ್ತಿರದಿಂದ ತಿಳಿದವನು ನಾನು ಎಂದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಹೊಸ ಹೊಸ ಮುಖಗಳು ಯಕ್ಷಗಾನಕ್ಕೆ ಒಲವು ತೋರಿ ಕಲಿಯುವಂತಾಗಲಿ ಎಂದರು.

ಲಂಬೋದರ ಹೆಗಡೆ ಶಿಸ್ತು ಸಂಯಮದಿಂದ ಉಳಿದರೆ ಕಲೆಯು ಬೇಗ ಒಲಿಯುತ್ತದೆ ಎಂದರು. ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕು| ಪಂಚಮಿ ವೈದ್ಯ, ಕು| ಹರ್ಷಿತ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಪರಿಣಿತ ವೈದ್ಯ ಸ್ವಾಗತಿಸಿ, ಆರಭಿ ಹೆಗಡೆ ವಂದಿಸಿದರು. ಬಳಿಕ ವಿದ್ಯಾರ್ಥಿಗಳು ತಾಳಾಭ್ಯಾಸದಲ್ಲಿ ನಿರತರಾಗಿ ಸಹಕರಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!